ನವದೆಹಲಿ: ಬಾಲಿವುಡ್ ಹಿನ್ನಲೆ ಗಾಯಕಿ ನೇಹಾ ಕಕ್ಕರ್ ಅವರು ಇತ್ತೀಚೆಗೆ ಋಷಿಕೇಶದಲ್ಲಿ ಬೃಹತ್ ಬಂಗಲೆ ಖರೀದಿಸಿದ್ದಾರೆ, ಅವರು ಈ ಹಿಂದೆ ಇಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು.ತಮ್ಮ ಅಭಿಮಾನಿಗಳೊಂದಿಗೆ ಸುವರ್ಣ ಕ್ಷಣವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರ ಹೊಸ ಬಂಗಲೆ ಮತ್ತು ಅವರ ಹಳೆಯ ಮನೆಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ನೇಹಾ 'ಇದು ನಾವು ಈಗ ಋಷಿಕೇಶದಲ್ಲಿ ಹೊಂದಿರುವ ಬಂಗಲೆ ಮತ್ತು ನಾನು ಹುಟ್ಟಿದ ಮನೆಯನ್ನು ನೋಡಲು ಬಲಕ್ಕೆ ಸ್ವೈಪ್ ಮಾಡಿ. ಅದೇ ಮನೆಯಲ್ಲಿ ನಾವು ಒಂದು ಕೋಣೆಯಲ್ಲಿಯೇ ಇರುತ್ತಿದ್ದೆವು, ಅದರೊಳಗೆ ನನ್ನ ತಾಯಿ ಟೇಬಲ್ ಹಾಕುತ್ತಿದ್ದರು, ಅದು ಆ ಸಣ್ಣ ಕೋಣೆಯಲ್ಲಿ ನಮ್ಮ ಅಡುಗೆ ಮನೆಯಾಗಿತ್ತು.ಮತ್ತು ಆ ಕೋಣೆಯೂ ನಮ್ಮದಲ್ಲ, ನಾವು ಬಾಡಿಗೆ ನೀಡುತ್ತಿದ್ದೆವು. ಮತ್ತು ಈಗ ಅದೇ ನಗರದಲ್ಲಿ ನಮ್ಮ ಸ್ವಂತ ಬಂಗಲೆ ನೋಡಿದಾಗಲೆಲ್ಲಾ ನಾನು ಯಾವಾಗಲೂ ಭಾವುಕಳಾಗುತ್ತೇನೆ' ಎಂದು ಬರೆದುಕೊಂಡಿದ್ದಾರೆ.



ಇದೇ ವೇಳೆ ತಮ್ಮ ಕುಟುಂಬ ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ, ನೇಹಾ 'ನನ್ನ ಕುಟುಂಬಕ್ಕೆ ದೊಡ್ಡ ಧನ್ಯವಾದಗಳು - ಸೋನು ಕಕ್ಕರ್, ಟೋನಿ ಕಕ್ಕರ್ (ಇಬ್ಬರೂ ಗಾಯಕರು), ತಾಯಿ, ತಂದೆ, ಮಾತಾ ರಾಣಿ ಮತ್ತು ನನ್ನ ಎಲ್ಲ ಹಿತೈಷಿಗಳು' ಎಂದು ಇನ್ಸ್ಟಾಪೋಸ್ಟ್ ಹಂಚಿಕೊಂಡಿದ್ದಾರೆ. ನೇಹಾ ಕಕ್ಕರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಆಕೆಯ ಸ್ನೇಹಿತರು ಕಾಮೆಂಟ್ ವಿಭಾಗದಲ್ಲಿ ಅಭಿನಂದನಾ ಸಂದೇಶಗಳನ್ನು ಸುರಿಸಿದ್ದಾರೆ. ನೇಹಾ ಅವರ ಗಾಯಕ ಸ್ನೇಹಿತ ಆದಿತ್ಯ ನಾರಾಯಣ್ ಹೀಗೆ ಬರೆದಿದ್ದಾರೆ.'ದೃಢ ನಿಶ್ಚಯ, ಕಠಿಣ ಪರಿಶ್ರಮದಿಂದ ಒಬ್ಬರು ಏನನ್ನು ಸಾಧಿಸಬಹುದು ಎಂಬುದಕ್ಕೆ ಒಂದು ಉದಾಹರಣೆ ಎಂದು ಬರೆದುಕೊಂಡಿದ್ದಾರೆ.ಇನ್ನೊಂದೆಡೆಗೆ ನಟ ರವಿ ದುಬೆ: "ವಾಹ್...ಎಷ್ಟು ಸ್ಪೂರ್ತಿದಾಯಕ...ನೇಹಾ ನಿಮ್ಮ ಹಣೆಬರಹವನ್ನು ನೀವು ನಿಜವಾಗಿಯೂ ಪರಿವರ್ತಿಸಿದ್ದೀರಿ' ಎಂದಿದ್ದಾರೆ.


ದಿಲ್ಬಾರ್ ರಿಡಕ್ಸ್, ಮನಾಲಿ ಟ್ರಾನ್ಸ್, ಕಲಾ ಚಶ್ಮಾ, ಸಿಂಬಾದಿಂದ ಆಂಖ್ ಮಾರೆ ರಿಡಕ್ಸ್ ಮುಂತಾದ ಹಾಡುಗಳಿಂದಾಗಿ ನೇಹಾ ಕಕ್ಕರ್ ಹೆಚ್ಚು ಜನಪ್ರಿಯರಾಗಿದ್ದಾರೆ. ಇಂಡಿಯನ್ ಐಡಲ್ ಹೊರತುಪಡಿಸಿ, ನೇಹಾ ಕಕ್ಕರ್ ಹಾಡುವ ರಿಯಾಲಿಟಿ ಶೋ ಸಾ ರೆ ಗಾ ಮಾ ಪಾ ಎಲ್ ಎಲ್ ಚಾಂಪ್ಸ್ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.