ʼʼಅವರ ಪಕ್ಕದಲ್ಲೇ ಇದ್ದೇವೆ..ʼʼ ಪವರ್ ಸ್ಟಾರ್ಗೆ ಕೊಲೆ ಬೆದರಿಗೆ ಸಂದೇಶ!! ಬೆಚ್ಚಿಬಿದ್ದ ಸಿನಿರಂಗ..
death threat to Power Star: ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ..
Pawan Kalyan: ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದ್ದು, ಅವರನ್ನು ಸಾಯಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.. ಆಕ್ಷೇಪಾರ್ಹ ಭಾಷೆಯಲ್ಲಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿಲಾಗಿದು, ಸದ್ಯ ಪವನ್ ಕಲ್ಯಾಣ್ ಅವರ ಸಿಬ್ಬಂದಿ ಬೆದರಿಕೆ ಕರೆಗಳು ಮತ್ತು ಸಂದೇಶಗಳನ್ನು ಅವರ ಗಮನಕ್ಕೆ ತಂದಿದ್ದಾರೆ.. ಜೊತೆಗೆ ಈ ಬಗ್ಗೆ ಅಧಿಕಾರಿಗಳು ಪೊಲೀಸ್ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ..
ಇದನ್ನೂ ಓದಿ-ಕೊನೆಗೂ ತನ್ನ 'ಗರ್ಲ್ ಫ್ರೆಂಡ್' ಪರಿಚಯಿಸಿದ ವಿಜಯ್ ದೇವರಕೊಂಡ..! ಆ ಮಿಸ್ಟ್ರಿ ಗರ್ಲ್ ಯಾರು ಗೊತ್ತಾ..!
ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸೆಲ್ ಎಪಿ ಸೆಕ್ರೆಟರಿಯೇಟ್‌ನ ಎರಡನೇ ಬ್ಲಾಕ್‌ನಲ್ಲಿದೆ. ಇಂದು, ಪವನ್ ಕಲ್ಯಾಣ್ ಇಲ್ಲದಿದ್ದಾಗ, ಅವರ ಸಿಬ್ಬಂದಿಗೆ ಅವರನ್ನು ಕೊಲ್ಲುತ್ತೇವೆ ಪಕ್ಕದಲ್ಲೇ ಇದ್ದೇವೆ ಎಂದು ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬಂದವು. ಇದಲ್ಲದೇ ಇದರಲ್ಲಿ ಪವನ್‌ಗೆ ಅಸಭ್ಯ ಭಾಷೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಇದರಿಂದ ಅವರ ಸಿಬ್ಬಂದಿ ಆತಂಕಗೊಂಡು.. ಈ ವಿಷಯವನ್ನು ಪವನ್ ಕಲ್ಯಾಣ್ ಅವರ ಗಮನಕ್ಕೆ ತಂದಿದ್ದಾರೆ.. ಅವರ ಸಲಹೆಯಂತೆ ಸಿಬ್ಬಂದಿ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ..
ಇದನ್ನೂ ಓದಿ-ಬಿಗ್ ಬಾಸ್ ಮನೆಗೆ ಹಳೆ ಸ್ಪರ್ಧಿಗಳ ಎಂಟ್ರಿ..? ದೊಡ್ಮನೆಯಲ್ಲಿ ಇನ್ಮುಂದೆ ರಿಯಲ್ ಆಟ ಶುರು..!
ತಕ್ಷಣ ಪ್ರತಿಕ್ರಿಯಿಸಿರುವ ಉನ್ನತ ಪೊಲೀಸ್ ಅಧಿಕಾರಿಗಳು.. ಪವನ್ ಕಲ್ಯಾಣ್ ಸಿಬ್ಬಂದಿಗೆ ಈ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಎಲ್ಲಿಂದ ಬಂದವು ಎಂದು ವಿಚಾರಣೆ ನಡೆಸುತ್ತಿದ್ದಾರೆ. ಪವನ್ ಹೊರತಾಗಿ ಬೇರೆ ಯಾವುದೇ ಸಚಿವರಿಗೆ ಇಂತಹ ಕರೆಗಳು ಬಂದಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪವನ್ ಸಿಬ್ಬಂದಿಗೆ ಈ ಕರೆಗಳು ಮತ್ತು ಸಂದೇಶಗಳು ಯಾವಾಗ ಬಂದವು ಎಂಬ ವಿವರಗಳ ಬಗ್ಗೆ ತನಿಖೆ ನಡೆಸಲಿದ್ದಾರೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಪವನ್ ಗೆ ಬೆದರಿಕೆ ಕರೆಗಳು ಬಂದಿದ್ದು, ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.