ʼಪಿಂಕಿ ಎಲ್ಲಿʼ ನಿರ್ಮಾಪಕ ಕೃಷ್ಣೇಗೌಡರ ಮನದಾಳ..!
ʼಪಿಂಕಿʼ ಎಲ್ಲಿ ಚಿತ್ರ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಪಿಂಕಿ ಎಲ್ಲಿ ಚಿತ್ರಕ್ಕೆ ನಿರ್ಮಾಪಕರಾಗಿ ಜೀವ ತುಂಬುವ ಮೂಲಕ ಪರ್ಯಾಯ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆಗಿರುವ ಕೃಷ್ಣೇಗೌಡರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Pinki Elli Kannada movie : ವಿಶ್ವ ಮಟ್ಟದಲ್ಲಿ ಸದ್ದು ಮಾಡಿರುವ ʼಪಿಂಕಿ ಎಲ್ಲಿʼ ಚಿತ್ರ ಈ ವಾರ ಅಂದರೆ ಜೂನ್ 2ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಅನೇಕ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಚಿತ್ರ ಪಂಕಿ ಎಲ್ಲಿ? ಈಗಾಗಲೇ ಇದೊಂದು ಭಿನ್ನ ಬಗೆಯ ಚಿತ್ರವೆಂಬುದು ಎಲ್ಲರಿಗೂ ಗೊತ್ತಾಗಿದೆ.
ಸಾಮಾನ್ಯವಾಗಿ, ಇಂಥಾ ಸಿನಿಮಾಗಳು ದೃಷ್ಯ ರೂಪ ಧರಿಸಬೇಕೆಂದರೆ, ವ್ಯವಹಾರಗಳಾಚೆ ಆಲೋಚಿಸುವ ಸದಭಿರುಚಿಯ ನಿರ್ಮಾಪಕರ ಅವಶ್ಯಕತೆ ಇರುತ್ತದೆ. ನಿರ್ದೇಶಕರ ಮನಸಲ್ಲಿ ಹುಟ್ಟು ಪಡೆದು, ಅಲ್ಲೇ ಅಡಗಿ ಹೋಗುತ್ತಿದ್ದ ಪಿಂಕಿ ಎಲ್ಲಿ ಚಿತ್ರಕ್ಕೆ ನಿರ್ಮಾಪಕರಾಗಿ ಜೀವ ತುಂಬುವ ಮೂಲಕ ಪರ್ಯಾಯ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆಗಿರುವ ಕೃಷ್ಣೇಗೌಡರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಉಚಿತ ಅಕ್ಕಿ ನೀಡಿದ್ರೆ ಜನ ಸೋಮಾರಿ ಆಗ್ತಾರೆ ಅನ್ನೋದು ಸುಳ್ಳು..!
ಕೃಷ್ಣೇಗೌಡರು ನಟನಾಗಿ, ನಿರ್ದೇಶಕನಾಗಿಯೂ ಹೆಸರುವಾಸಿಯಾಗಿರುವ ಬಹುಮುಖ ಪ್ರತಿಭೆ ಹೊಂದಿರುವವರು. ದೂರದರ್ಶನ ಕಾಲದಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದ ಕೃಷ್ಣೇಗೌಡರು ಈಗೊಂದಷ್ಟು ವರ್ಷಗಳಿಂದ ನಿರ್ಮಾಪಕರಾಗಿಯೂ ಸಕ್ರಿಯರಾಗಿದ್ದಾರೆ. ರಂಗಭೂಮಿಯಿಂದ ಬಂದಿರುವ ಕೃಷ್ಣೇಗೌಡರು ನಿರ್ಮಾಪಕರಾಗಿಯೂ ಕೂಡಾ ವಿಶಿಷ್ಟ ಅಭಿರುಚಿ ಹೊಂದಿದ್ದಾರೆ. ಅದಿಲ್ಲದೇ ಹೋಗಿದ್ದರೆ, ಪಿಂಕಿ ಎಲ್ಲಿ ಚಿತ್ರ ಇಷ್ಟು ಚೆನ್ನಾಗಿ ಮೂಡಿ ಬಂದು ವಿಶ್ವ ಮಟ್ಟದಲ್ಲಿ ಸದ್ದು ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಕೃಷ್ಣೇಗೌಡರು ಅದಾಗಲೇ ಪೃಥ್ವಿ ಕೋಣನೂರು ನಿರ್ದೇಶನದಲ್ಲಿ ಮೂಡಿ ಬಂದಿದ್ದ ರೈಲ್ವೇ ಚಿಲ್ಡ್ರನ್ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಅದಾಗಿ ಬಹು ಕಾಲದ ನಂತರ ಯಾರ್ಯಾರದ್ದೋ ಮೂಲಕ ಅದೇ ಪೃಥ್ವಿ, ಒಂದು ಕಥೆಯೊಂದಿಗೆ ಎದುರು ನಿಂತಾಗ ಕೃಷ್ಣೇಗೌಡರು ಯಾವ ಯೋಚನೆಯನ್ನೂ ಮಾಡದೆ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಹಾಗೆ ಕಥೆಯನ್ನೂ ಪೂರ್ತಿ ಕೇಳದೆ ಹಣ ಹೂಡಲು ಒಪ್ಪಿಕೊಂಡಿದ್ದರ ಹಿಂದೆ ಇದ್ದದ್ದು ನಿರ್ದೇಶಕ ಪೃಥ್ವಿ ಅವರ ಮೇಲಿದ್ದ ಅಗಾಧ ನಂಬಿಕೆ.
ಇದನ್ನೂ ಓದಿ: ಮೇಘಾ ಶೆಟ್ಟಿ ಫ್ಯಾನ್ಸ್‌ಗೆ ಸಿಹಿಸುದ್ದಿ..! ಸಿನಿಮಾನಾ.. ಸಿರಿಯಲ್‌ನಾ...? ಗೆಸ್ ಮಾಡಿ
ಇಂಥಾ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಪೃಥ್ವಿ ಸಿನಿಮಾ ಮಾಡಿದ್ದಾರೆಂಬ ತುಂಬು ತೃಪ್ತಿ ಕೃಷ್ಣೇಗೌಡರಲ್ಲಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾಗಳು ಒಂದು ವಲಯದಲ್ಲಷ್ಟೇ ಅಡ್ಡಾಡುತ್ತವೆ. ಆದರೆ, ಕೃಷ್ಣೇಗೌಡರ ಬೆಂಬಲದೊಂದಿಗೆ ಅದು ಇದೇ ವಾರ ಎಲ್ಲ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದೆ. ಇನ್ನು ವ್ಯಾವಹಾರಿಕ ದೃಷ್ಟಿಯಿಂದಲೂ ಈ ಚಿತ್ರ ಗೆದ್ದಿದೆ. ಈಗಾಗಲೇ ಹಿಂತಿ, ತೆಲುಗು, ತಮಿಳು ಭಾಷೆಗಳಿಂದಲೂ ರೀಮೇಕ್ ಹಕ್ಕುಗಳಿಗಾಗಿ ಬೇಡಿಕೆ ಬರುತ್ತಿದೆ. ಈ ಬಗೆಗಿನ ಮಾತುಕತೆಗಳೂ ನಡೆಯುತ್ತಿವೆ. ಸಿನಿಮಾವೊಂದು ಗಟ್ಟಿತನ ಹೊಂದಿದ್ದರೆ ಮಾತ್ರವೇ ಇದೆಲ್ಲವೂ ಸಾಧ್ಯವಾಗುತ್ತವೆ.
ಬಾಲನಟನಾಗಿ ಊರ ಹಬ್ಬಗಳಲ್ಲಿ ಪ್ರತಿಭೆ ಪ್ರದರ್ಶ ಮಾಡುತ್ತಾ, ನಂತರ ರಂಗಭೂಮಿಯಲ್ಲಿಯೂ ನಟ ನಿರ್ದೇಶಕನಾಗಿ ಪ್ರಸಿದ್ಧರಾಗಿದ್ದವರು ಕೃಷ್ಣೇ ಗೌಡರು. ಆ ನಂತರ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ, ಅಲ್ಲಿಯೂ ನಟ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಅವರು, ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರಾಗಿ ಸಕ್ರಿಯರಾಗಿದ್ದಾರೆ. ಒಂದಷ್ಟು ಸದಭಿರುಚಿಯ ಚಿತ್ರಗಳು ಬೆಳಕು ಕಾಣಲು ಕಾರಣರಾಗುತ್ತದ್ದಾರೆ. ಈ ಹಾದಿಯಲ್ಲಿ ಪಿಂಕಿ ಎಲ್ಲಿ ಚಿತ್ರ ಓರ್ವ ನಿರ್ಮಾಪಕರಾಗಿ ಕೃಷ್ಣೇಗೌಡರನ್ನು ಎಲ್ಲ ರೀತಿಯಿಂದಲೂ ಸಂತೃಪ್ತಗೊಳಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ