ಬೆಂಗಳೂರು: ದೇಶದ ಕೆಲವು ಭಾಗಗಳಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರಕ್ಕೆ ವಿರೋಧವ್ಯಕ್ತವಾಗುತ್ತಿದೆ ಅಲ್ಲದೆ  ಚಿತ್ರದ ಮುಖ್ಯ ಭೂಮಿಕೆಯಲ್ಲಿ  ಪದ್ಮಾವತಿಯ ಪಾತ್ರವನ್ನು ನಿರ್ವಹಿಸಿರುವ ಕನ್ನಡತಿ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆಯನ್ನು ಸಹಿತ ಒಡ್ಡಲಾಗಿದೆ.


COMMERCIAL BREAK
SCROLL TO CONTINUE READING

ಈಗ ಚಿತ್ರದ ಕುರಿತು ವಿವಾದ ಉಂಟಾಗಿರುವ  ಸಂದರ್ಭದಲ್ಲಿ ಚಿತ್ರಕ್ಕೆ ಹಾಗೂ ನಟಿ ದೀಪಿಕಾಗೆ ಬೆಂಬಲವನ್ನು ವ್ಯಕ್ತಪಡಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುವ ಮೊದಲು ಸಿನಿಮಾವನ್ನು ನೋಡಬೇಕೆಂದು ಅಭಿಪ್ರಾಯಪಟ್ಟರಲ್ಲದೆ, ದೀಪಿಕಾ ಪಡುಕೋಣೆಯ ಕುರಿತು ಮಾತನಾಡುತ್ತಾ ಒಬ್ಬ ನಟಿಯಾಗಿ ಆಕೆ ತನ್ನ ಕರ್ತ್ಯವ್ಯವನ್ನು ನಿರ್ವಹಿಸಿದ್ದಾಳೆ ಮತ್ತು ಅಂತಹ ಪಾತ್ರಗಳನ್ನೂ ನಿಭಾಯಿಸುವುದು ಕೂಡ ಅತ್ಯಂತ ಸವಾಲಿನ ಕೆಲಸವೆಂದರು. 


ಚಿತ್ರದ ಕಥೆಯು ಯಾವಾಗಲೂ ಕೂಡಾ ನಿರ್ದೇಶಕನ ಮೇಲೆ ಅವಲಂಬಿತವಾಗಿರುತ್ತದೆ ಅದರಲ್ಲೂ  ಬನ್ಸಾಲಿಯಂತಹ ನಿರ್ದೇಶಕರು ಆ ರೀತಿಯ ಮನೋಭಾವದರಲ್ಲ ಅಂತ ಅನಿಸುತ್ತದೆ. ಆದ್ದರಿಂದ ಯಾರನ್ನೋ ಬಲಿಪಶುಮಾಡುವ ಮೊದಲು ಜನರು ಚಿತ್ರವನ್ನು ನೋಡಿ ಅನಂತರ ಅದು ಸರಿಯೋ ತಪ್ಪು ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಾದ ಮಾರ್ಗ ಎಂದು ಈ ಸಂಧರ್ಭದಲ್ಲಿ ಅಭಿಪ್ರಾಯಪಟ್ಟರು.