Parineethi Chopra Film Career Journey: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಸಿನಿಮಾರಂಗಕ್ಕೆ ಹೇಗೆ ಎಂಟೀ ನೀಡಿದರೋ ಹಾಗೆಯೇ ಈ ಬೆಡಗಿ ಮೆಲ್ಲ ಮೆಲ್ಲನೆ ಬಣ್ಣದ ಲೋಕದಿಂದ ದೂರವಾಗುತ್ತಾ ಹೋದರು. ಈ ನಟಿಯ ಚಿತ್ರಗಳು ಅಷ್ಟಾಗಿ ಸಕ್ಸಸ್‌ ಕಾಣದೆ ಸೋಲನ್ನು ಕಂಡವು. ಮೆಲ್ಲಗೆ ಈ ಸುಂದರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕೂಡ ಕಡಿಮೆಯಾಗುತ್ತಾ ಬಂದವು. ಆದರೀಮ ಈ ನಟಿ ಲೈಮ್‌ ಲೈಟ್‌ನಿಂದ ಸೈಡ್‌ಗೆ ಜರುಗಿದರು.


COMMERCIAL BREAK
SCROLL TO CONTINUE READING

ನಟಿ ಪರಿಣಿತಿ ಚೋಪ್ರಾ ಕಳೆದ ವರ್ಷ ಸಂಸದ ರಾಘವ್​ ಚಡ್ಡಾ ಜೊತೆಗೆ ಮದುವೆಯಾದರು. ಇದೀಗ ಈ ನಟಿ ದಾಂಪತ್ಯ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಈ ನಟಿ ಕೊನೆಯದಾಗಿ ಬಣ್ಣ ಹಚ್ಚಿದ್ದ ಅಮರ್ ಸಿಂಗ್ ಚಮ್ಕೀಲಾ ಸಿನಿಮಾ ಸೂಪರ್‌ ಹಿಟ್‌ ಆಗಿತು. ಸದ್ಯ ಚಿತ್ರರಂಗದಿಂದಲೇ ಹೊರಗೆ ಬರುವುದಕ್ಕೆ ಸಜ್ಜಾಗಿದ್ದ ಈ ನಟಿಗೆ ಚಿತ್ರ ಸಖತ್‌ ಬ್ರೇಕ್‌ ಅನ್ನು ನೀಡಿದೆ. ಈ ಬಿ-ಟೌನ್‌ ಸುಂದರಿಗೆ ಸಿನಿಮಾ ಅವಕಾಶಗಳು ಕಡಿಮೆಯಾದರೂ ಕೂಡ ಆಸ್ತಿ ಬೇಕಾದಷ್ಟಿದೆ.


ಇದನ್ನೂ ಓದಿ: Jerusha Christopher: ಅಂದು ಕಿಚ್ಚನ ʻವೀರ ಮದಕರಿʼಯಲ್ಲಿ ಬಾಲನಟಿ: ಇಂದು ಸ್ಮೈಲ್ ಗುರು ರಕ್ಷಿತ್‌ಗೆ ಹೀರೋಯಿನ್!


ಹೌದು.. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಪರಿಣಿತ ಚೋಪ್ರಾ, ಈಕೆಯನ್ನು ರಾತ್ರೋ ರಾತ್ರಿ ಸಿನಿಮಾಗಳಿಂದ ಕಿತ್ತು ಹಾಕುತ್ತಿದ್ದರು. ಸೈನ್ ಮಾಡಿರುತ್ತಿದ್ದೆ. ಆದರೆ ದಿಢೀರ್ ಆಗಿ ಸಿನಿಮಾದಿಂದ ತೆಗೆದುಬಿಡುತ್ತಿದ್ದರು ಎಂದು ಹೇಳಿದ್ದಾರೆ. ಈ ಬಾಲಿವುಡ್‌ನ ಪ್ರಸಿದ್ಧ ನಟಿ ತನ್ನ ಪತಿ ರಾಘವ್‌ ಚಡ್ಡಾಗಿಂತ ಹೆಚ್ಚು ಶ್ರೀಮಂತೆಯಂತೆ ಎನ್ನಾಲಾಗಿದೆ, ವರದಿಗಳ ಪ್ರಕಾರ ಈಕೆಯ ಒಟ್ಟು ಆಸ್ತಿ ನಿವ್ವಳ ಮೌಲ್ಯ ರೂ 60 ಕೋಟಿಯಂತೆ. 


ಬಿಟೌನ್‌ ಬೆಡಗಿ ನಟಿ ಪತಿಯ ಒಟ್ಟು ಆಸ್ತಿಯ ಮೌಲ್ಯ 36,99,471 ರೂಪಾಯಿಯಾಗಿದೆ. ಇವರ ಹತ್ತಿರ ವೈಟ್‌ ಸ್ವಿಫ್ಟ್ ಡಿಜೈರ್ ಮತ್ತು 90 ಗ್ರಾಂ ಚಿನ್ನಾಭರಣವಿದ್ದು, ಇದರ ಬೆಲೆ ಸುಮಾರು 4,95,000 ರೂಪಾಯಿ ಆಗಿದೆ. ಬಾಂಡ್‌ಗಳು ಮತ್ತು ಷೇರುಗಳಲ್ಲಿ 6 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಈಕೆ ಗಾಯಕಿ ಕೂಡ. ಈ ನಟಿ ಸಿನಿಮಾಗಳ ಜೊತೆ ಜೊತೆಗೆ ಹಾಡನ್ನು ಕೂಡ ಹಾಡುತ್ತಾರೆ. ಇವರು ಸಿಂಗರ್ ಆಗಿಯೂ ಗುರುತಿಸಿಕೊಂಡು ಹಲವಾರು ಶೋಗಳನ್ನು ಕೊಡುತ್ತಿರುತ್ತಾರೆ. ಈ ನಟಿಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾದರಿಂದ ಸದ್ಯ  ಸಿಂಗಿಂಗ್ ಬಗ್ಗೆ ಗಮನ ಹರಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.