Poornima Gives Back Answer To Deepika: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ ಕೊಟ್ಟ ಉತ್ತರದಿಂದ ದೀಪಿಕಾಗೆ ಶಾಕ್‌ ಆಗಿದೆ. ಯಾವಾಗಲು ದೀಪಿಕಾಳ ಮಾತಿಗೆ ಕಣ್ಣಿರು ಹಾಕುತ್ತಾ ಸಂಕಟ ಪಡುತ್ತಿದ್ದ ಪೂರ್ಣಿಮಾ ಸದ್ಯ ಬದಲಾಗಿದ್ದಾಳೆ. ದೀಪಿಕಾ ಪೂರ್ಣಿಮಾಗೆ ಅನಾಥೆಯೆಂದು ಹೀಯಾಳಿಸಿದರೂ ಕೂಡ ಹೌದು ನಾನು ಅನಾಥೆಯೇ, ನಿನಗೆ ಅದೊಂದೆ ಮಾತಿನಿಂದ ನನ್ನನ್ನು ಚುಚ್ಚುವುದಕ್ಕೆ ಆಗುವುದು. ಏನಾದರೂ ಹೇಳಿಕೊ ನನಗೆ ಬೇಸರವಿಲ್ಲವೆಂದು ಆಕೆ ಹೇಳಿದ್ದಾಳೆ.


COMMERCIAL BREAK
SCROLL TO CONTINUE READING

ಪೂರ್ಣಿಮಾಳ ಬದಲಾವಣೆಯು ದೀಪಿಕಾಳಿಗೆ  ಅನುಮಾನ ತರಿಸಿದ್ದು, ಆಗ ಆಕೆ ತಮ್ಮ ಅಪ್ಪ ಜನಾರ್ಧನ್ ಗೆ ಕಾಲ್ ಮಾಡಿ ಈ ವಿಚಾರದ ಬಗ್ಗೆ ದೂರು ಹೇಳುತ್ತಾಳೆ. ಆದರೆ ಆತನು ದೀಪಿಕಾಗೆನೇ ಸಪೋರ್ಟ್ ಮಾಡುತ್ತಾನೆ. ತದನಂತರ  ಮನೆಯಲ್ಲಿ ಪೂರ್ಣಿಮಾ ಡ್ಯಾನ್ಸ್ ಪ್ರಾಕ್ಟೀಸ್ ಮಾಡುವುದನ್ನು ದೀಪಿಕಾ ನೋಡಿದ ಮೇಲೆ ಸುಮ್ಮನೆ ಇದರೆ ಆಕೆಗೆ ನೀನು ಡ್ಯಾನ್ಸ್ ಕಲಿತು ಯಾವ ಸಾಧನೆಯನ್ನೂ ಮಾಡಬೇಕಿಲ್ಲ. ಎಲ್ಲೂ ಪರ್ಫಾರ್ಮ್ ಮಾಡುವ ಅಗತ್ಯವೇನೂ ಇಲ್ಲ ಎಂದು ಹೇಳುತ್ತಾಳೆ.


ಇದನ್ನೂ ಓದಿ: Bhagyalakshmi Serial: ಕುಸುಮಾ ಮಾತಿಗೆ ಕಂಗಾಲಾದ ಬ್ರೋಕರ್:‌ ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗೆ ಭಾಗ್ಯಾ ಹೇಳಿದ್ದೇನು??


ದೀಪಿಕಾಳ ಮಾತನ್ನು ಕೇಳಿದ ಪೂರ್ಣಿಮಾ ಸ್ವಲ್ಪವೂ ಕೋಪ ಮಾಡಿಕೊಳ್ಳದೆ ಖಡಕ್‌ ಆಗಿ ಉತ್ತರವನ್ನು ನೀಡಿದ್ದಾಳೆ. ಪೂರ್ಣಿಮಾ ಇದ್ದರೆ ಇರಲಿ, ನಿನಗೆ ನೋಡುವುದಕ್ಕೆ ಆಗದಿದ್ದರೆ ಕಣ್ಣು ಮುಚ್ಚಿಕೊ, ಕೇಳೋದಕ್ಕೆ ಕಷ್ಟ ಆದರೆ, ಕಿವಿ ಮುಚ್ಚಿಕೊ ಇಲ್ಲದೇ ಹೋದರೆ, ಇಲ್ಲಿಂದ ಹೊರಗೆ ಹೋಗಬಹುದು ಎಂದು ದೀಪಿಕಾಗೆ ಪ್ರತ್ಯುತ್ತರ ಕೊಟ್ಟಿದ್ದಾಳೆ. ಇದನ್ನೂ ಕೇಳಿಸಿಕೊಂಡು ದೀಪಿಕಾಗೆ ತುಂಬಾನೆ ಸಿಟ್ಟು ಬರುತ್ತದೆ.


ಇನ್ನೊಂದು ಕಡೆ ಜನಾರ್ಧನ್ ಮಗಳು ಇಲ್ಲದೇ ಈಗ ಇರುವ ಆಸ್ತಿಯನ್ನೆಲ್ಲಾ ಕಳೆದುಕೊಳ್ಳಬೇಕೆಂದು  ತಲೆ ಕೆಡಿಸಿಕೊಂಡಿರುವಾಗ ವನಜಾ ತನ್ನ ಮೊದಲ ಮಗುವನ್ನು ಹುಡುಕೋಣ, ಆಗ ಆಸ್ತಿ ನಮಗೆ ಉಳಿಯುತ್ತದೆಂದು ಹೇಳುತ್ತಾಳೆ. ಆಗ ಜನಾರ್ಧನ್ ಆ ಮಗು ಅಪಶಕುನವೆಂದು ಕೂಗಾಡುತ್ತಾನೆ. ಅದಕ್ಕೆ ವನಜಾ ಸುಳ್ಳು ಆರೋಪ ಮಾಡಬೇಡಿ. ಆ ಮಗು ಹುಟ್ಟಿದ್ದಕ್ಕೆ, ದೊಡ್ಡ ಆಕ್ಸಿಡೆಂಟ್ ಆದರೂ ನಿಮಗೇನು ಆಗಲಿಲ್ಲ. ಗೋಡೌನ್ ಸುಟ್ಟು ಹೋದರು, ಇನ್ಶ್ಯೂರೆನ್ಸ್ ಹೆಸರಲ್ಲಿ ಹೆಚ್ಚು ಹಣ ಗಳಿಸಿದ್ದಿರಿಯೆಂದು ವಾದಾ ಮಾಡುತ್ತಾಳೆ. 


ಇದನ್ನೂ ಓದಿ: Shruthi Prakash: ಬಾಲಿವುಡ್‌ಗೆ ಲಗ್ಗೆಯಿಟ್ಟ ಬಿಗ್ ‌ಬಾಸ್‌ ಬೆಡಗಿ: ಸ್ಟಾರ್‌ ಡೈರೆಕ್ಟರ್‌ ಚಿತ್ರದಲ್ಲಿ ಕನ್ನಡತಿ!


ಅದೇ ಸಂದರ್ಭದಲ್ಲಿ ಜನಾರ್ಧನ್ ವನಜಾಗೆ ಮಗುವನ್ನು ಹುಡುಕು ಆದರೆ, ಆ ಮಗುವಿನ ಬಗ್ಗೆ ಮಾಧವ್ ಮನೆಗೆ ಯಾವುದೇ ಕಾರಣಕ್ಕೂ ಗೊತ್ತಾಗಬಾರದು. ಅದರಿಂದ ನನ್ನ ಮಗಳು ದೀಪಿಕಾಳಿಗೆ ತೊಂದರೆ ಆಗುತ್ತದೆ. ಮಗುವನ್ನು ಬಸವನಗುಡಿಯಲ್ಲಿರುವ ದೇವಸ್ಥಾನದಲ್ಲಿ ಬಿಟ್ಟು ಬಂದಿದ್ದೆ ಎಂದು ಸತ್ಯ ತಿಳಿಸುತ್ತಾನೆ. ತದನಂತರ ವನಜಾ ಜನಾರ್ಧನ್ ಮಾತು ಕೇಳಿಕೊಂಡು ದೇವಸ್ಥಾನಕ್ಕೆ ಹೋಗುತ್ತಾಳೆ. 


ವನಜಾ ತನ್ನ ಮಗಳಿಗಾಗಿ ಹುಡುಕಿಕೊಂಡು ದೇವಸ್ಥಾನಕ್ಕೆ ಹೋದ ಬಳಿಕ, ಅಲ್ಲಿಂದ ರಾಮಚಂದ್ರ ಅರ್ಚಕರನ್ನು ಹುಡುಕಿಕೊಂಡು ಬರುತ್ತಾಳೆ. ಆಗ ಅರ್ಚಕರು ಮಗುವಿನ ಬಗ್ಗೆ ಹೇಳಲಾಗದೇ ಅನ್ನಪೂರ್ಣೇಶ್ವರಿ ದೇವಿಯ ಫೋಟೋವನ್ನು ತೋರಿಸುತ್ತಿರುತ್ತಾರೆ. ಆದರೆ ಇದು ವನಜಾಗೆ ಅರ್ಥ ಆಗುವುದಿಲ್ಲ. ಅದೇ ವೇಳೆ ಅರ್ಚಕರ ಮನೆಗೆ  ತುಳಸಿ ಕೂಡ ಪೂರ್ಣಿಮಾ ತಂದೆ ತಾಯಿ ಬಗ್ಗೆ ಮಾಹಿತಿ ಪಡೆಯಲು ಬರುತ್ತಾಳೆ. ತುಳಸಿಯನ್ನು ನೋಡಿ ವನಜಾಗೆ ಶಾಕ್‌ ಆಗುತ್ತದೆ. ಮುಂದೇನಾಗುತ್ತದೆಂದು ಮುಂಬರುವ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.