Radhe Shyam Leaked Online - 'ಬಾಹುಬಲಿ' ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೇ ಶ್ಯಾಮ್' ಚಿತ್ರ ಚಿತ್ರಮಂದಿರಗಳಲ್ಲಿ (Radhe Shyam Release) ಬಿಡುಗಡೆಯಾಗಿದೆ. ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಪ್ರಭಾಸ್ ಮತ್ತು ಪೂಜಾ ಅವರ ಸ್ಟಾರ್‌ಡಮ್‌ನಿಂದಾಗಿ, ಈ ಚಿತ್ರ ಮೊದಲ ದಿನದಲ್ಲಿ ಉತ್ತಮ ಆದಾಯವನ್ನು ಗಳಿಸುವ ನಿರೀಕ್ಷೆ ಇದೆ. ಇದೆಲ್ಲದರ ನಡುವೆ ಈ ಚಿತ್ರದ ನಿರ್ಮಾಪಕರಿಗೆ ನಿರಾಶಾದಾಯಕ ಸುದ್ದಿಯೊಂದು ಪ್ರಕಟವಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ  ಲೀಕ್ ಆಗಿದೆ. ಇದರಿಂದಾಗಿ ನಿರ್ಮಾಪಕರು ಸಾಕಷ್ಟು ನಷ್ಟ ಅನುಭವಿಸಬೇಕಾಗಬಹುದು.
 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಸ್ವಂತ YouTube channel ಆರಂಭಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ..!

ಚಿತ್ರದ ಗಳಿಕೆಯ ಮೇಲೆ ಪರಿಣಾಮ ಉಂಟಾಗಬಹುದು
ಮಾಧ್ಯಮ ವರದಿಗಳ ಪ್ರಕಾರ, ರಾಧೆ ಶ್ಯಾಮ್ ಚಿತ್ರ ಕೆಲ ಟೋರೆಂಟ್ ವೆಬ್ ಸೈಟ್ ಗಳಲ್ಲಿ ಸೋರಿಕೆಯಾಗಿದೆ. HD ಫಾರ್ಮ್ಯಾಟ್ ನಲ್ಲಿ  ಚಿತ್ರ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ನಿರ್ಮಾಪಕರು ಕೋಟಿ ಕೋಟಿ ನಷ್ಟ ಅನುಭವಿಸಬೇಕಾಗಬಹುದು. ಸೋರಿಕೆಯಿಂದಾಗಿ, ಚಲನಚಿತ್ರದ ಅನೇಕ ವೀಕ್ಷಕರು ಥಿಯೇಟರ್‌ಗಳಿಗೆ ತಲುಪುವುದಿಲ್ಲ ಮತ್ತು ಇದು ಬಾಕ್ಸ್ ಆಫೀಸ್ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮಹಾಮಾರಿಯ ಕಾರಣ ಈಗಾಗಲೇ ಚಿತ್ರ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು, ಪೈರಸಿ ಅದಕ್ಕೆ ವಿಪತ್ತು  ತರುವ ಸಾಧ್ಯತೆ ಇದೆ.


ಇದನ್ನೂ ಓದಿ-Samantha:ಸಮಂತಾ ಪೋಸ್ಟ್‌ಗೆ ಈ ರೀತಿ ಕಾಮೆಂಟ್ ಮಾಡಿದ ನಾಗ ಚೈತನ್ಯ ಸೋದರ ಸಂಬಂಧಿ.!

ಬಾಕ್ಸ್ ಆಫೀಸ್ ಮೇಲೆ ಚಿತ್ರದ ಪ್ರದರ್ಶನ
ಮಾಧ್ಯಮ ವರದಿಗಳ ಪ್ರಕಾರ ಈ ಚಿತ್ರ ಭಾರತ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರಿ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ. ಆರಂಭಿಕ ಅಂಕಿ-ಅಂಶಗಳ ಪ್ರಕಾರ ಚಿತ್ರ ಕೇವಲ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 28 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಈ ಚಿತ್ರದ ಹಿಂದಿ ಅವತರಿಣಿಕೆ 6 ಕೋಟಿ ರೂ. ಹಣ ಗಳಿಕೆ  ಮಾಡಿದ್ದರೆ, US ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ಮೊದಲ ದಿನ 1 ಮಿಲಿಯನ್ ಡಾಲರ್ ಗಳಿಕೆ ಮಾಡಿದೆ.


ಇದನ್ನೂ ಓದಿ-ವರುಣ್ ಧವನ್ ಗೆ ಚಮಕ್ ಕೊಟ್ಟ ನಟಿ ರಶ್ಮಿಕಾ ಮಂದಣ್ಣ.! ವೈರಲ್​ ಆಗಿದೆ ಈ ವಿಡಿಯೋ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.