Sushant Singh Rajput ಸಾವಿಗೆ ಶೋಕ ವ್ಯಕ್ತಪಡಿಸಿದ PM Modi ಹೇಳಿದ್ದೇನು?
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸುಶಾಂತ್ ದೀರ್ಘಕಾಲದಿಂದ ಒತ್ತಡದಿಂದ ಬಳಲುತ್ತಿದ್ದರು. ಕಳೆದ ಹಲವು ದಿನಗಳಿಂದ ಅವರು ಔತಣಕೂಟ ಹಾಗೂ ಮೇನ್ ಸ್ಟ್ರೀಮ್ ನಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ದಿನಗಳ ಹಿಂದೆಯೇ ಅವರ ಮಾಜಿ ಮ್ಯಾನೇಜರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ನವದೆಹಲಿ: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ ಬಿತ್ತರಗೊಂಡ ಈ ಸುದ್ದಿಯ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಸುಶಾಂತ್ ಸಿಂಗ್ ರಾಜಪುತ್ ಓರ್ವ ಉತ್ತಮ ನಟರಾಗಿದ್ದರು. ಬಹು ಬೇಗನೆ ಅವರು ನಮ್ಮನ್ನು ಅಗಲಿದ್ದಾರೆ ಎಂದು ಹೇಳಿದ್ದಾರೆ.
ಸುಶಾಂತ್ ಸಿಂಗ್ ರಾಜಪುತ್ ಅವರ ಸಾವಿನ ಹಿನ್ನೆಲೆ ಇಡೀ ಬಿ ಟೌನ್ ನಲ್ಲಿಯೇ ಶೋಕದ ವಾತಾವರಣ ಪಸರಿಸಿರುವ ನಡುವೆಯೇ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದು, " ಪ್ರತಿಭಾವಂತ ಯುವ ಕಲಾವಿದರಾಗಿರುವ ಸುಶಾಂತ್ ಸಿಂಗ್ ರಾಜಪುತ್ ಬಹುಬೇಗನೆ ನಮ್ಮನ್ನು ಅಗಲಿದ್ದಾರೆ. ಸುಶಾಂತ್ ಓರ್ವ ಪ್ರತಿಭಾವಂತ ಟಿವಿ ಹಾಗೂ ಚಿತ್ರ ನಟರಾಗಿದ್ದರು. ಅಲ್ಪಕಾಲದಲ್ಲಿ ಅವರು ಮನೋರಂಜನೆಯ ಜಗತ್ತಿನಲ್ಲಿ ಅವರು ಸಾಧಿಸಿದ್ಧ ಯಶಸ್ಸು ಇತರರಿಗೆ ಮಾದರಿಯಾಗಿತ್ತು. ಅವರು ಈ ರೀತಿ ನಮ್ಮನ್ನು ಅಗಲಿದ್ದು, ಎಲ್ಲರ ಪಾಲಿಗೆ ಇದು ಆಘಾತ ತಂದಿದೆ" ಎಂದಿದ್ದಾರೆ.
ದೀರ್ಘಕಾಲದಿಂದ ಅವರು ಒತ್ತಡದಿಂದ ಬಳಲುತ್ತಿದ್ದರು
ಮೂಲಗಳ ಪ್ರಕಾರ ಸುಶಾಂತ್ ಸಿಂಗ್ ರಾಜಪುತ್ ಒತ್ತಡದಿಂದ ಬಳಲುತ್ತಿದ್ದರು . ಹಲವು ದಿನಗಳಿಂದ ಅವರು ಬಿಟೌನ್ ನಲ್ಲಿ ನಡೆಯುತ್ತಿದ್ದ ಔತಣಕೂಟ ಹಾಗೂ ಮೇನ್ ಸ್ಟ್ರೀಮ್ ನಿಂದ ದೂರ ಉಳಿದಿದ್ದರು. ಕೆಲ ದಿನಗಳ ಹಿಂದೆಯೇ ಅವರ ಮಾಜಿ ಮ್ಯಾನೇಜರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಖ್ಯಾತ ಬಾಲಿವುಡ್ ಚಿತ್ರ 'ಕಾಯಿ ಪೋ ಚೆ' ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ತನ್ನ ಚಿಕ್ಕದಾದ ಕರಿಯರ್ ನಲ್ಲಿ ಬಿಟೌನ್ ನಲ್ಲಿ ಅವರು ತನ್ನದೇ ಆದ ಛಾಪು ಮೂಡಿಸಿದರು. 'MS ಧೋನಿ' ಚಿತ್ರದ ಮೂಲಕ ಅವರಿಗೆ ಅಪಾರ ಕೀರ್ತಿ ಲಭಿಸಿತ್ತು.
ಬಿಹಾರ ರಾಜ್ಯದ ಪೂರ್ಣಿಯಾ ಜಿಲ್ಲೆಯ ನಿವಾಸಿಯಾಗಿದ್ದ ಸುಶಾಂತ್ ಸಿಂಗ್ ರಾಜಪುತ್, 'ಕಿಸ್ ದೇಶ ಮೇ ಹೈ ಮೇರಾ ದಿಲ್' ಹೆಸರಿನ ಧಾರಾವಾಹಿ ಮೂಲಕ ಕಿರುತೆರೆಯ ಮೇಲೆ ತನ್ನ ವೃತ್ತಿಜೀವನ ಆರಂಭಿಸಿದ್ದರು. ಏಕತಾ ಕಪೂರ್ ಅವರ 'ಪವಿತ್ರ ರಿಷ್ತಾ' ಧಾರಾವಾಹಿಯ ಮೂಲಕ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಇದಾದ ಬಳಿಕ 'ಕಾಯಿ ಪೋ ಚೆ' ಚಿತ್ರದ ಮೂಲಕ ಅವರು ಬಾಲಿವುಡ್ ಗೆ ಕಾಲಿಟ್ಟಿದ್ದರು.ಚಿತ್ರದಲ್ಲಿನ ಅವರ ಅಭಿನಯಕ್ಕೆ ಭಾರಿ ಪ್ರಶಂಶೆ ವ್ಯಕ್ತವಾಗಿತ್ತು.