Prabhas taking Break from Movies: ಇತ್ತೀಚೆಗೆ ಪ್ರಭಾಸ್ ಸಲಾರ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.. ಈ ಚಿತ್ರ ಪ್ರೇಕ್ಷರಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಿ ಉತ್ತಮ ಕಲೆಕ್ಷನ್‌ ಮಾಡಿತ್ತು.. ಇದಾದನಂತರ ನಟ ಮತ್ತೊಂದು ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಸಹಿಹಾಕಿದ್ದರು.. ಆದರೆ ಇದೀಗ ಪ್ರಭಾಸ್ ಕೆಲವು ದಿನಗಳ ಕಾಲ ಚಿತ್ರಗಳಿಗೆ ಗ್ಯಾಪ್ ನೀಡಲಿದ್ದಾರೆ ಎಂದು ವರದಿಮಾಡಲಾಗಿದೆ.. 


COMMERCIAL BREAK
SCROLL TO CONTINUE READING

ಪ್ರಭಾಸ್ ಇತ್ತೀಚೆಗಷ್ಟೇ ಕಲ್ಕಿ ಚಿತ್ರದ ಶೂಟಿಂಗ್ ಮುಗಿಸಿದ್ದು.. ರಾಜಾ ಸಾಬ್ ಚಿತ್ರದ ಉಳಿದ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.. 


ಇದನ್ನೂ ಓದಿ-ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿಗಳಿಂದ ಟಿವಿ ಕಾರ್ಯಕ್ರಮದಲ್ಲಿ ಜಗಳ..!


ಇತ್ತೀಚಿಗೆ ಪ್ರಭಾಸ್ ಸಾಕಷ್ಟು ಬದಲಾಗಿದ್ದಾರೆ.. ಮುಖವೂ ಬದಲಾಗಿದೆ ಮತ್ತು ಅವರ ದೇಹವು ಫಿಟ್ ಆಗಿಲ್ಲ ಎಂಬ ಕಾಮೆಂಟ್‌ಗಳು ಇದ್ದವು.  ಅಲ್ಲದೆ ಇತ್ತೀಚೆಗೆ ಪ್ರಭಾಸ್ ಕೂಡ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರೊಂದಿಗೆ ಪ್ರಭಾಸ್ ಕೆಲ ದಿನಗಳ ಕಾಲ ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ತಮ್ಮ ಆರೋಗ್ಯದ ಕಡೆ ಗಮನ ಹರಿಸಲು ಮುಂದಾಗಿದ್ದಾರೆ.


ಇದನ್ನೂ ಓದಿ-ಎರಡನೇ ಸಿನಿಮಾದಲ್ಲಿಯೇ ಶೂಟಿಂಗ್ ಬಿಟ್ಟು ದಿಢೀರ್ ನಾಪತ್ತೆಯಾಗಿದ್ದ ಈಕೆ ಸದ್ಯ ಸೂಪರ್‌ ಸ್ಟಾರ್!‌


ರಾಜಾ ಸಾಬ್ ಚಿತ್ರದ ಶೂಟಿಂಗ್ ಬೇಸಿಗೆಯಲ್ಲಿ ಆರಂಭವಾಗಲಿದ್ದು, ಅಲ್ಲಿಯವರೆಗೆ ಪ್ರಭಾಸ್ ಚಿತ್ರಗಳಿಗೆ ಕನಿಷ್ಠ ಮೂರು ತಿಂಗಳ ಗ್ಯಾಪ್ ನೀಡಿ ರೆಸ್ಟ್ ಮೋಡ್ ನಲ್ಲಿ ಇರಲಿದ್ದಾರೆ ಎಂದು ವರದಿಯಾಗಿದೆ. 


ರಾಜಾಸಾಬ್ ನಂತರ, ಸಂದೀಪ್ ವಂಗಾಅ ಅವರ ಸಿನಿಮಾ ಮತ್ತು ಸಲಾರ್ 2 ಎರಡೂ ಮುಂದಿನ ವರ್ಷ ಸೆಟ್ಟೆರಲಿವೆ.. ಇತ್ತೀಚೆಗಷ್ಟೇ ಸಮಂತಾ ಕೂಡ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಸಿನಿಮಾಗಳಿಗೆ ಗ್ಯಾಪ್ ನೀಡುವುದಾಗಿ ಘೋಷಿಸಿದ್ದು ಗೊತ್ತೇ ಇದೆ. ಅದೇ ಹಾದಿಯಲ್ಲಿ ಪ್ರಭಾಸ್‌ ಕೂಡಾ ಇದ್ದಾರೆ ಎನ್ನಲಾಗಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.