Pathaan Controversy: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರದ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತಲೇ ಇದೆ. ಚಿತ್ರದ 'ಬೇಷರಂ ರಂಗ್' ಹಾಡಿನಲ್ಲಿ ದೀಪಿಕಾ ಕಾಣಿಸಿಕೊಂಡ ಪರಿ ಮತ್ತು ಆಕೆಯ ಬಿಕಿನಿ ಬಣ್ಣ ಭಾರಿ ಸಂಚಲನವನ್ನು ಸೃಷ್ಟಿಸುತ್ತಿದೆ. ಒಂದೆಡೆ ಮಧ್ಯಪ್ರದೇಶ ಸಚಿವ ನರೋತ್ತಮ್ ಮಿಶ್ರಾ ಚಿತ್ರದ ದೃಶ್ಯಗಳು ಮತ್ತು ಬಟ್ಟೆಗಳನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ, ಮತ್ತೊಂದೆಡೆ ಜನರು ಪೋಸ್ಟರ್‌ಗಳನ್ನು ಸುಟ್ಟು ಪ್ರತಿಭಟನೆ ನಡೆಸುತ್ತಿದ್ದರೆ. ಏತನ್ಮಧ್ಯೆ ಮಧ್ಯಪ್ರದೇಶದಲ್ಲಿ ಚಿತ್ರ ಬಿಡುಗಡೆಗೂ ಕಂಟಕ ಎದುರಾಗಿದೆ. ಇದೇ ವೇಳೆ ಇದೀಗ ದೀಪಿಕಾ ಪಡುಕೋಣೆ ಅವರ ಹಳೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ದೀಪಿಕಾ ಧರ್ಮದೊಂದಿಗೆ ಬಣ್ಣವನ್ನು ಸಂಯೋಜಿಸುವವರಿಗೆ ಪ್ರತ್ಯುತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ದೀಪಿಕಾ ಅಭಿನಯದ 'ಬಾಜಿರಾವ್ ಮಸ್ತಾನಿ' ಚಿತ್ರದ ವಿಡಿಯೋ ಕ್ಲಿಪ್ ಯಾಗಿದೆ. ಈ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು, 'ಪ್ರತಿಯೊಂದು ಧರ್ಮವು ಬಣ್ಣವನ್ನು ಆರಿಸಿಕೊಂಡಿದೆ ಎಂಬುದು ನಿಜ, ಆದರೆ ಬಣ್ಣಕ್ಕೆ ಧರ್ಮವಿಲ್ಲ. ಪ್ರತಿಯೊಂದು ಬಣ್ಣದಲ್ಲಿ ಧರ್ಮವಿಲ್ಲದಿದ್ದರೂ ಕೂಡ ಕೆಲವೊಮ್ಮೆ ಮನುಷ್ಯನ ಮನಸ್ಸು ಕಪ್ಪಾಗುತ್ತದೆ ಮತ್ತು ಆತನಿಗೆ ಬಣ್ಣದಲ್ಲಿಯೂ ಧರ್ಮ ಕಾಣಿಸಿಕೊಳ್ಳಲಾರಂಭಿಸುತ್ತದೆ' ಎಂದು ಬರೆದುಕೊಂಡಿದ್ದಾರೆ. 'ಬಾಜಿರಾವ್ ಮಸ್ತಾನಿ' ಚಿತ್ರದ ಈ ಕ್ಲಿಪ್‌ನಲ್ಲಿ, ದೀಪಿಕಾ ಅದೇ ಡೈಲಾಗ್‌ ಹೇಳುತ್ತಾ, 'ದುರ್ಗೆಯ ವಿಗ್ರಹವನ್ನು ಅಲಂಕರಿಸುವ ವೇಳೆ ಆಕೆಗೆ ಹಸಿರು ಬಳೆಗಳು, ಹಸಿರು ಶಾಲು ಮತ್ತು ಹಸಿರು ಚೋಲಿಯನ್ನು ತೊಡಿಸಲಾಗುತ್ತದೆ, ದರ್ಗಾಗಳಲ್ಲಿ ದೊಡ್ಡ ದೊಡ್ಡ ಪೀರ್ ಫಕೀರರ ಸಮಾಧಿಗಳ ಮೇಲೆ ಕೇಸರಿ ಬಣ್ಣದ ಚಾದರ್ ಅರ್ಪಿಸಲಾಗುತ್ತದೆ, ಆಗ ನಿಮಗೆ ಬಣ್ಣದ ಯೋಚನೆ ಬರುವುದಿಲ್ಲವೇ?' ಎಂದು ಪ್ರಶ್ನಿಸುತ್ತಾಳೆ.


ಇದನ್ನೂ ಓದಿ-Deepika Padukone : ಅಸೆಂಬ್ಲಿವರೆಗೂ ಹೊಯ್ತು ದೀಪಿಕಾ ಕೇಸರಿ ಬಿಕಿನಿ.. ಚಳಿಗಾಲ ಅದಿವೇಶನದಲ್ಲಿ ಚರ್ಚೆ..!


ದೀಪಿಕಾ ಅವರ ಈ ಕ್ಲಿಪ್‌ಗೆ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡುತ್ತಿದ್ದಾರೆ. ಇದೇ ವೇಳೆ ‘ಪಠಾಣ್’ ಹಾಡಿನಲ್ಲಿ ದೀಪಿಕಾ ಬಿಕಿನಿ ಲುಕ್ ಕೆಲವರಿಗೆ ಇಷ್ಟವಾಗದಿದ್ದರೆ, ಕೆಲವರಿಗೆ ವಿರೋಧಿಸುತ್ತಿರುವುದಕ್ಕೆ ಕಾರಣ ಅರ್ಥವಾಗುತ್ತಿಲ್ಲ. ದೀಪಿಕಾ ಈ ಹಿಂದೆಯೂ ಸಹ ಪರದೆಯ ಮೇಲೆ ಕೇಸರಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ, ಹೀಗಿರುವಾಗ ಇದೀಗ  ಈ ಗದ್ದಲವು ಅವಳ ತಿಳುವಳಿಕೆಗೆ ಮೀರಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಕೆಲ ಜನರಿಂದ ದೀಪಿಕಾಳ ಈ ಹಾಡು ಸಾಕಷ್ಟು ವಿರೋಧವನ್ನು ಎದುರಿಸುತ್ತಿದ್ದು, ಹಾಡಿನಲ್ಲಿ ನಟಿಯ ಸೇನ್ಸುವಲ್ ಮೂವ್ಸ್ ಹಾಗೂ ರಿವೀಲಿಂಗ್ ಬಟ್ಟೆಗಳ ಮೇಲೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.


ಇದನ್ನೂ ಓದಿ-Shahrukh Khan : ಫ್ಯಾನ್ಸ್‌ಗೆ ʼಹೆದರ ಬೇಡಿʼ ಎಂದ ಶಾರುಖ್‌ : ಅದಕ್ಕೆ ಅಭಿಮಾನಿ ಹೀಗಾ ಮಾಡೋದು...!


'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡು ಬಿಡುಗಡೆಯಾದಾಗಿನಿಂದ, ಚಿತ್ರವನ್ನು ಬಹಿಷ್ಕರಿಸುವ ಮಾತುಗಳು ಕೇಳಿ ಬರಲಾರಂಭಿಸಿವೆ. ಹಾಡಿನಲ್ಲಿ ಅಶ್ಲೀಲತೆ ಪ್ರದರ್ಶಿಸಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಚಿತ್ರ ಬಹಿಷ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. 'ಪಠಾಣ್' ಚಿತ್ರದ ಕುರಿತು ಹೇಳುವುದಾದರೆ, ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಹೊರತುಪಡಿಸಿ, ಜಾನ್ ಅಬ್ರಹಾಂ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಜನವರಿ 25 ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.