ಪವನ್ ಕಲ್ಯಾಣ್ ನಟನೆಯ `ಬ್ರೋ` ಸಿನಿಮಾ ಓಟಿಟಿ ಅಂಗಳಕ್ಕೆ..ಯಾವಾಗ? ಎಲ್ಲಿ? ಇಲ್ಲಿದೆ ಫುಲ್ ಡಿಟೇಲ್ಸ್!
Bro Film Streaming on OTT : ಪವನ್ ಕಲ್ಯಾಣ್ ನಟನೆಯ ಬ್ರೋ ಸಿನಿಮಾ ಶೀಘ್ರದಲ್ಲೇ ಓಟಿಟಿ ಅಂಗಳಕ್ಕೆ ಕಾಲಿಡಲಿದೆ. ಹೌದು ಜುಲೈ 28ಕ್ಕೆ ಬಿಡುಗಡೆಯಾದ ಸಿನಿಮಾ ಪ್ರೇಕ್ಷರಿಂದ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಅಲ್ಲದೇ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಕಮಾಲ್ ಮಾಡಲಿಲ್ಲ.
Bro Film OTT : ಮೊದಲ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಈ ಬ್ರೋ ಸಿನಿಮಾ ಮುದುವರೆಯುತ್ತಲೇ ನೆಲಕಚ್ಚಿತು. ಇನ್ನು ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಗೆ ಸೋದರಳಿಯ ಸಾಯಿ ಧರಮ್ ತೇಜ್ ಸಹ ನಟಿಸಿದ್ದಾರೆ. ತಮಿಳಿನ ರಿಮೇಕ್ ಆದ ಈ ಸಿನಿಮಾದಲ್ಲಿ ಬಾಲಿವುಡ್‌ನ 'ಓಮೈ ಗಾಡ್' ಸಿನಿಮಾ ನೆನಪಿಸುವ ಕತೆ ಇದೆ.
ಇನ್ನು ಈ ಸಿನಿಮಾ ತಮಿಳಿನ 'ವಿನೋದಯ ಸಿತಂ' ಸಿನಿಮಾದ ರಿಮೇಕ್ ಆಗಿದೆ. ಸದ್ಯ ಈ ಸಿನಿಮಾ ಓಟಿಟಿ ಅಂಗಳಕ್ಕೆ ಕಾಲಿಡಡಲಿದ್ದು, ಡೇಟ್ ಫಿಕ್ಸ್ ಆಗಿದೆ. ಯಾವಾಗ ಅಂತೀರಾ....? ಮುಂದೆ ಓದಿ....
ಇದನ್ನೂ ಓದಿ-Casting Couch: ರಣವೀರ್ ಸಿಂಗ್‌ನಿಂದ ಆಯುಷ್ಮಾನ್‌ವರೆಗೆ ಈ ನಟರು ಕಾಸ್ಟಿಂಗ್ ಕೌಚ್‌ನ ಕಪಿಮುಷ್ಠಿಗೆ ಸಿಲುಕಿದವರು!
ಆಗಸ್ಟ್ 25 ರಂದು ಈ ಬ್ರೋ ಸಿನಿಮಾ ಓಟಿಟಿ ವೇದಿಕೆ ಮೇಲೆ ಸ್ಟ್ರೀಮಿಂಗ್ ಆಗಿಲಿದೆ. ವಿಶೇಷ ಏನಪ್ಪಾ ಅಂದ್ರೆ ಈ ಸಿನಿಮಾ ಸದ್ಯ ಕನ್ನಡಕ್ಕೂ ಡಬ್ ಆಗಲಿದೆ. ಹೌದು ತೆಲುಗು, ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಡಿಜಿಟಲ್ ದೊರೆಯಲಿದೆ.
ಇನ್ನು ಈ ಸಿನಿಮಾ ಓಟಿಟಿಗೆ ಹೇಳಿ ಮಾಡಿಸಿದ ಸಿನಿಮಾ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಇದು ಕಮರ್ಷಿಯಲ್ ಎಲಿಮೆಂಟ್ಸ್ ಜೊತೆ ಫ್ಯಾಮಿಲಿ ಎಂಟ್ರೆಟೈನರ್ ಸಿನಿಮಾ ಎನ್ನಲಾಗುತ್ತಿದೆ. ಸದ್ಯ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ಭಾರೀ ಮೊತ್ತವನ್ನು ನೀಡಿ ಖರೀದಿಸಿದೆ.
ಇದನ್ನೂ ಓದಿ-ಡಾಲಿ ಹುಟ್ಟುಹಬ್ಬಕ್ಕೆ ಸಿಡಿಪಿ ರಿಲೀಸ್ ಮಾಡಲಿದ್ದಾರೆ ಆ ಸ್ಪೆಷಲ್ ಗೆಸ್ಟ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.