ನವದೆಹಲಿ: ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಬ್ಯಾಡ್ಮಿಂಟನ್ ಏಸ್ ಪಿವಿ ಸಿಂಧು ದೇಶದ ಕೀರ್ತಿ ಪತಾಕೆ ಹಾರಿಸಿದರು. ಆ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ದೇಶದ ಮೊದಲ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 


COMMERCIAL BREAK
SCROLL TO CONTINUE READING

ಇದಾದ ನಂತರ ಸಿಂಧುಗೆ ದೇಶದೆಲ್ಲೆಡೆಯಿಂದ ಮೆಚ್ಚುಗೆಯ ಸುರಿಮಳೆಗಳೆ ಬಂದವು. ಸ್ವತಃ ಪ್ರಧಾನಿ ಮೋದಿ ಸಿಂಧು ಭಾರತದ ಹೆಮ್ಮೆ ಎಂದು ಹೇಳಿದರು. ಈಗ ಅವರ ಈ ಸಾಧನೆಯ ಹಿನ್ನಲೆಯಲ್ಲಿ ಇನ್ನೊಂದು ಹೊಸ ಸಂಗತಿ ಹೊರಬಂದಿದೆ.  ಅದೇನಪ್ಪಾ ಅಂದರೆ. ಈಗ ಅವರ ಜೀವನ ಚರಿತ್ರೆ ಈಗ ಹೊರಬರಲಿದೆ. ಈ ಈ ಚಿತ್ರವನ್ನು ನಟ ಸೋನು ಸೂದ್ ನಿರ್ಮಿಸಲಿದ್ದಾರೆ ಎನ್ನಲಾಗಿದೆ.


ಈ ಕುರಿತಾಗಿ ಸಿಂಧು ಅವರನ್ನು ತಮ್ಮ ಪಾತ್ರಕ್ಕೆ ಸೂಕ್ತ ನಟಿ ಬಗ್ಗೆ ಕೇಳಿದಾಗ ಖಂಡಿತವಾಗಿಯೂ ದೀಪಿಕಾ ಪಡುಕೋಣೆ ಪಾತ್ರವನ್ನು ನಿರ್ವಹಿಸಬೇಕೆಂದು ಹೇಳುತ್ತೇನೆ. ಏಕೆಂದರೆ ಅವರು ಈ ಆಟವನ್ನು ಆಡಿದ್ದಾರೆ ಮತ್ತು ಉತ್ತಮ ನಟಿ ಕೂಡ. ಆದರೆ ಚಿತ್ರ ನಿರ್ಮಾಪಕರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುಲಿದ್ದಾರೆ, ಅವರ ನಿರ್ಧಾರವನ್ನು ತಾವು ನಂಬುವುದಾಗಿ ಹೇಳಿದ್ದಾರೆ.ಆದರೆ ಈ ಬಗ್ಗೆ ಚಿತ್ರ ನಿರ್ಮಾಪಕ ಆಯ್ಕೆ ಯಾವುದಾಗಿರುತ್ತದೆ ಎಂದು ನಾವು ಕಾದು ನೋಡಬೇಕಾಗಿದೆ.