ನವದೆಹಲಿ : ಕೆಲ ದಿನಗಳ ಹಿಂದೆ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ದಾಂಪತ್ಯದಲ್ಲಿ ಗೊಂದಲ ಉಂಟಾಗಿದ್ದು, ಅವರಿಬ್ಬರು ಡೈವೋರ್ಸ್‌ ಪಡೆಯಲಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಅಲ್ಲದೆ ಈ ಕುರಿತು ಅನೇಕ ವರದಿಗಳು ಪ್ರಸಾರವಾಗಿದ್ದವು. ಇದೀಗ ಜನಪ್ರಿಯ ಪಾಕ್ ನಟಿ ಆಯೇಶಾ ಒಮರ್ ಕುರಿತು ಸಪ್ಟನೆ ನೀಡಿದ್ದಾರೆ. ಲಿಂಕ್-ಅಪ್ ರೂಮರ್ಸ್‌ ಬಗ್ಗೆ ಆಯೇಶಾ ಮೌನ ಮುರಿದಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಲು ಯೋಜಿಸುತ್ತಿದ್ದೀರಾ ಎಂದು ಕೇಳಿದ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಆಯೇಶಾ.. ನಿಜಾವಾಗಿಯೂ ಇಲ್ಲ. ನಾನು ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ ಅವರಿಗೆ ತುಂಬಾ ಗೌರವ ಕೊಡ್ತೀನಿ. ಶೋಯೆಬ್‌ ನನ್ನ ಒಳ್ಳೆಯ ಗೆಳೆಯ. ಅವರು ಅವರ ಪತ್ನಿಯ ಜೊತೆ ಸಂತೋಷವಾಗಿಯೇ ಇದ್ದಾರೆ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಊಹಾಪೋಗಳಿಗೆ ತೆರೆ ಎಳೆದಿದ್ದಾರೆ.


ಇದನ್ನೂ ಓದಿ: ಯುವರಾಜ್ ಕುಮಾರ್'ಗೆ ಹೀರೋಯಿನ್ ಆಗಲಿದ್ದಾರೆಯೇ ರಿಯಲ್ ಸ್ಟಾರ್ ಪುತ್ರಿ ಐಶ್ವರ್ಯ...?


ಭಾರತೀಯ ಟೆನ್ನಿಸ್‌ ತಾರೆ ಸಾನಿಯಾ ಮತ್ತು ಶೋಯೆಬ್ ಅವರ ವಿಚ್ಛೇದನದ ವದಂತಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಗಮನ ಸೆಳೆದಿತ್ತು. ಆದರೆ ಇಂತಹ ವರದಿಗಳ ಮಧ್ಯೆ ದಂಪತಿಗಳು ಹೊಸ ಕಾರ್ಯಕ್ರಮವನ್ನು ಒಟ್ಟಿಗೆ ಘೋಷಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದರು. ಒಟಿಟಿ ಪ್ಲಾಟ್‌ಫಾರ್ಮ್‌ `ದಿ ಮಿರ್ಜಾ ಮಲಿಕ್ ಶೋʼ ಎಂಬ ಶೀರ್ಷಿಕೆಯೊಂದಿಗೆ ಇಬ್ಬರು ದಂಪತಿಗಳು ತೆರೆಮೇಲೆ ಬರುತ್ತಿದ್ದಾರೆ ಎಂದು ಘೋಷಿಸಿತು. ಒಟಿಟಿ ಪ್ಲಾಟ್‌ಫಾರ್ಮ್‌ ಉರ್ದುಫ್ಲಿಕ್ಸ್‌ ಕಾರ್ಯಕ್ರಮದ ಪೋಸ್ಟರ್ ಅನ್ನು ಕೂಡಾ ಹಂಚಿಕೊಂಡಿತ್ತು.


ಪಾಕಿಸ್ತಾನಿ ಮಾಡೆಲ್ ಮತ್ತು ನಟಿ ಆಯೇಷಾ ಒಮರ್ ಅವರ ಹೆಸರು ಕ್ರಿಕೆಟಿಗ ಶೋಯೆಬ್ ಮಲಿಕ್‌ ಜೊತೆ ಕೇಳಿ ಬಂದಿತ್ತು. ಅಲ್ಲದೆ, ಇಬ್ಬರು ಮದುವೆಯಾಗುವುದಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದರು. ಅಲ್ಲದೆ, ಅವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದರು. ಅಲ್ಲದೆ, ಫೋಟೋ ನೋಡಿದ ನೆಟಿಜನ್ಸ್‌ ಶೋಯೆಬ್‌ ಆಯೇಷಾ ನಡುವೆ ಸಂಬಂಧ ಕಲ್ಪಿಸಿದ್ದರು. ಅಲ್ಲದೆ, ಸಾನಿಯಾ ಮತ್ತು ಶೋಯೆಬ್ ವಿಚ್ಛೇದನಕ್ಕೆ ಇದೇ ಕಾರಣ ಎಂದು ಹೇಳಲಾಗಿತ್ತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.