ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕ ಮಂದಣ್ಣ ಅಭಿನಯದ 'ಅಂಜನಿ ಪುತ್ರ' ಸಿನಿಮಾ ಎಲ್ಲರನ್ನೂ ಮೋಡಿ ಮಾಡಿದೆ. ಬೆಂಗಳೂರಿನ ಕೆ.ಜಿ. ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಬೆಳಿಗ್ಗೆ 7 ಗಂಟೆಗೆ ಚಿತ್ರದ ಮೊದಲ ಶೋ ಅಭಿಮಾನಿಗಳಿಂದ ಭರ್ಜರಿಯಾಗಿ ಬಿಡುಗಡೆಯಾಯಿತು. 


COMMERCIAL BREAK
SCROLL TO CONTINUE READING

ತ್ರಿವೇಣಿ ಚಿತ್ರಮಂದಿರದ ಮುಂದೆ ನೆರೆದಿದ್ದ ಅಭಿಮಾನಿಗಳು ಪುನಿತ್ ರಾಜ್ ಕುಮಾರ್ ಕಟೌಟ್, ಪೋಸ್ಟರ್ ಗಳಿಗೆ ಹೂಗಳಿಂದ ಶೃಂಗರಿಸಿ, ತೆಂಗಿನ ಕಾಯಿ ಹೊಡೆದು, ಪಟಾಕಿ ಸಿಡಿಸಿ, ಪುನೀತ್ ಪೋಸ್ಟರ್ ಗೆ ಹಾಲಿನ ಅಭಿಶೇಕ ಮಾಡುವುದರ ಮೂಲಕ ಸಂಭ್ರಮಾಚರಣೆ ಮಾಡಿದರು. 


ಅಲ್ಲದೆ ಈ ಫಸ್ಟ್ ಶೋ ವೀಕ್ಷಿಸಲು ರಾಜ್ ಕುಟುಂಬದ ಮೊಮ್ಮಕ್ಕಳು ಆಗಮಿಸಿದ್ದರು.


ಒಟ್ಟಿನಲ್ಲಿ ಬಹುದಿನಗಳ ನಿರೀಕ್ಷೆಯ ಆಕ್ಷನ್ ಮಸಾಲ ಯುಕ್ತ 'ಅಂಜನಿ ಪುತ್ರ' ಇದೀಗ ಭರ್ಜರಿ ಪ್ರದರ್ಶನಕಾಣುತ್ತಿದೆ.