Poonam Pandey: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವೇಳೆ ಮನೆಯಲ್ಲಿ ಧ್ವಜ ಹಾರಿಸಿ ಖುಷಿಪಟ್ಟ ನಟಿ!
Poonam Pandey Death: ಬಾಲಿವುಡ್ ನಟಿ ಪೂನಂ ಪಾಂಡೆ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಇದೀಗ ಈ ನಟಿ ನೆನಪು ಮಾತ್ರ. ಸದಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೂನಂ ರಾಮನ ಭಕ್ತೆ ಕೂಡ ಆಗಿದ್ದರು ಎಂಬುದು ವಿಶೇಷ. ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗಿದ್ದನ್ನು ಅವರು ಸಂಭ್ರಮಿಸಿದ್ದರು. ಇಲ್ಲಿದೆ ಸಂಪೂರ್ಣ ಮಾಹಿತಿ.
Poonam Panday Instagram Post: ಬಾಲಿವುಡ್‌ನ ಬೋಲ್ಡ್ ಬೆಡಗಿ ನಟಿ ಪೂನಂ ಪಾಂಡೆ 32ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ಫೆಬ್ರವರಿ 2 ಶುಕ್ರವಾರದಂದು ಬೆಳಗ್ಗೆ ನಿಧನರಾಗಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದ ನಟಿ ಇಂದು ಕೊನೆಯುಸಿರು ಎಳೆದಿದ್ದು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಗ್ಲಾಮರಸ್ ನಟಿ ಪೂನಂ ಈಕೆ ರಾಮನ ಭಕ್ತೆ ಕೂಡ ಆಗಿದ್ದು, ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗಿದ್ದನ್ನು ಕೂಡ ಸಂಭ್ರಮಿಸಿದ್ದರು.
ಹೌದು.. ನಟಿ ಪೂನಂ ಪಾಂಡೆ ಕಳೆದ ತಿಂಗಳು 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿದ್ದು, ಅಂದು ತಮ್ಮ ಮನೆಯಲ್ಲಿ ರಾಮನ ಧ್ವಜ ಹಾರಿಸಿ ಖುಷಿಪಟ್ಟಿದ್ದರು. ಆ ಸಂದರ್ಭದಲ್ಲಿ ‘ಜೈ ಶ್ರೀರಾಮ್’ ಎಂಬ ಕ್ಯಾಪ್ಷನ್ನ್ನೊಂದಿಗೆ ವಿಡಿಯೋ ಶೇರ್ ಜೊತೆಗೆ, ಮನೆಯಲ್ಲಿ ಪೂಜೆ ಮಾಡಿ, ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದರು. ಈ ನಟಿ ರಾಮ ಮಂದಿರದ ಬಗ್ಗೆ "ವನವಾಸ ಮುಗಿಸಿದ ಶ್ರೀರಾಮನು ಈಗ ಮನೆಗೆ ವಾಪಸ್ ಬಂದಂತೆ ಆಗಿದೆ. ಆ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಶ್ರೀರಾಮನಿಗೆ ಸ್ವಾಗತ ಕೋರಲಾಗುತ್ತಿದೆ" ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Poonam Pandey: ಟಾಪ್ ಮಾಡೆಲ್ ಪೂನಂ ಸಿಗರೇಟ್ ಇಲ್ಲದೇ ಟ್ರಾವಲ್ ಮಾಡ್ತನೇ ಇರಲಿಲ್ಲ!
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ದಿನದಂದು ಪೂನಂ ಅನೇಕರಿಗೆ ಶ್ರೀರಾಮನ ಚಿಕ್ಕ ಮೂರ್ತಿಯನ್ನು ಉಡುಗೊರೆಯಾಗಿ ನೀಡಿ, ಶುಭ ಕೋರಿದ್ದರು. ಈ ನಟಿ ಅಂದು ಚಿತ್ರೀಕರಣಕ್ಕೆ ತಡವಾಗಿದ್ದರೂ ಕೂಡ ಅವರು ಸಮಯ ಮಾಡಿಕೊಂಡು ಶ್ರೀರಾಮನ ಬಗ್ಗೆ ಮಾತನಾಡಿದ್ದರು. ಈಕೆಯ ಭಕ್ತಿಯನ್ನು ಕಂಡು ಅಭಿಮಾನಿಗಳು ಭೇಷ್ ಎಂದಿದ್ದು, ಅದಾಗಿ ಕೆಲವೇ ದಿನಗಳು ಕಳೆಯುವುದರೊಳಗೆ ಪೂನಂ ಪಾಂಡೆ ಇನ್ನಿಲ್ಲ ಎಂಬ ಸುದ್ದಿ ಕೇಳಿಬಂದಿರುವುದು ಪ್ರತಿಯೊಬ್ಬರಿಗೂ ಶಾಕಿಂಗ್ ಸಂಗತಿಯಾಗಿತ್ತು.
ಪೂನಂ ಪಾಂಡೆ ಒಂದಷ್ಟು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆಗಿದ್ದರು. ಈ ನಟಿ ಬೋಲ್ಡ್ ಅವತಾರದಲ್ಲಿ ಪಡ್ಡೆಗಳ ಕಣ್ಣು ಕುಕ್ಕುತ್ತಿದ್ದುವಂತೆಯಿದ್ದು, ಸದಾ ಕಾಲ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಈಕೆಯ ಇನ್‌ಸ್ಟಾಗ್ರಾಮ್‌ನಲ್ಲಿ 12 ಲಕ್ಷ ಜನರು ಫಾಲೋ ಮಾಡುತ್ತಿದ್ದರು. ಆದರೆ ನಟಿ ಪೂನಂ ಪಾಂಡೆಯ ಸಾವಿನ ಸುದ್ದಿ, ಅಭಿಮಾನಿಗಳಿಗೆ ನಂಬಲು ಸಾಧ್ಯವಾಗದಿದ್ದು, ಈ ನಟಿ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.