Poonam Pandey Death News : ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಅವರ ಇನ್‌ಸ್ಟಾಗ್ರಾಮ್‌ನಲ್ಲಿ 2 ಫೆಬ್ರವರಿ 2024 ರಂದು ಪೋಸ್ಟ್ ಮಾಡಲಾಡ ಸುದ್ದಿ  ಅವರ ಅಭಿಮಾನಿಗಳನ್ನು ಆಘಾತಕ್ಕೀಡು ಮಾಡಿತ್ತು. ಈ  ಪೋಸ್ಟ್‌ನಲ್ಲಿ ನಟಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರ ನಿಧನದ ಪೋಸ್ಟ್ ಮಾಡಿದ 24 ಗಂಟೆಗಳ ನಂತರ, ನಟಿ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಪೂನಂ ಪಾಂಡೆ ತುಂಬಾ ಫಿಟ್ ಆಗಿದ್ದು, ಗರ್ಭಕಂಠದ ಕ್ಯಾನ್ಸರ್ ನಿಂದ ತಾನು ಸತ್ತಿಲ್ಲ ಎಂದು ಹೇಳುತ್ತಿದ್ದಾರೆ.ಅಲ್ಲದೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಪೂನಂ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

Coverage of Poonam Pandey's video :
ನಿನ್ನೆಯಿಂದ ಪೂನಂ ಪಾಂಡೆ ಅವರ ನಿಧನದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂರು ದಿನಗಳ ಹಿಂದೆ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿಯನ್ನು ನಂಬಲು ಅನೇಕರು ಸಿದ್ಧರಿರಲಿಲ್ಲ.ಆದರೆ ಇದೀಗ ಶೇರ್ ಮಾಡಿರುವ ಪೂನಂ ಪಾಂಡೆಯ ಹೊಸ ವೀಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.


 


Sushma Rao: ʻನನ್ನಮ್ಮ ಸೂಪರ್‌ ಸ್ಟಾರ್‌ʼ ಶೋಗೆ ನಿರೂಪಕಿಯಾಗಿ ಬಂದ ಭಾಗ್ಯಲಕ್ಷ್ಮಿ!


ಇನ್ಸ್ಟಾಗ್ರಾಮ್ ನಲ್ಲಿ ಸಾವಿನ ಮಾಹಿತಿ :
ಪೂನಂ ಪಾಂಡೆ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅವರ ನಿಧನದ ಸುದ್ದಿಯನ್ನು ಜಗತ್ತಿಗೆ ತಿಳಿಸಲಾಗಿದೆ. ಪೂನಂ ಯುಪಿಯ ಕಾನ್ಪುರ ನಿವಾಸಿ. 2011 ರಲ್ಲಿ ಭಾರತ ವಿಶ್ವಕಪ್‌ನಲ್ಲಿ ಜಯಗಳಿಸಿದ ನಂತರ ತನ್ನ ಟಾಪ್‌ಲೆಸ್ ಫೋಟೋಗಳನ್ನು ಪೋಸ್ಟ್ ಮಾಡುವ ಕುರಿತು ಮಾತನಾಡಿದ ಕಾರಣ ಎಲ್ಲರ ಗಮನ ಸೆಳೆದಿದ್ದರು. ಇದಾದ  ನಂತರ ನಟಿ ಅನೇಕ ಚಲನಚಿತ್ರ ಗಾಸಿಪ್  ಮ್ಯಾಗಸೀನ್ ಮತ್ತು ಸಾಮಾಜಿಕ ಮಾಧ್ಯಮದಿಂದ ಪ್ರಸಿದ್ಧರಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ