ವಿನಯ್ ಸಿನಿಮಾ ಕ್ರೇಜ್... ಬಸ್ ನಲ್ಲಿ ಆಗಮಿಸಿ ಸರಳ ಪ್ರೇಮಕಥೆ ವೀಕ್ಷಿಸಿದ ಸಿನಿಪ್ರಿಯರು!
Ondu sarala prema kathe: ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಹಾಗೂ ಸಿಂಪಲ್ ಸುನಿ ಜೋಡಿಯ ಒಂದು ಸರಳ ಪ್ರೇಮಕಥೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ.
Ondu sarala prema kathe: ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಹಾಗೂ ಸಿಂಪಲ್ ಸುನಿ ಜೋಡಿಯ ಒಂದು ಸರಳ ಪ್ರೇಮಕಥೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್, ನಾಯಕ ವಿನಯ್, ನಾಯಕಿಯಾರದ ಸ್ವಾತಿಷ್ಠ, ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ಸಿನಿರಸಿಕರಿಗೆ ಕನೆಕ್ಟ್ ಆಗುತ್ತಿದೆ. ವಿಮರ್ಷಕರಿಂದ ಹಾಗೂ ಪ್ರೇಕ್ಷಕರಿಂದ ಒಳ್ಳೆ ಅಭಿಪ್ರಾಯ ಪಡೆದುಕೊಳ್ಳುತ್ತಿರುವ ಒಂದು ಸರಳ ಪ್ರೇಮಕಥೆ ಸಿನಿಮಾದ ಕ್ರೇಜ್ ನಿಧಾನವಾಗಿ ಗಾಂಧಿನಗರವನ್ನು ಆವರಿಸಿಕೊಳ್ಳುತ್ತಿದೆ.
ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ಜೊತೆ ಕಿರಿಕ್ ಬೆಡಗಿ? ಇದು ರಶ್ಮಿಕಾನಾ!!
ಹಿತಾನುಭವ, ಮನರಂಜನೆಯ ರಸದೌತಣ ನೀಡುತ್ತಿರುವ ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಬೆಂಗಳೂರಿನ ಗೊರಗುಂಟೆಪಾಳ್ಯ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್ಮೆಂಟ್ ಜನ ಬಸ್ ನಲ್ಲಿ ಒರಿಯನ್ ಮಾಲ್ ಗೆ ಆಗಮಿಸಿ ಸಿನಿಮಾ ನೋಡಿದ್ದಾರೆ. ಚಿತ್ರದ ಪೋಸ್ಟರ್ ಹಿಡಿದು ಗುನುಗುನುಗು ಎಂದು ಹಾಡು ಹೇಳಿ ಸರಳ ಪ್ರೇಮಕಥೆ ಜೈಕಾರ ಹಾಕಿದ್ದಾರೆ. ಇದಪ್ಪ ದೊಡ್ಮನೆ ಕುಡಿ ಸಿನಿಮಾ ಕ್ರೇಜ್ ಎನ್ನುತ್ತಿದೆ ಗಾಂಧಿನಗರ.
ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಸಿನಿ ರಸಿಕರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಚಿತ್ರ ನೋಡಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಖುಷಿಪಟ್ಟರು. ವಿನಯ್, ಸುನಿ ಹಾಗೂ ಇಡೀ ತಂಡದ ಶ್ರಮಕ್ಕೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
'ಒಂದು ಸರಳ ಪ್ರೇಮಕಥೆ' ವಿನಯ್ ರಾಜ್‌ಕುಮಾರ್‌ಗೆ ಬ್ರೇಕ್ ಕೊಟ್ಟಿದೆ.
ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಿಳಿ ಹಾಸ್ಯ, ಒನ್‌ಲೈನರ್ ಡೈಲಾಗ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ. ಇಂತಹ ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಅವರನ್ನು ಜನ ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ 10ರ ಈ ಸ್ಪರ್ಧಿಯೇ ಕಾರ್ತಿಕ್ ಬಾಳ ಸಂಗಾತಿ ಆಗೋದಂತೆ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.