ಬೆಂಗಳೂರು : ಧ್ರುವ ಸರ್ಜಾ (Dhruva Sarja) ನಟನೆಯ ಪೊಗರು ಸಿನಿಮಾ ಈಗ ಕನ್ನಡದ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಸಿನಿಮಾದ ಟ್ರೇಲರ್, ಹಾಡು ಮತ್ತು ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಮತ್ತು ಸಿನಿಮಾದ ಮೇಲೆ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಈ ನಡುವೆ, ಚಿತ್ರ ತಂಡ ಮತ್ತೊಂದು ಸುದ್ದಿಯನ್ನು ಬಯಲು ಮಾಡಿದೆ.  ಪೊಗರು ಸಿನಿಮಾ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗಲಿದೆ.  ಹಾಗಾಗಿ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಭರ್ಜರಿ ಪ್ರಚಾರ ಈಗಾಗಲೇ ಆರಂಭಗೊಂಡಿದೆ. 


COMMERCIAL BREAK
SCROLL TO CONTINUE READING

ತೆಲುಗಿನಲ್ಲಿ ಪೊಗರು, ತಮಿಳಿನಲ್ಲಿ ಸೆಮ್ಮಾ ತಿಮಿರು..!
ನಾಳೆ ಅಂದರೆ, ಹೊಸ ವರ್ಷದ (New Year) ಮೊದಲ ದಿನ ಪೊಗರು ಚಿತ್ರದ ತೆಲುಗು ಮತ್ತು ತಮಿಳು ಟ್ರೇಲರ್ ಗಳನ್ನು ಬಿಡುಗಡೆ ಮಾಡಲು ಚಿತ್ರ ತಂಡ ಸಜ್ಜಾಗಿದೆ.  ತೆಲುಗಿನಲ್ಲಿ ಇದು ಪೊಗರು ಟೈಟಲ್ ನಲ್ಲಿಗೆ ತೆರೆಗೆ ಬರಲಿದೆ. ಅದೇ ತಮಿಳಿನಲ್ಲಿ ಅದರ ಟೈಟಲ್ ಸೆಮ್ಮಾ ತಿಮಿರು ( Semma Thimiru)ಆಗಿರಲಿದೆ.  ಕನ್ನಡದ ಟ್ರೇಲರ್ ನವೆಂಬರ್ ನಲ್ಲಿ ರಿಲೀಸ್ ಆಗಿತ್ತು.  ಕನ್ನಡದ ಟ್ರೇಲರ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. 30 ಮಿಲಿಯನ್ ವೀವ್ಸ್ ಸಿಕ್ಕಿದೆ. ಅದೇ ಬೆಂಬಲ ತಮಿಳು ತೆಲುಗಿನಲ್ಲೂ ಸಿಗಬಹುದೆಂಬ ಆಶಾವಾದದಲ್ಲಿದೆ ಪೊಗರು ಟೀಂ. 


Sumalatha: ತೆರೆ ಮೇಲೆ ಬರಲಿದೆ ನಟಿ ಸುಮಲತಾ 'ರಾಜಕೀಯ ಜೀವನ ಆಧಾರಿತ ಬಯೋಪಿಕ್'‌..!


ಹಿಂದಿ ಡಬ್ಬಿಂಗ್ ರೈಟ್ಸ್ 7.2 ಕೋಟಿಗೆ ಮಾರಾಟ :
ಕನ್ನಡದಲ್ಲಿ ಧ್ರುವ ಸರ್ಜಾ (Dhruva Sarja) ನಟನೆಯ ಪೊಗರು (Pagaru) ಇಷ್ಟೊತ್ತಿಗೆ ರಿಲೀಸ್ ಆಗಿರಬೇಕಿತ್ತು. ಆದರೆ, ಲಾಕ್ ಡೌನ್ (Lock Down) ಮತ್ತು ಕರೋನಾ ಕಾರಣದಿಂದ ರಿಲೀಸ್ ಡೇಟ್ ಮುಂದೂಡಿಕೆ ಆಗುತ್ತಲೇ ಬರುತ್ತಿದೆ.  ಸದ್ಯ ರಿಲೀಸ್ ಡೇಟ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.   ಈ ನಡುವೆ ಮತ್ತೊಂದು ಸುದ್ದಿ ಕೂಡಾ ಚಿತ್ರ ತಂಡದ ಮೂಲಗಳಿಂದ ಬಂದಿದೆ. ಪೊಗರು ಚಿತ್ರದ ಹಿಂದಿ ಡಬ್ಬಿಂಗ್ ರೈಟ್ 7.2 ಕೋಟಿ ರೂಪಾಯಿಗೆ ಮಾರಾಟ ಆಗಿದೆಯಂತೆ.  ತೆಲುಗು ಅವತರಣಿಕೆ ಕೂಡಾ ಒಳ್ಳೆ ಮೊತ್ತಕ್ಕೆ ಸೇಲ್ ಆಗಿದೆಯಂತೆ. ತಮಿಳಿನ ರೇಟ್ ಗೊತ್ತಾಗಿಲ್ಲ. 


Cinema) ಎಂದು ಚಿತ್ರ ತಂಡ ಎದೆಯುಬ್ಬಿಸಿ ಹೇಳುತ್ತಿದೆ.  ಎಲ್ಲಾ ಭಾಷಿಕರಿಗೂ ಇದು ಇಷ್ಟವಾಗಲಿದೆಯಂತೆ.  ಹಾಗಾಗಿಯೇ ತಮಿಳು, ತೆಲುಗಿನಲ್ಲೂ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಸಿನಿಮಾದಲ್ಲಿ ದ್ರುವ ಸರ್ಜಾ ಜೊತೆ ಮಯೂರಿ, ರವಿಶಂಕರ್, ಚಿಕ್ಕಣ್ಣ ಮುಂತಾದವರಿದ್ದಾರೆ. ಹಿನ್ನೆಲೆ ಸಂಗೀತ ಹರಿಕೃಷ್ಣ, ಸಂಗೀತ ಸಂಯೋಜನೆ ಚಂದನ್ ಶೆಟ್ಟಿ, ಛಾಯಾಗ್ರಹಣ ವಿಜಯ್ ಮಿಲ್ಟನ್ ನೋಡಿಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.