ನವದೆಹಲಿ: ಜನಪ್ರಿಯ ತೆಲುಗು ನಟ-ನಿರ್ಮಾಪಕ ನಿತಿನ್ ಅವರು ಜುಲೈ 22, 2020 ರಂದು ತಮ್ಮ ದೀರ್ಘಕಾಲದ ಗೆಳತಿ ಶಾಲಿನಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥ ಸಮಾರಂಭದ ಒಂದು ಅದ್ಭುತ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಅವರ ಅಭಿಮಾನಿಗಳು ಮತ್ತು ವರುಣ್ ತೇಜ್ ಕೊನಿಡೆಲಾ, ರಾಶಿ ಖನ್ನಾ, ಲಕ್ಷ್ಮಿ ಮಂಚು, ಸುಶಾಂತ್, ಪಾಯಲ್ ಘೋಷ್, ಬ್ರಹ್ಮಜಿ ಮುಂತಾದ ಹಲವಾರು ಖ್ಯಾತನಾಮರು ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ.



ಈ ನೂತನ ದಂಪತಿಗಳು 2020 ರ ಜುಲೈ 26 ರಂದು ಹೈದರಾಬಾದ್‌ನಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.ಐಎಎನ್‌ಎಸ್‌ನಲ್ಲಿನ ವರದಿಯ ಪ್ರಕಾರ, ವಿವಾಹವು ಸಾಮಾಜಿಕ ದೂರದ ಮಾನದಂಡಗಳ ಕಾರಣದಿಂದಾಗಿ ದಂಪತಿಯ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಉಪಸ್ಥಿತಿಯಲ್ಲಿ ಮಾತ್ರ ನಡೆಯಲಿದೆ ಎನ್ನಲಾಗಿದೆ.


ನಿತಿನ್ 2002 ರಲ್ಲಿ 'ಜಯಂ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಇದನ್ನು ತೇಜ ನಿರ್ದೇಶಿಸಿದ್ದಾರೆ. ಅವರು ಕೊನೆಯ ಬಾರಿಗೆ 'ಭೀಷ್ಮಾ' ಮತ್ತು 'ಗಡ್ಡಲಕೊಂಡ ಗಣೇಶ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.