Pasandagavne Song Got Millions Views: ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅಭಿನಯದ ಕಾಟೇರ ಚಿತ್ರದ ಪಸಂದಾಗವನೆ ಹಾಡು ನಿನ್ನೆ ರಿಲೀಸ್‌ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹಬ್ಬವೇ ಆಗುತ್ತಿದೆ. ಸೋಷಿಯಲ್ ಮೀಡಿಯಾದ ಯಾವುದೇ ಪೇಜ್‌ಗೂ ಹೋದ್ರೂ ಅಲ್ಲಿ ಕಾಟೇರ ಖದರ್ ಕಾಣಿಸುತ್ತಿದ್ದು, ಪಸಂದಾಗವನೆ ಹಾಡಿನ ಪೋಸ್ಟರ್ ಇಲ್ಲಿ ರಾರಾಜಿಸುತ್ತಿದೆ. ಚಿತ್ರದ ಈ ಫಸ್ಟ್ ಸಾಂಗ್ ಖಡಕ್ ಆಗಿಯೇ ಇದ್ದು, ಖಡಕ್ ಧ್ವನಿಯ ಗಾಯಕಿ ಮಂಗ್ಲಿಈ ಹಾಡಿಗೆ ಜೀವ ತುಂಬಿದ್ದಾರೆ.


COMMERCIAL BREAK
SCROLL TO CONTINUE READING

ಕಾಟೇರ ಚಿತ್ರದ ಮೊದಲ ಹಾಡಿನ ಕ್ರೇಜ್ ಜಾಸ್ತಿನೇ ಇದ್ದು, ಇಲ್ಲಿ ನಾಯಕ ಬಿಲ್ಡ್ ಏನೂ ಇದರೆ, ಇರೋದೆಲ್ಲ ನಾಯಕಿಯ ಮನದಾಳದ ಮಾತುಗಳೇ ಇಲ್ಲಿ ಹಾಡಾಗಿದೆ. ಆದರೂ ಸಹ ನಾಯಕಿ ಆರಾಧನಾ ದೃಷ್ಟಿಕೋನದ ಹಾಡನ್ನ ಕೇಳಿದ ಮಂದಿ ಹೆಚ್ಚು ಇಷ್ಟಪಡುತ್ತಿದ್ದು, ಸಾಂಗ್‌ನ್ನ ಯಾರೇ ಕೇಳಿದರೂ ಅಲ್ಲಿ ಒಂದು ಕಿಕ್ ಕ್ರಿಯೇಟ್ ಆಗುತ್ತಿದೆ. ಸಂಗೀತ ಸಂಯೋಜನೆಯಲ್ಲೂ ಆ ಒಂದು ಸೆಳೆತ ಕ್ರಿಯೇಟ್ ಆಗಿದ್ದು, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಈ ಒಂದು ಹಾಡಿಗೆ ಒಳ್ಳೆ ಗಾಯಕಿಯ ಆಯ್ಕೆ ಮಾಡಿದ್ದಾರೆ. ನಾಯಕಿಯ ಮನದ ಭಾವನೆಗಳನ್ನ ಇಲ್ಲಿ ಗಾಯಕಿ ಮಂಗ್ಲಿ ಮೂಲಕ ಚೆನ್ನಾಗಿಯೇ ತಲುಪಸಿದ್ದು, ಹಾಗಾಗಿಯೆ ಈ ಹಾಡು ಎಲ್ಲರ ಹೃದಯ ಗೆಲ್ಲುತ್ತಿದೆ.


ಇದನ್ನೂ ಓದಿ: ಕಾಟೇರ ಚಿತ್ರದ ಫಸ್ಟ್‌ ಸಾಂಗ್‌ಗೆ ಮುಹೂರ್ತ ಫಿಕ್ಸ್:‌ ಕುತೂಹಲ ಕೆರಳಿಸುತ್ತಿರುವ ಹಾಡಿನ ಪೋಸ್ಟರ್!‌


ಕಾಟೇರ ಚಿತ್ರದ  ಹಾಡು ನಿನ್ನೆ ಮಧ್ಯಾಹ್ನ 12.30ಕ್ಕೆ ಯಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದ್ದು, ಈ ಒಂದು ಹಾಡಿಗೆ ಒಂದು ದಿನದಲ್ಲಿಯೇ ಆರು ಮಿಲಿಯನ್‌ಕಿಂತ ಹೆಚ್ಚು ವೀವರ್ಸ್ ಬಂದಾಗಿದೆ.  ಹಾಗೆ ಇದೀಗ ಅದು ಡಬಲ್ ಟ್ರಿಪಲ್ ಅಂತಲೇ ಓಡ್ತಾನೇ ಇದ್ದು, ಕಾಟೇರ ಸಿನಿಮಾದ ಈ ಹಾಡಿಗೆ ಈಗಾಗಲೇ 3 ಲಕ್ಷ ಲೈಕ್ಸ್ ಕೂಡ ಬಂದಿದೆ. ಕೇಳುಗರಿಗೆ ಖುಷಿ ಕೊಡುವಂತೇನೆ ಈ ಹಾಡು ಇದ್ದು, ವಿಶೇಷವಾಗಿ ನಾಯಕಿ ಇಲ್ಲಿ ನಾಯಕನನ್ನ ಹೊಗಳುವ ಕೆಲಸ ಮಾಡ್ತಾರೆ. ನಾಯಕಿ ಹಾಡಿನಲ್ಲಿ ಒಳ್ಳೆ ಎಕ್ಸಪ್ರೆಷನ್‌ಗಳನ್ನ ಕೊಟ್ಟಿದ್ದು ಹಾಗೆಯೇ ದೊಡ್ಡ ಸ್ಟಾರ್ ಅನ್ನುವ ಯಾವುದೇ ಭಯವಿಲ್ಲದೆ ಡ್ಯಾನ್ಸ್ ಸೂಪರ್ ಆಗಿಯೇ ಮಾಡಿದ್ದಾರೆ. ಈ ಕಾರಣಕ್ಕೋ ಏನೋ, ಹಾಡು ಆರಂಭದಲ್ಲಿಯೇ ರನ್ನಿಂಗ್ ಸಕ್ಸಸಫುಲಿ ಅಂತಲೇ ಹೇಳಬಹುದು.


ಕಾಟೇರ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದ್ದು, 100 ದಿನ ಚಿತ್ರೀಕರಣ ಮಾಡಿರೋ ಡೈರೆಕ್ಟರ್ ತರುಣ್ ಸುಧೀರ್ ಚಿತ್ರವನ್ನ ರಿಲೀಸ್‌ಗೆ ರೆಡಿ ಮಾಡಿದ್ದಾರೆ. ಜೊತೆಗೆ ಪ್ರಮೋಷನ್ ಕೆಲಸ ಕೂಡ ಹಂತ ಹಂತವಾಗಿಯೇ ಮಾಡುತ್ತಿದ್ದು, ಸಿನಿಮಾ ಮೊದಲ ಮೇಕಿಂಗ್ ರಿಲೀಸ್ ಮಾಡಿದ್ದಾರೆ. ಕೆಲವುದಿನಗಳ ಹಿಂದೆ ಒಂದು ಮೇಕಿಂಗ್ ವಿಡಿಯೋ ಜೊತೆಗೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆದಿದ್ದು, ಇದಕ್ಕೂ ಮುನ್ನ ಪ್ರತಿ ಹಬ್ಬಕ್ಕೆ ಒಂದೊಂದು ಪೋಸ್ಟರ್ ಕೂಡ ರಿವೀಲ್ ಆಗಿವೆ. ಈ ಮೂಲಕ ಚಿತ್ರಗಳ ಪಾತ್ರಗಳ ಪರಿಚಯ ಕೂಡ ಆಗಿದೆ. ಈ ಚಿತ್ರದ ಪಸಂದಾಗವನೆ ಹಾಡಿನ ಮೂಲಕ ನಾಯಕಿ ಆರಾಧನಾ ಪಾತ್ರವೂ ಪರಿಚಯ ಆಗಿದ್ದು, ಈಕೆ  ಮುಂದಿನ ಭರವಸೆಯ ನಟಿ ಅನ್ನೋದು ಈಗಲೇ ಗೊತ್ತಾಗಿದೆ. ಒಳ್ಳೆ ಎಕ್ಸಪ್ರೆಷನ್‌ಗಳನ್ನ ಕೊಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.