ಬೆಂಗಳೂರು: ಈಗಾಗಲೆ ರಾಜ್ಯದ ಮೂವರು ಮುಖ್ಯಮಂತ್ರಿಗಳಾದ ಶ್ರೀಯುತ ಹೆಚ್ ಡಿ ಕುಮಾರ ಸ್ವಾಮಿ, ಶ್ರೀಯುತ ಬಿ ಎಸ್ ಯಡಿಯೂರಪ್ಪ ಹಾಗೂ ಶ್ರೀಯುತ ಸಿದ್ದರಾಮಯ್ಯ ಅವರುಗಳು ಪರಿಮಳ ಡಿಸೋಜಾ ಚಲನಚಿತ್ರದ ಸಿನೆಮಾ ಪೋಸ್ಟರ್ ಬಿಡುಗಡೆ ಮಾಡಿದ್ದು,


COMMERCIAL BREAK
SCROLL TO CONTINUE READING

ಈಗ ಪರಿಮಳ ಡಿಸೋಜಾ ಚಲನಚಿತ್ರದ ಮೋಶನ್ ಪೋಸ್ಟರ್ ಅನ್ನು ತೋಟಗಾರಿಕೆ,ಯೋಜನೆ ಹಾಗೂ ಸಾಂಖ್ಯಿಕ ಸಚಿವರಾದ ಶ್ರೀಯುತ ಮುನಿರತ್ನ ಹಾಗೂ ಖ್ಯಾತ ಚಲನಚಿತ್ರ ಸಾಹಿತಿಗಳಾದ ಕೆ ಕಲ್ಯಾಣ್ ಅವರುಗಳು ಬಿಡುಗಡೆ ಮಾಡಿದ್ದಾರೆ.


ಇದನ್ನೂ ಓದಿ : Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..


ಸಸ್ಪೆನ್ಸ್ ಥ್ರಿಲ್ಲರ್ ಆಕ್ಸನ್ ಪ್ಯಾಮಿಲಿ ಸೆಂಟಿಮೆಂಟ್ ಕಥಾವಸ್ತುವನ್ನು ಹೊಂದಿರುವ ಬಹುನಿರೀಕ್ಷೇಯ ಪರಿಮಳ ಡಿಸೋಜಾ ಕನ್ನಡ ಚಲನಚಿತ್ರದ ಮೋಶನ್ ಪೋಸ್ಟರ್ ಅನ್ನು ತೋಟಗಾರಿಕೆ,ಯೋಜನೆ ಹಾಗೂ ಸಾಂಖ್ಯಿಕ ಸಚಿವರಾದ ಶ್ರೀಯುತ ಮುನಿರತ್ನ ಹಾಗೂ ಖ್ಯಾತ ಚಲನಚಿತ್ರ ಸಾಹಿತಿಗಳಾದ ಕೆ ಕಲ್ಯಾಣ್ ಅವರು ಇಂದು ದಿನಾಂಕ: ೬/೧೨/೨೦೨೨ ರ ಮಂಗಳವಾರ ಸಂಜೆ ೬ ಗಂಟೆಗೆ ಬಿಡುಗಡೆ ಮಾಡಿ “ ಪರಿಮಳ ಡಿಸೋಜಾ” ಚಲನಚಿತ್ರ ತಂಡಕ್ಕೆ ಶುಭಕೋರಿದ್ದಾರೆ.


Viral Video : ಆನೆಗೆ ಕೋಲಿನಿಂದ ಹೊಡೆದ ಯುವಕ, ಕೆಣಕಿದವರನ್ನು ಸುಮ್ಮನೆ ಬಿಟ್ಟೀತಾ?


ಈ ಚಿತ್ರದಲ್ಲಿ ಶ್ರೀನಿವಾಸ್ ಪ್ರಭು, ಭವ್ಯ, ಕೋಮಲ ಬನವಾಸೆ , ವಿನೋದ್ ಶೇಷಾದ್ರಿ , ಪೂಜ ರಾಮಚಂದ್ರ, ರೋಹಿಣಿ ಜಗನಾಥ್, ಚಂದನ ಶ್ರೀನಿವಾಸ್, ಮೀಸೆ ಆಂಜನಪ್ಪ, ಶಿವಕುಮಾರ್ ಆರಾಧ್ಯ, ನಾಗಮಂಗಲ ಜಯರಾಮ್ ಸುನೀಲ್ ಮೋಹಿತೆ, ಉಗ್ರಂ ರೆಡ್ಡಿ. ಲಕ್ಷಣ್  ಗೌಡ, ಮುಂತಾದ ನೂರಕ್ಕು ಹೆಚ್ಚು ಕಲಾವಿಧರು ಅಭಿನಯಿಸಿರುವ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನವನ್ನು ಡಾ.ಗಿರಿಧರ್ ಹೆಚ್ ಟಿ ,ಸಿನೇಮಾಟೊಗ್ರಪಿಯನ್ನು ಕೆ ರಾಮ್, ಸಂಕಲನ ಸಂಜೀವ್ ರೆಡ್ಡಿ ,ಸಂಗೀತವನ್ನು ಕ್ರಿಸ್ಟೋಫರ್ ಜೇಸನ್ ಮಾಡಿದ್ದಾರೆ ನಿರ್ಮಾಪಕರು ವಿನೋದ್ ಶೇಷಾದ್ರಿ ಅವರು ವಿಲೇಜ್ ರೋಡ್ ಫಿಲಂಸ್ ಲಾಂಚನದಲ್ಲಿ ನಿರ್ಮಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.