ಸಮಂತಾ.. ದಿಶಾ.. ಕೃತಿ ಇವರ್ಯಾರು ಅಲ್ಲ.. ಈ ಟಾಲಿವುಡ್ ಸುಂದರಿಯೇ ಪುಷ್ಪಾ 2 ಐಟಂ ಸಾಂಗ್ಗೆ ಸ್ಟೆಪ್ ಹಾಕೋದು!
Pushpa 2 Item Song: ಸುಕುಮಾರ್ ನಿರ್ದೇಶನದ ಮತ್ತು ಅಲ್ಲು ಅರ್ಜುನ್ ಅಭಿನಯದ `ಪುಷ್ಪ ದಿ ರೈಸ್`, ಚಿತ್ರದ ಯಶಸ್ಸಿನ ನಂತರ.. ಇದೀಗ ಎರಡನೇ ಭಾಗದ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ಇದೇ ವೇಳೆ ಈ ಸಿನಿಮಾದ ಐಟಂ ಸಾಂಗ್ ಕುರಿತು ಚರ್ಚೆ ಶುರುವಾಗಿದೆ..
Pushpa 2: ಸ್ಟಾರ್ ಐಕಾನ್ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾ ಬಿಡುಗಡೆಯಾದ ನಂತರ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡು.. ಸುಮಾರು 500 ಕೋಟಿ ಗಳಿಸಿತ್ತು.. ಈ ಚಿತ್ರಕ್ಕಾಗಿ ನಟ ಅಲ್ಲು ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದು ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಮೊದಲ ತೆಲುಗು ಚಿತ್ರರಂಗದ ನಟ ಎನಿಸಿಕೊಂಡರು...
ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಎದುರು ಶ್ರೀ ವಲ್ಲಿ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ಅವರ ಸಾಮಿ ಹಾಡಿನಿಂದ ಹಿಡಿದು ಶ್ರೀ ವಲ್ಲಿ ಹಾಡಿನವರೆಗೆ ಎಲ್ಲವನ್ನೂ ಅಭಿಮಾನಿಗಳು ಮೆಚ್ಚಿಕೊಂಡಿದ್ದರು, ಆದರೆ ಸಮಂತಾ ಒಂದೇ ಒಂದು ಐಟಂ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು..
ಇದನ್ನೂ ಓದಿ-ರಾಮಮಂದಿರ ಉದ್ಘಾಟನೆಯಂದೇ ಧ್ರುವ ಮಕ್ಕಳ ನಾಮಕರಣ: ರಾಮಾಯಣಕ್ಕೆ ಹೊಂದಿದ ಹೆಸರಿಟ್ಟ ಸರ್ಜಾ ಫ್ಯಾಮಿಲಿ!
ಇದೇ ರೀತಿ ಮುಂದುವರೆದ ಭಾಗದಲ್ಲಿಯೂ ಐಟಂ ಸಾಂಗ್ ಇರಲಿದ್ದು.. ಸಮಂತಾ ಮಯೋಸಿಟಿಸ್ ಸಮಸ್ಯೆಯಿಂದ ಅವಕಾಶ ನಿರಾಕರಿಸಿದ್ದಾರೆ ಎನ್ನಲಾಗಿತ್ತು.. ಹಾಗಾಗಿ ಎರಡನೇ ಭಾಗದಲ್ಲಿ ಐಟಂ ಸಾಂಗ್ ಗೆ ಯಾರು ಕುಣಿಯುತ್ತಾರೆ ಎಂಬ ನಿರೀಕ್ಷೆ ದೊಡ್ಡ ಮಟ್ಟದಲ್ಲಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ 22ರ ಹರೆಯದ ಯುವ ನಟಿ ಅವಕಾಶ ಪಡೆದುಕೊಂಡಿದ್ದಾರೆ..
ಆಕೆ ಬೇರೆ ಯಾರೂ ಅಲ್ಲ.. ಸದ್ಯ ತೆಲುಗು ಚಿತ್ರರಂಗದಲ್ಲಿ ಸೆನ್ಸೇಷನಲ್ ನಟಿಯಾಗಿರುವ ಶ್ರೀ ಲೀಲಾ.. ಹೌದು ಹಲವು ಯಂಗ್ ಹೀರೋಗಳು ಹಾಗೂ ನಾಯಕ ನಟರೊಂದಿಗೆ ಜೋಡಿಯಾಗಿ ನಟಿಸುತ್ತಿರುವ ಟಾಲಿವುಡ್ ಸುಂದರಿ ಅಲ್ಲು ಅರ್ಜುನ್ ಸಿನಿಮಾದಲ್ಲಿ ಸ್ಟೆಪ್ ಹಾಕಲಿದ್ದಾರೆ ಎನ್ನಲಾಗುತ್ತಿದೆ..
ಇದನ್ನೂ ಓದಿ-Sreeleela: ಈ ಕಾರಣಕ್ಕೆ ಶ್ರೀಲೀಲಾ ಬೆಸ್ಟ್ ಹಿರೋಯಿನ್... ಸತತ ಸಿನಿಮಾ ಆಫರ್‌ಗಳ ಹಿಂದಿನ ರಹಸ್ಯ ಇದೇನಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.