Oviya : ಕಿರಾತಕ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ನಟಿ ಓವಿಯಾ. ಬೋಲ್ಡ್‌ ನಟಿ ಆಗಾಗ ತಮ್ಮ ದಿಟ್ಟ ಮಾತುಗಳಿಂದ ಟ್ರೋಲ್‌ ಆಗುತ್ತಲೇ ಇರುತ್ತಾರೆ. ಇದೀಗ ಓವಿಯಾ ಲೈಂಗಿಕತೆಯ ಬಗ್ಗೆ ಹೇಳಿರುವ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಓವಿಯಾ ಭಾಗವಹಿಸಿದ್ದರು. ಆಗ ಅವರು, ಲೈಂಗಿಕ ಶಿಕ್ಷಣದಿಂದ ಏನು ಪ್ರಯೋಜನ, ಪ್ರಾಯೋಗಿಕವಾಗಿ ನಡೆಯಬೇಕು ಎಂದು ಹೇಳಿರುವ ಮಾತುಗಳು ಸಖತ್‌ ವೈರಲ್‌ ಆಗಿವೆ. ಅಲ್ಲದೆ, ಎಲ್ಲರೂ ಮುಖವಾಡ ಧರಿಸಿ ಬದುಕುತ್ತಿದ್ದಾರೆ. ಎಲ್ಲರಲ್ಲೂ ಆಸೆಗಳಿವೆ. ಹಾರ್ಮೋನ್‌ಗಳಿವೆ. ಹಲವರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ. ವೇಶ್ಯಾವಾಟಿಕೆ ಮಾಡಬೇಕು, ಅದನ್ನು ಕಾನೂನುಬದ್ಧಗೊಳಿಸಬೇಕು. ಹಾಗೆ ಮಾಡಿದರೆ ಅತ್ಯಾಚಾರ ಕಡಿಮೆಯಾಗುತ್ತವೆ ಅಂತ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: ಮತ್ತೆ ಒಂದಾದ ʼʼಲವ್ ಸ್ಟೋರಿʼʼ ಜೋಡಿ..! ನಾಗಚೈತನ್ಯ ಮುಂದಿನ ಸಿನಿಮಾಗೆ ಸಾಯಿಪಲ್ಲವಿ ನಾಯಕಿ


ಇನ್ನು ಓವಿಯಾ ಈ ಮಾತುಗಳು ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಕೆಲವರು ಓವಿಯಾ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಹೆಣ್ಣಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಅಂತ ಕೆಲ ನಟ್ಟಿಗರು ನಟಿಗೆ ಪಾಠ ಮಾಡಿದ್ದಾರೆ.


ಅಂದಹಾಗೆ ಓವಿಯಾ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದರು. ಈ ಸಿನಿಮಾದಲ್ಲಿನ ಓವಿಯಾ ನಟನೆಗೆ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದರು. 2007 ಕಂಗಾರೋ ಎಂಬ ಮಲಯಾಳಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕನ್ನಡ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.