ಭತ್ತದಲ್ಲಿ ಮೂಡಿದ ಅಪ್ಪು.. ಪುನೀತ್ ಅಭಿಮಾನಿಯ ವಿನೂತನ ಕಾರ್ಯ
Puneeth Rajkumar : ಜಪಾನ್ ಮೂಲದ ಗ್ರೀನ್ ಗೋಲ್ಡನ್ ರೋಸ್, ಕಾಲಾ ಬಟ್ಟಿ ಹಾಗೂ ಸ್ಥಳೀಯ ಸೋನಾ ಮಸೂರಿ ತಳಿಯ ಭತ್ತ ಸೇರಿಸಿ ಅಪ್ಪು ಮುಖವನ್ನು ಭತ್ತದಲ್ಲೇ ಮೂಡುವಂತೆ ಮಾಡಿದ್ದಾರೆ.
ರಾಯಚೂರು: ಪುನೀತ್ ವಿನ್ಯಾಸದ ಭತ್ತದ ಗದ್ದೆಯನ್ನು ಅಪ್ಪು ಅಭಿಮಾನಿ ನಾಟಿ ಮಾಡಿದ್ದರು. ಜಿಲ್ಲೆಯ ಸಿರವಾರ ತಾಲ್ಲೂಕಿನ ಡೋಣಿ ಬಸವಣ್ಣ ಕ್ಯಾಂಪ್ನಲ್ಲಿ ಈ ವಿನೂತನ ಭತ್ತ ನಾಟಿ ಮಾಡಲಾಗಿದೆ. ವಿಶೇಷಚೇತನರಾಗಿರೊ ಸತ್ಯನಾರಾಯಣ ಎಂಬ ಅಭಿಮಾನಿ ಈ ಭತ್ತ ನಾಟಿ ಮಾಡಿದ್ದಾರೆ.
ಜಪಾನ್ ಮೂಲದ ಗ್ರೀನ್ ಗೋಲ್ಡನ್ ರೋಸ್, ಕಾಲಾ ಬಟ್ಟಿ ಹಾಗೂ ಸ್ಥಳೀಯ ಸೋನಾ ಮಸೂರಿ ತಳಿಯ ಭತ್ತ ಸೇರಿಸಿ ಅಪ್ಪು ಮುಖವನ್ನು ಭತ್ತದಲ್ಲೇ ಮೂಡುವಂತೆ ಮಾಡಿದ್ದಾರೆ. ಜುಲೈನಲ್ಲಿ ಪುನೀತ್ ವಿನ್ಯಾಸದ ಸ್ಕೆಚ್ನಲ್ಲಿ ಭತ್ತ ನಾಟಿ ಮಾಡಿದ್ದರು.
ಇದನ್ನೂ ಓದಿ : ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡಲಿ: ಎಂ ಬಿ ಪಾಟೀಲ
ಆಗ ಮಳೆಯಾಗದ ಹಿನ್ನೆಲೆ ಸಂಪೂರ್ಣ ಒಣಗೋ ಸ್ಥಿತಿಗೆ ಭತ್ತದ ಗದ್ದೆ ತಲುಪಿತ್ತು. ಈ ವೇಳೆ ಹೆಚ್ಚಿನ ಹಣ ಖರ್ಚು ಮಾಡಿ ಟ್ಯಾಂಕರ್ ಮೂಲಕ ಗದ್ದೆಗೆ ನೀರುಣಿಸಿದ್ದರು. ಪ್ರತಿ ಬಾರಿ ಡ್ರೋನ್ ಮೂಲಕವೇ ಭತ್ತ ನಾಟಿದೆಯಾ, ಇಲ್ಲವಾ ಅನ್ನೋದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು. ಎರಡು ಎಕರೆ ಪ್ರದೇಶದಲ್ಲಿ ಸುಮಾರು 5 ಲಕ್ಷ ವೆಚ್ಚದಲ್ಲಿ ಅಪ್ಪು ಭತ್ತದ ಗದ್ದೆ ನಿರ್ಮಾಣ ಮಾಡಿದ್ದಾರೆ. ನಡೆಯಲು ಆಗದ ಸ್ಥಿತಿಯಲ್ಲರುವ ಇವರು ಕೂಲಿ ಆಳುಗಳ ಸಹಾಯದ ಮೂಲಕ ಸಾಧನೆ ಮಾಡಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ನಟ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಭೇಟಿ ಮಾಡಿ ಅಪ್ಪು ವಿನ್ಯಾಸದ ಭತ್ತದ ಗದ್ದೆ ಬಗ್ಗೆ ಸತ್ಯನಾರಾಯಣ್ ತಿಳಿಸಿದ್ದರು. ಅಪ್ಪು ವಿನ್ಯಾಸದ ತಲೆ ಭಾಗ 140 ಫೀಟ್, ಕಣ್ಣುಗಳು 35 ರಿಂದ 40 ಫೀಟ್, ಮುಖಭಾಗದ ಬಲಗಡೆ 75 ಫೀಟ್, ಎಡಗಡೆ 75 ಫೀಟ್ ಇದೆ. ಕರ್ನಾಟಕ ರತ್ನ ಟ್ಯಾಗ್ ಲೈನ್ ಅಕ್ಷರ 40 ಫೀಟ್ ಸೇರಿ ಒಟ್ಟು 2 ಎಕರೆ ಪ್ರದೇಶದಲ್ಲಿ ಅಪ್ಪು ಭತ್ತದ ಗದ್ದೆ ವಿನ್ಯಾಸಗೊಳಿಸಿದ್ದಾರೆ.
ಇದೇ ಅಕ್ಟೋಬರ್ 29 ಕ್ಕೆ ಪುನೀತ್ರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಇದೆ. ಪುಣ್ಯಸ್ಮರಣೆಯಂದು ಅಪ್ಪು ಸ್ಮರಣೆಗಾಗಿ ಹೊಸ ಬಗೆಯಲ್ಲಿ ಭತ್ತದ ಗದ್ದೆ ಮಾಡಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ 6 ಕೋಟಿ ಕನ್ನಡಿಗರು ನೆಮ್ಮದಿಯಲ್ಲಿಲ್ಲ: ಬಿಜೆಪಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.