Shobitha Shivanna Death Note: ಬ್ರಹ್ಮಗಂಟು ಧಾರವಾಹಿ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸುತ್ತ ಅನುಮಾನಗಳು ಹುಟ್ಟಿಕೊಂಡಿದ್ದು, ಇದೀಗ ಇವರು ಸಾವಿಗೆ ಮುಂಚೆ ಬರೆದಿರುವ ಡೆತ್‌ ನೋಟ್‌ ಸಿಕ್ಕಿದೆ. 


COMMERCIAL BREAK
SCROLL TO CONTINUE READING

ಡಿಸೆಂಬರ್‌ 01 ರಂದು ನಟಿ ಶೋಭಿತಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಈ ಸುದ್ದಿ ಕೇಳಿ ಸಿನಿಮಾ ಇಂಡಸ್ಟ್ರಿ ಬೆಚ್ಚಿ ಬಿದ್ದಿದೆ. ಒಂದು ತಿಂಗಳ ಹಿಂದೆಯಷ್ಟೆ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಗುರುಪ್ರಸಾದ್‌ ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಕಿರುತೆರೆಯ ಖ್ಯಾತ ನಟಿಯ ಸಾವಿನ ಸುದ್ದಿ ಇಡೀ ಇಂಡಸ್ಟ್ರಿಗೆ ಆಘಾತವನ್ನುಂಟು ಮಾಡಿದೆ. 


ನಟಿ ಶ್ರೀದೇವಿ ಸುದ್ದಿ ಕೇಳಿ ಸಿನಿಮಾ ಇಂಡಸ್ಟ್ರಿ ಆಘಾತಕ್ಕೊಳಗಾಗಿತ್ತು, ಈ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹಲವರು, ಇದು ಕೊಲೆಯೋ ಅಥವಾ ನಿಜವಾಗಿಯೂ ಆತ್ಮಹತ್ಯೆಯೋ ಎಂದು ಅನುಮಾನ ವ್ಯಕ್ತಪಡಿಸಿದ್ದರು, ಇದೀಗ ಇದರ ಮಧ್ಯೆ ನಟಿ ಬರೆದಿರುವಂತಹ ಡೆತ್‌ ನೋಟ್‌ ಪತ್ತೆಯಾಗಿದೆ. ಡೆತ್‌ ನೋಟ್‌ ಅನ್ನು ವಶ ಪಡಿಸಿಕೊಂಡಿರುವ ಪೋಲಿಸರು ಈ ಕುರಿತಾದ ವಿಚಾರಣೆಯನ್ನು ನಡೆಸುತ್ತಿದ್ದಾರೆ.


ಹೈದರಾಬಾದ್‌ನ ಗಚ್ಚಿಬೌಳಿಯಲ್ಲಿ ತಮ್ಮ ಪತಿಯ ಮನೆಯಲ್ಲಿ ನಟಿ ಶೋಭಿತಾ ಶಿವಣ್ಣ ನೇಣು ಬಿಗಿದುಕೊಂಡಿದ್ದರು, ವಿಚಾರ ತಿಳಿಯುತ್ತಿದತೆ ಸ್ಥಳಕೆ ಪೋಲಿಸ್‌ ಅಧಿಕಾರಿಗಳು ದೌಡಾಯಿಸಿ ತನೆಖೆ ಕೂಡ ನಡೆಸಿದ್ದರು. ಈ ವೇಳೆ ಪೋಲಿಸರ ಕೈಗೆ ಡೆತ್‌ ನೋಟ್‌ ಸಿಕ್ಕಿದೆ.ಇದರಲ್ಲಿ ನಟಿ  'ಇಫ್‌ ಯು ವಾಂಟ್‌ ಟು ಕಮಿಟ್‌ ಸೂಸೈಡ್‌, ಯು ಕ್ಯಾನ್‌ ಡು ಇಟ್‌' ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಸುತ್ತಿರುವ ಪೋಲಿಸರು ನಟಿ ಈ ರೀತಿ ಬರೆಯಲು ಕಾರಣ ಏನು ಎಂಬುದರ ಕುರಿತು ವಿಚಾರಣೆ ಆರಂಭಿಸಿದ್ದಾರೆ.


ಇನ್ನೂ, ಪೋಲಿಸರು ಈ ಕುರಿತ ನಟಿ ಶೋಭಿತಾ ಅವರ ಬಳಿಯೂ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ, ವಿಚಾರಣೆಯ ವೇಳೆ ನಟಿ ಶೋಭಿತಾ ಹಾಗೂ ಅವರ ಪತಿ ಸುಧೀರ್‌ ರೆಡ್ಡಿ ಇಬ್ಬರು ಕೂಡ ಶನಿವಾರ ರಾತ್ರಿ ಒಟ್ಟಿಗೆ ಊಟ ಮಾಡಿ ಮಲಗಿದ್ದು, ನಟಿಯ ಪತಿ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ವರ್ಕ್‌ ಫ್ರಮ್‌ ಹೋಮ್‌ ಬೇರೊಂದು ರೂಮ್‌ನಿಂದ ಮಾಡುತ್ತಿದ್ದರಂತೆ, ಭಾನುವಾರ ಬೆಳಗ್ಗೆ 10 ಗಂಟೆಯಾದ್ರೂ ಕೋಣೆಯಿಂದ ಹೊರಗೆ ಬರೆದಿರುವುದನ್ನು ನೋಡಿ, ಮನೆಕೆಲಸದ ಹೆಂಗಸು ಬಾಗಿಲು ಬಡಿದಿದ್ದರಂತೆ, ಎಷ್ಟೆ ಬಾರಿ ಬಾಗಿಲು ಬಡಿದರೂ, ನಟಿ ಬಾಗಿಲು ತೆರೆಯದೆ ಇರುವುದನ್ನು ನೋಡಿದ ಮನೆಕೆಲಸದ ಹೆಂಗಸು ಈ ವಿಚಾರವನ್ನು ನಟಿಯ ಪತಿಗೆ ಮುಟ್ಟಿಸಿದ್ದರಂತೆ. ಈ ವೇಳೆ ಸುಧೀರ್‌ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ನಟಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಇನ್ನೂ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೋಲಿಸರು, ಸಾವಿನ ಹಿಂದಿನ ಸತ್ಯ ಏನು ಎಂಬುದನ್ನು ಬಗೆಯುತ್ತಿದ್ದಾರೆ.