95th Oscar live 2023 : ಪ್ರಪಂಚದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ 95ನೇ ಆಸ್ಕರ್‌ ಅವಾರ್ಡ್‌ ಪ್ರದಾನ ಸಮಾರಂಭಕ್ಕೆ ಕೇವಲ 4 ದಿನಗಳು ಮಾತ್ರ ಬಾಕಿ ಇದೆ. ಮಾರ್ಚ್ 12, 2023 ರಂದು ಜಗತ್ತಿನಾದ್ಯಂತ ಚಲನಚಿತ್ರ ಪ್ರೇಮಿಗಳು ಯಾವ ಚಲನಚಿತ್ರಗಳು, ನಟರು ಮತ್ತು ತಂತ್ರಜ್ಞರು ಆಸ್ಕರ್ ಪ್ರಶಸ್ತಿಗಳನ್ನು ಗೆಲ್ಲುತ್ತಾರೆ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. 


COMMERCIAL BREAK
SCROLL TO CONTINUE READING

95ನೇ ಅಕಾಡೆಮಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಾರ್ಚ್ 12, 2023 ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಆದ್ರೆ, ಭಾರತೀಯ ಕಾಲಮಾನ ಪ್ರಕಾರ, ಈ ಈವೆಂಟ್ 13 ಮಾರ್ಚ್, 2023 ರಂದು ಸಂಜೆ 5:30 ರಂದು ನಡೆಯಲಿದೆ ಎಂದು ಪ್ರಮುಖ OTT ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಘೋಷಿಸಿದೆ ಚಲನಚಿತ್ರ ಪ್ರೇಮಿಗಳು ಆಸ್ಕರ್ ಸಮಾರಂಭದ ನೇರ ಪ್ರಸಾರವನ್ನು ಕಣ್ತುಂಬಿಕೊಳ್ಳಬಹುದು.


ತೆರೆಗೆ ಬರಲು ಸಿದ್ದವಾಗಿದೆ "ಮೂಗಜ್ಜನ ಕೋಳಿ"


ಈ ಕುರಿತು ಡಿಸ್ನಿ+ಹಾಟ್‌ಸ್ಟಾರ್ ವಿಡಿಯೋ ಒಂದನ್ನು ಟ್ವೀಟ್ ಮಾಡಿದೆ, ಸಿನಿಮಾ ಎಂದಿಗೂ ಮರೆಯಲಾಗದ ಕನಸು. ಮಾರ್ಚ್ 13, 5:30 AM ಸಮಯಕ್ಕೆ ಸರಿಯಾಗಿ 95ನೇ ಆಸ್ಕರ್ ಸ್ಟ್ರೀಮಿಂಗ್‌ನಲ್ಲಿ ನೋಡಿ ಸಂಭ್ರಮಿಸಿ ಬನ್ನಿ.. ಅಂತ ತಿಳಿಸಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸ್ಕರ್ ಪ್ರಶಸ್ತಿಗಳ ನಿರೂಪಣೆ ಮಾಡಲಿದ್ದಾರೆ. ಅಲ್ಲದೆ, ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್‌ನ ನಾಟು ನಾಟು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಅಂತಿಮ ನಾಮನಿರ್ದೇಶನದಲ್ಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.