John Zaritsky: ಆಸ್ಕರ್ ಪ್ರಶಸ್ತಿ ವಿಜೇತ ಜಾನ್ ಜರಿಟ್ಸ್ಕಿ ನಿಧನ
`ಜಸ್ಟ್ ಅನದರ್ ಮಿಸ್ಸಿಂಗ್ ಕಿಡ್` ಎಂಬ ಸಾಕ್ಷ್ಯ ಚಿತ್ರಕ್ಕೆ ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ 1983 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದಿದ್ದ ಹಿರಿಯ ಚಲನಚಿತ್ರ ನಿರ್ಮಾಪಕ ಜಾನ್ ಜರಿಟ್ಸ್ಕಿ ಹೃದಯಾಘಾತದಿಂದ ಅಸುನೀಗಿದ್ದಾರೆ.
ವಾಷಿಂಗ್ಟನ್ (ಯುಎಸ್): ಹಿರಿಯ ಚಲನಚಿತ್ರ ನಿರ್ಮಾಪಕ ಜಾನ್ ಜರಿಟ್ಸ್ಕಿ (John Zaritsky) ಹೃದಯಾಘಾತದಿಂದ ಅಸುನೀಗಿದ್ದಾರೆ. ಇವರು 'ಜಸ್ಟ್ ಅನದರ್ ಮಿಸ್ಸಿಂಗ್ ಕಿಡ್' (Just Another Missing Kid) ಎಂಬ ಸಾಕ್ಷ್ಯ ಚಿತ್ರಕ್ಕೆ ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ 1983 ರಲ್ಲಿ ಆಸ್ಕರ್ (Oscar Award) ಪ್ರಶಸ್ತಿಯನ್ನು ಪಡೆದಿದ್ದರು.
ದಿ ಹಾಲಿವುಡ್ ರಿಪೋರ್ಟರ್ ಈ ಕುರಿತು ವರದಿ ಮಾಡಿದ್ದು, ಜರಿಟ್ಸ್ಕಿ ಕೆನಡಾದ ವ್ಯಾಂಕೋವರ್ ಜನರಲ್ ಆಸ್ಪತ್ರೆಯಲ್ಲಿ ಹೃದಯ ವೈಫಲ್ಯದಿಂದ ಮಾರ್ಚ್ 30 ರಂದು ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಇದನ್ನು ಓದಿ: ಮತ್ತೆ ಕರೋನಾ ಹಾಹಾಕಾರ.! ಹೊಸ ವೆರಿಯೇಂಟ್ ಪತ್ತೆ, ಹೆತ್ತವರಿಂದ ಪ್ರತ್ಯೇಕಿಸಲಾಗುತ್ತಿದೆ ಮಕ್ಕಳನ್ನು
40 ವರ್ಷಗಳ ವೃತ್ತಿಜೀವನದಲ್ಲಿ ಜರಿಟ್ಸ್ಕಿ ಅತ್ಯುತ್ತಮ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದರು. ಅಷ್ಟೇ ಅಲ್ಲದೆ, ಜರಿಟ್ಸ್ಕಿ ಅವರ ಡಾಕ್ಯುಮೆಂಟರಿಗಳನ್ನು ಸುಮಾರು 35 ದೇಶಗಳಲ್ಲಿ ಪ್ರಸಾರ ಮಾಡಲಾಗಿದೆ. ಜೊತೆಗೆ ಪ್ರಪಂಚದಾದ್ಯಂತ 40 ಕ್ಕೂ ಹೆಚ್ಚು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.