Pathaan Official Teaser: ಕಿಂಗ್ ಖಾನ್ ಹುಟ್ಟುಹಬ್ಬದ ದಿನ ಶಾರುಖ್ ಅಭಿಮಾನಿಗಳಿಗೆ ಭಾರಿ ಉಡುಗೊರೆ ಸಿಕ್ಕಿದೆ. ಹೌದು, ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಪಠಾಣ್' ಚಿತ್ರದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ದೀರ್ಘ ಕಾಲದಿಂದ ಅಭಿಮಾನಿಗಳು ಈ ಚಿತ್ರದ ಫಸ್ಟ್ ಲುಕ್ ಗಾಗಿ ಕಾತರದಿಂದ ಕಾಯುತ್ತಿದ್ದರು ಮತ್ತು ಇದೀಗ ಅವರ ನಿರೀಕ್ಷೆಗೆ ತೆರೆಬಿದ್ದಂತಾಗಿದೆ. ನಟನ ಹುಟ್ಟುಹಬ್ಬದ ಒಂದು ದಿನ ಮೊದಲು ಪಠಾಣ್ ಮತ್ತು ಶಾರುಖ್ ಖಾನ್ ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿವೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರದಲ್ಲಿ ಶಾರುಖ್ ಖಾನ್ ಗೂಢಚಾರ-ದೇಶಪ್ರೇಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಜನವರಿ 25, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಕೂಡ ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರವನ್ನು 250 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.


ನಿಬ್ಬೇರಗಾಗುವ ಶೈಲಿಯಲ್ಲಿ ಕಾಣಿಸಿಕೊಂಡ ಶಾರುಖ್  
ಚಿತ್ರದ ಟೀಸರ್‌ನಲ್ಲಿ ಶಾರುಖ್ ಖಾನ್ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದನ್ನು ನೀವು ನೋಡಬಹುದು. ಶಾರುಖ್ ಕೂಡ 'ಪಠಾಣ್' ಚಿತ್ರದ ಟೀಸರ್ ಅನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಟೀಸರ್ ಶಾರುಖ್ ಖಾನ್ ತನ್ನ ಕಾರ್ಯಾಚರಣೆಯಲ್ಲಿ ಚಿತ್ರಹಿಂಸೆಗೊಳಗಾದ ಒಂದು ನೋಟದಿಂದ ಪ್ರಾರಂಭವಾಗುತ್ತದೆ. ಆದರೆ, 'ಪಠಾಣ್' ಇನ್ನೂ ಜೀವಂತವಾಗಿಯೇ ಇದ್ದಾನೆ ಎಂಬುದು ಟೀಸರ್ ನಲ್ಲಿ ಕಂಡುಬರುತ್ತಿದೆ. ಚಿತ್ರದಲ್ಲಿ ಅಬ್ಬರದ ಆ್ಯಕ್ಷನ್, ಡ್ರಾಮಾ ಮತ್ತು ರೋಮ್ಯಾನ್ಸ್ ನೋಡಲು ಸಿಗಲಿದೆ ಎಂಬುದನ್ನು ನೀವು ಟೀಸರ್ ನಿಂದ ಅಂದಾಜಿಸಬಹುದು..


ಶಾರುಖ್ ಖಾನ್ ಎಂದಿನಂತೆ ತಮ್ಮ ಡೈಲಾಗ್ ಡೆಲಿವರಿಯಿಂದ ಛಾಪು ಮೂಡಿಸುವುದನ್ನು ಟೀಸರ್ ನಲ್ಲಿ ನೀವು ಕಾಣಬಹುದು. ಚಿತ್ರದ ಬ್ಯಾಕ್ ಗ್ರೌಂಡ್ ಸ್ಕೋರ್ ಕೂಡ ತುಂಬಾ ಚೆನ್ನಾಗಿದೆ. ದೀಪಿಕಾ ಪಡುಕೋಣೆ ಕೂಡ ತನ್ನಲ್ ಲುಕ್‌ನಿಂದ ಜನರನ್ನು ಆಕರ್ಷಿಸಿದ್ದಾಳೆ. ಟೀಸರ್‌ನಲ್ಲಿ ದೀಪೀಕಾ ಪ್ರವೇಶ ಮತ್ತು ಕೆಲವು ಸಾಹಸ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆದಿವೆ. ಇದೇ ವೇಳೆ, ಜಾನ್ ಅಬ್ರಹಾಂ ಕೂಡ ಅದ್ಭುತ ಸಾಹಸಗಳನ್ನು ಮಾಡುತ್ತಿರುವುದನ್ನು ನೀವು ನೋಡಬಹುದು.


ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ "ಸ್ಪೂಕಿ ಕಾಲೇಜಿ"ನಲ್ಲಿ ದೆವ್ವ ಇದ್ಯಾ...?


ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಲ್ಮಾನ್!
ಈ ಚಿತ್ರದ ಸೆಟ್ ನಿಂದ ಈಗಾಗಲೇ ಹಲವು ಫೋಟೋಗಳು ಕೂಡ ಲೀಕ್ ಆಗಿವೆ. ಈ ಚಿತ್ರವನ್ನು ಹೈ-ಆಕ್ಟೇನ್ ಆಕ್ಷನ್ ಚಿತ್ರ ಎಂದು ಹೇಳಲಾಗುತ್ತಿದೆ. ಪ್ರಮುಖ ವಿಷಯವೆಂದರೆ ಸಲ್ಮಾನ್ ಖಾನ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಪಠಾಣ್ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಭಾರೀ ವೈರಲ್ ಆಗಿತ್ತು. ಶಾರುಖ್ ಅವರನ್ನು ದೊಡ್ಡ ಪರದೆಯ ಮೇಲೆ ಮತ್ತೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


ಇದನ್ನೂ ಓದಿ-Urfi Javed: ದಂಪತಿಗಳು ಬೆಡ್ ರೂಮ್ ನಲ್ಲಿ ನಿಯಮಿತವಾಗಿ ಈ ಕೆಲಸ ಮಾಡಿದ್ರೆ 7 ಪಟ್ಟು ಯಂಗ್ ಆಗಿ ಕಾಣಿಸುತ್ತಾರಂತೆ!


ಕೋಟ್ಯಾಂತರ ರೂಪಾಯಿಗಳಲ್ಲಿ ಡಿಜಿಟಲ್ ಹಕ್ಕು ಮಾರಾಟ!
ಪಠಾಣ್ ಚಿತ್ರವು ಥಿಯೇಟರ್‌ಗಳಲ್ಲಿ ಮತ್ತು OTT ಎರಡೂ ವೇದಿಕೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇತ್ತು, ಆದರೆ, ಇದೀಗ ಅದರ ಒಪ್ಪಂದವೂ ಮುಗಿದಿದೆ. ಚಿತ್ರದ ಡಿಜಿಟಲ್ ರೈಟ್ಸ್‌ಗಾಗಿ ನಿರ್ಮಾಪಕರು ದೊಡ್ಡ ಮೊತ್ತವನ್ನು ಪಡೆದಿದ್ದಾರೆ. ಅಮೆಜಾನ್ ಪ್ರೈಮ್ ಜೊತೆ ಸುಮಾರು 200 ಕೋಟಿಗೆ ಈ ಡೀಲ್ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಆದರೆ, ಇದನ್ನು ಚಿತ್ರ ನಿರ್ಮಾಪಕರು ಇದುವರೆಗೆ ಇದನ್ನು ಖಚಿತಪಡಿಸಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ