ಎರಡು ಓಟಿಟಿ ಪ್ಲಾಟ್ಫರ್ಮ್ಗಳಲ್ಲಿ ರಿಲೀಸ್ ಆಗಲು ಸಜ್ಜಾದ ʻಕಲ್ಕಿ 2898 ಎಡಿʼ..! ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಂಪರ್ ಗಿಫ್ಟ್
Kalki 2898 AD OTT: ಸಾಮಾನ್ಯವಾಗಿ ಸ್ಟಾರ್ ಹೀರೋ ಸಿನಿಮಾಗಳಿಗೆ ಫುಲ್ ಕ್ರೇಜ್ ಇರುತ್ತೆ. ಅಂತಹ ನಾಲ್ಕೈದು ಟಾಪ್ ಸ್ಟಾರ್‌ಗಳು ಮತ್ತು ಸೆನ್ಸೇಷನಲ್ ಡೈರೆಕ್ಟರ್‌ಗಳು ಕ್ಯಾಮಿಯೋ ರೋಲ್‌ಗಳನ್ನು ಹೊಂದಿರುವ ಚಿತ್ರಕ್ಕೆ ಬೇಡಿಕೆ ಇನ್ನೂ ಹೆಚ್ಚಾಗಿಯೇ ಇರುತ್ತದೆ. ಕಲ್ಕಿ 2898 AD ಅಂತಹ ಒಂದು ಸಿನಿಮಾಗಳಲ್ಲಿ ಒಂದಾಗಿದೆ .
Kalki 2898 AD OTT: ಸಾಮಾನ್ಯವಾಗಿ ಸ್ಟಾರ್ ಹೀರೋ ಸಿನಿಮಾಗಳಿಗೆ ಫುಲ್ ಕ್ರೇಜ್ ಇರುತ್ತೆ. ಅಂತಹ ನಾಲ್ಕೈದು ಟಾಪ್ ಸ್ಟಾರ್‌ಗಳು ಮತ್ತು ಸೆನ್ಸೇಷನಲ್ ಡೈರೆಕ್ಟರ್‌ಗಳು ಕ್ಯಾಮಿಯೋ ರೋಲ್‌ಗಳನ್ನು ಹೊಂದಿರುವ ಚಿತ್ರಕ್ಕೆ ಬೇಡಿಕೆ ಇನ್ನೂ ಹೆಚ್ಚಾಗಿಯೇ ಇರುತ್ತದೆ. ಕಲ್ಕಿ 2898 AD ಅಂತಹ ಒಂದು ಸಿನಿಮಾಗಳಲ್ಲಿ ಒಂದಾಗಿದೆ .
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಬಿಗ್ ಬಿ ಅಮಿತಾಬ್ ಬಚ್ಚನ್, ಯೂನಿವರ್ಸಲ್ ಹೀರೋ ಕಮಲ್ ಹಾಸನ್, ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಮತ್ತು ಹಾಟ್ ಬ್ಯೂಟಿ ದಿಶಾ ಪಟಾನಿ ಅವರು ಕಲ್ಕಿ 2898 AD ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಪೌರಾಣಿಕ ಮತ್ತು ವೈಜ್ಞಾನಿಕ ಆಕ್ಷನ್ ಥ್ರಿಲ್ಲರ್ ಆಗಿ ಜೂನ್ 27 ರಂದು ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾದ ಮೊದಲ ದಿದಿಂದಲೂ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸುತ್ತಿದೆ. ಸಿನಿಮಾದ ಬಜೆಟ್ 600 ಕೋಟಯಾಗಿದ್ದು, ಇದಕ್ಕೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫಿಸ್ ಧೂಳ್ ಎಬ್ಬಿಸಿದೆ.
ಈಗಾಗಲೇ ವಿಶ್ವಾದ್ಯಂತ ರೂ. ಕಲ್ಕಿ 2898 ಎಡಿ ಸಿನಿಮಾ 900 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ 1000 ಕೋಟಿ ಗಡಿ ಮುಟ್ಟಲು ಸಜಾಗಿದೆ ಈ ವಾರ ಕಳೆಯುವುದರೊಳಗೆ ಈ ಟಾರ್ಗೆಟ್ ರೀಚ್ ಮಾಡುವ ನಿರೀಕ್ಷೆಯಿದೆ .
ಇದನ್ನೂ ಓದಿ: ಅನಂತ್- ರಾಧಿಕಾ ಹಳದಿ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ ಆಕ್ಟರ್ಸ್
ಕಲ್ಕಿ 2898 AD ಓಟಿಟಿ (OTT) ಬಿಡುಗಡೆ ದಿನಾಂಕ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಿಂದಾಗಿ ಭಾರತೀಯ ಪ್ರೇಕ್ಷಕರಿಗೆ ಈ ವಿಷಯದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಆದಾಗ್ಯೂ, ಕಲ್ಕಿ ಚಿತ್ರವು ಈಗ ಓಟಿಟಿ (OTT) ಗೆ ಬರುವುದಿಲ್ಲ ಎಂದು ಅನೇಕರಿಗೆ ತಿಳಿದಿದೆ, ಓಟಿಟಿ (OTT) ಪ್ಲಾಟ್‌ಫಾರ್ಮ್ ಮತ್ತು ಡಿಜಿಟಲ್ ಪ್ರೀಮಿಯರ್ ದಿನಾಂಕ ಯಾವಾಗ ಎಂದು ತಿಳಿಯಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಲ್ಕಿ 2898 ಎಡಿ ಒಟಿಟಿ ಬಿಡುಗಡೆಗೆ ಸಂಬಂಧಿಸಿದ ವಿಷಯವೊಂದು ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಪ್ರಭಾಸ್ ಕಲ್ಕಿ ಅವರ ಚಿತ್ರವು ಏಕಕಾಲದಲ್ಲಿ ಎರಡು ಓಟಿಟಿ (OTT)ಗಳಲ್ಲಿ ಸ್ಟ್ರೀಮ್ ಆಗಲಿದೆ ಎಂದು ವರದಿಯಾಗಿದೆ.
ಕಲ್ಕಿ 2898 AD ಚಿತ್ರದ ಓಟಿಟಿ (OTT) ಹಕ್ಕುಗಳನ್ನು ಅಮೇಜಾನ್ ಪ್ರೈಮ್(Amazon Prime) ಮತ್ತು ನೆಟ್‌ಫ್ಲಿಕ್ಸ್(Netflix) ಖರೀದಿಸಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಆಯಾ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮಾಲೀಕರು ನಿರ್ಮಾಪಕರಿಗೆ ಭಾರೀ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ದಕ್ಷಿಣದ ಭಾಷೆಗಳಓಟಿಟಿ (OTT) ಹಕ್ಕುಗಳನ್ನು ಅಂದರೆ ತೆಲುಗು, ತಮಿಳು, ಕನ್ನಡ , ಮಲಯಾಳಂ ಅಮೆಜಾನ್ ಪ್ರೈಮ್ ಮತ್ತು ಹಿಂದಿ ಭಾಷೆಯ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.