ಮುಂಬೈ: ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ಬಂಧಿತರಾಗಿದ್ದ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ಈಗ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.ಅವರಿಗೆ ನ್ಯಾಯಾಲಯವು 50,000 ರೂಗಳನ್ನು ಖಾತರಿಗಾಗಿ ನೀಡಲು ಆದೇಶಿಸಿದೆ.


COMMERCIAL BREAK
SCROLL TO CONTINUE READING

ಶನಿವಾರದಂದು ನ್ಯಾಯಾಲಯದಲ್ಲಿ ರಾಜ್ ಕುಂದ್ರಾ ಜಾಮೀನು ಅರ್ಜಿಯನ್ನು ಸಲ್ಲಿಸಿದ ನಂತರ, ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಮತ್ತು ಆರೋಪಿತ ಪ್ರಶ್ನಾರ್ಹ ವಿಷಯವನ್ನು ರಚಿಸುವಲ್ಲಿ ತಾವು ಸಕ್ರಿಯವಾಗಿ ಭಾಗಿಯಾಗಿರುವುದಕ್ಕೆ ಪೂರಕ ಚಾರ್ಜ್ ಶೀಟ್‌ನಲ್ಲಿ ಒಂದೇ ಒಂದು ಪುರಾವೆಗಳಿಲ್ಲ ಎಂದು ಹೇಳಿಕೊಂಡ ನಂತರ ಅವರಿಗೆ ಜಾಮೀನು ದೊರೆತಿದೆ. 


ಇದನ್ನೂ ಓದಿ: 'ನವಜೋತ್ ಸಿಂಗ್ ಸಿಧು 'ಪಂಜಾಬ್ ರಾಜಕೀಯದ ರಾಖಿ ಸಾವಂತ್'


ಕಳೆದ ಗುರುವಾರ, ಮುಂಬೈ ಪೊಲೀಸರು1,400 ಪುಟಗಳ ಚಾರ್ಜ್ ಶೀಟ್ ಉದ್ಯಮಿ ಕುಂದ್ರಾ ವಿರುದ್ಧ ಮಾಡಿದ್ದರು.ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗವು ಇತ್ತೀಚೆಗೆ ಕುಂದ್ರಾ (Raj Kundra) ಮತ್ತು ಇತರ ಮೂವರ ವಿರುದ್ಧ ಅಶ್ಲೀಲ ಚಿತ್ರಗಳ ಸೃಷ್ಟಿ ಮತ್ತು ಕೆಲವು ಆಪ್‌ಗಳ ಮೂಲಕ ಪ್ರಕಟಿಸಿದ ಆರೋಪಕ್ಕೆ ಪೂರಕ ಚಾರ್ಜ್ ಶೀಟ್ ನ್ನು ಸಲ್ಲಿಸಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.