ಬೆಂಗಳೂರು: ದೊಡ್ಮನೆ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದ ಜೇಮ್ಸ್ ಚಿತ್ರದ ಟೀಸರ್ (James Teaser) ಇಂದು ಬಿಡುಗಡೆಯಾಗಿದೆ. ಈಗಾಗಲೇ ಫಸ್ಟ್‌ ಲುಕ್‌ ಮೂಲಕ ಧೂಳೆಬ್ಬಿಸಿದ್ದ ಚಂದನವನದ ಅಪ್ಪು, ಸ್ಯಾಂಡಲ್ ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅಭಿನಯದ ಕೊನೆಯ ಸಿನಿಮಾದ ಟೀಸರ್ ಕಂಡು ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಕನ್ನಡಿಗರು ಮಾತ್ರವಲ್ಲ ಇಡೀ ದೇಶವೇ ಬಹಳ ಕುತೂಹಲದಿಂದ ಕಾಯುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆ (James Teaser Release) ಮಾಡಲಾಗಿದ್ದು, ಇದರಲ್ಲಿ ಅಪ್ಪು ಹಿಂದೆಂದೂ ಕಂಡಿರದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕಂಡು ಸಂತಸ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳು ಅಪ್ಪು ಇಂದು ನಮ್ಮೊಂದಿಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಂಬನಿ ಮಿಡಿದಿದ್ದಾರೆ.


'ಬೈಟ್ ಟು ಲವ್' ಇದು ಚಂದನವನದ ಕ್ಯೂಟ್‌ ಲವ್‌ ಸ್ಟೋರಿ..!


ಜೇಮ್ಸ್​ ಟೀಸರ್​ (James Teaser) ನಲ್ಲಿ ಆರಂಭದಿಂದ ಕೊನೆಯವರೆಗೂ ಸಖತ್​ ಆ್ಯಕ್ಷನ್ ದೃಶ್ಯಗಳಿಂದ ಕೂಡಿದೆ. ಟೀಸರ್​ನಲ್ಲಿ ಅಪ್ಪು ಗನ್ ಹಿಡಿದು ಮಿಂಚಿದ್ದರೆ, ಟೀಸರ್ ಕೊನೆಯಲ್ಲಿ ಬರುವ ನನಗೆ ಮೊದಲಿನಿಂದಲೂ ರೆಕಾರ್ಡ್​ ಬ್ರೇಕ್​ ಮಾಡಿ ಅಭ್ಯಾಸ ಎನ್ನುವ ಶಿವಣ್ಣನ ಪಂಚಿಂಗ್ ಡೈಲಾಗ್​ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. Love Mocktail-2 : ಮತ್ತೆ ಕಳೆಗಟ್ಟಿದ ಕನ್ನಡ ಚಿತ್ರರಂಗ : ಇದು ಸ್ಯಾಂಡಲ್‌ವುಡ್‌ ಸಂಭ್ರಮ!


ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಕೊನೆಯ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಪ್ಪು ಅಭಿಮಾನಿ ಬಳಗ ಕಾತರದಿಂದ ಕಾಯುತ್ತಿದೆ. ಮಾರ್ಚ್ 17ರವರೆಗೆ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ. 'ಜೇಮ್ಸ್' ಚಿತ್ರವನ್ನು ಕನ್ನಡ ಭಾಷೆಯ ಜೊತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.