ನವದೆಹಲಿ: ಸಂಜಯ್ ಲೀಲಾ ಭನ್ಸಾಲಿಯವರ 'ಪದ್ಮಾವತ್' ಚಿತ್ರ ದೇಶಾದ್ಯಂತ ನಿರಂತರ ವಿರೋಧವನ್ನು ಎದುರಿಸಿದರೂ, ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಚಿತ್ರವು ದೇಶದ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿರುವುದು ಮಾತ್ರವಲ್ಲದೆ, ವಿದೇಶಗಳಲ್ಲಿ ಈವರೆಗೂ ಇದ್ದ ಅಮೀರ್ ಖಾನ್ ಚಿತ್ರದ ಎಲ್ಲಾ ದಾಖಲೆಗಳನ್ನು ಮುರಿದಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ವ್ಯಾಪಾರಿ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಪ್ರಕಾರ, ಉತ್ತರ ಅಮೆರಿಕಾದಲ್ಲಿ ಅಮೀರ್ ಖಾನ್ ಅವರ ಚಲನಚಿತ್ರ "ಪಿಕೆ", "ದಂಗಲ್" ಮತ್ತು "ಧೂಮ್ 3" ಮೊದಲಾದವು ಮೊದಲ ದಿನದಲ್ಲೇ ಅತಿ ಹೆಚ್ಚು ಗಳಿಸಿದ ಚಲನಚಿತ್ರಗಳಾಗಿವೆ. ಆದರೆ 'ಪದ್ಮಾವತ್' ಚಿತ್ರ ಅಮೀರ್ ಸಿನೆಮಾಗಳಿಗಿಂತ ಹೆಚ್ಚು ಗಳಿಸುವ ಮೂಲಕ ಅಮೀರ್ ಖಾನ್ ಚಿತ್ರದ ದಾಖಲೆಗಳನ್ನು ಮುರಿದಿದೆ.