ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್  ಬಳಿಕ ಈಗ ನಟಿ ಪವಿತ್ರಾ ಗೌಡರನ್ನು ಸಹ ವಶಕ್ಕೆ ಪಡೆದಿದ್ದಾರೆ. ಆರ್​​.ಆರ್​.ನಗರ ಠಾಣೆಯ ಪೊಲೀಸರು ಪವಿತ್ರಾ ಗೌಡ ಅವರನ್ನು ಕೊಲೆ ಸಂಬಂಧ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದರ್ಶನ್‌ ಅರೆಸ್ಟ್‌ ಆಗಿದ್ದೇಕೆ? ಪವಿತ್ರ ಗೌಡಗಾಗಿ ನಡೀತಾ ಕೊಲೆ? ಮೃತ ರೇಣುಕಾಸ್ವಾಮಿ ಯಾರು ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌


ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲು ನಟ ದರ್ಶನ್  ಅವರನ್ನು ಅರೆಸ್ಟ್‌ ಮಾಡಿದ್ದರು. ಇದೀಗ ಕೊಲೆಯಾದ ರೇಣುಕಾ ಸ್ವಾಮಿ ನಟಿ ಪವಿತ್ರಾ ಗೌಡ ಅವರ ಪೋಸ್ಟ್ ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು ಹೇಳಲಾಗುತ್ತಿದೆ. ಈ ಕಾರಣಕ್ಕೆ  ನಟಿ ಪವಿತ್ರಾ ಗೌಡ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. 


ರೇಣುಕಾಸ್ವಾಮಿ‌ ಅವರನ್ನು ದರ್ಶನ್‌ ಜೂನ್ 08 ನೇ ತಾರೀಖು ಕರೆಸಿಕೊಂಡು, RR ನಗರ ಮನೆ ಬಳಿ ಇರುವ ಶೆಡ್ ನಲ್ಲಿ ಕೂಡಿಹಾಕಿದ್ದರು ಎಂದು ಆರೋಪಿಸಲಾಗಿದೆ. ಪವಿತ್ರಾ ಗೌಡ ಸಹ ಈ ವೇಳೆ ಸ್ಥಳದಲ್ಲಿ ಇದ್ದರು ಎನ್ನಲಾಗಿದೆ. ಈ ಹಿನ್ನೆಲೆ ಪೊಲೀಸರು ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. 


ಇದನ್ನೂ ಓದಿ: Pavithra gowda: ದರ್ಶನ್‌ ವಿವಾದದಲ್ಲಿ ಕೇಳಿಬರುತ್ತಿರುವ ಪವಿತ್ರ ಗೌಡ ಯಾರು? ಇವರ ಹಿನ್ನಲೆ ಏನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.