ʼಸಲಾರ್` ಚಿತ್ರಕ್ಕೆ ಥಿಯೇಟರ್ ನೀಡದಂತೆ ಶಾರುಖ್ ಖಾನ್ ಫೋನ್..!? ಪ್ರಭಾಸ್ ಪ್ಯಾನ್ಸ್ ಗರಂ
Dunki vs Salaar box office : ಬಾಲಿವುಡ್ ನಟ ಶಾರುಖ್ ಖಾನ್ ಮುಂಬರುವ ಸಿನಿಮಾ ‘ಡುಂಕಿ’ ಬೆಂಬಲಕ್ಕೆ ನಿಂತಿರುವ ಪಿವಿಆರ್ ಸಿನಿಮಾಸ್, ಐನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್‌ಗಳಿಗೆ ‘ಸಾಲಾರ್’ ತಂಡ ಸಖತ್ ಶಾಕ್ ನೀಡಿದೆ. ಆ ಕಂಪನಿಗಳಿಗೆ ಸೇರಿದ ಸ್ಕ್ರೀನ್‌ಗಳಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.
Salaar Vs Dunki : 'ಸಾಲಾರ್' ಕ್ರೇಜ್‌ನಿಂದ 'ಡುಂಕಿ' ತಂಡಕ್ಕೆ ಭಯ ಶುರುವಾಗಿದೆ ಎಂಬ ಮಾತು ನೆಟ್ಟಿಗರ ಬಾಯಿಂದ ಕೇಳಿ ಬರುತ್ತಿದೆ. ಅಲ್ಲದೆ ಸೋಲಿನ ಭಯದಿಂದ ಪ್ರಭಾಸ್ ನಟನೆಯ ಸಲಾರ್ ಚಿತ್ರಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ಕ್ರೀನ್ ಸಿಗದಂತೆ ಬಾಲಿವುಡ್ ಬಾದ್ ಶಾ ತಡೆದಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಮುಂಬರುವ ಸಿನಿಮಾ ‘ಡುಂಕಿ’ ಬೆಂಬಲಕ್ಕೆ ನಿಂತಿರುವ ಪಿವಿಆರ್ ಸಿನಿಮಾಸ್, ಐನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್‌ಗಳಿಗೆ ‘ಸಾಲಾರ್’ ತಂಡ ಸಖತ್ ಶಾಕ್ ನೀಡಿದೆ. ಆ ಕಂಪನಿಗಳಿಗೆ ಸೇರಿದ ಸ್ಕ್ರೀನ್‌ಗಳಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಅದೇನೇ ಇರಲಿ... ರೆಬೆಲ್ ಸ್ಟಾರ್ ಪ್ರಭಾಸ್ ಸಿನಿಮಾಗೆ ಆಗಿರುವ ಅನ್ಯಾಯದ ಹಿಂದೆ ಶಾರುಖ್ ಕೈವಾಡವಿದೆ ಎಂದು ಮಾಧ್ಯಮಗಳನ್ನು ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ:ಐಶ್ವರ್ಯಾ ರೈ ಇಷ್ಟವಿರಲಿಲ್ಲ… ಈ ನಟಿಯನ್ನೇ ಮಗ ಅಭಿಷೇಕ್’ಗೆ ಮದುವೆ ಮಾಡಿಸಬೇಕೆಂದಿದ್ದರು ಜಯಾ ಬಚ್ಚನ್!
ಹೌದು.. ಬಾಕ್ಸ್ ಆಫೀಸ್ ವಲಯದಲ್ಲಿ 'ಸಾಲಾರ್' ಮತ್ತು 'ಡಂಕಿ' ನಡುವೆ ಪೈಪೋಟಿ ನಡೆಯಲಿದ್ದು, ಆ ಎರಡು ಚಿತ್ರಗಳು ಥಿಯೇಟರ್‌ಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದು ಉದ್ಯಮ ವಲಯಗಳು ಮತ್ತು ವ್ಯಾಪಾರ ಪಂಡಿತರು ಮೊದಲಿನಿಂದಲೂ ಹೇಳುತ್ತಿದ್ದರು. ಸಿಂಗಲ್ ಸ್ಕ್ರೀನ್ ಅಥವಾ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಇರಬಹುದು... ಶಾರುಖ್ ಮತ್ತು ಪ್ರಭಾಸ್ ಕ್ರೇಜ್ ತಕ್ಕಂತೆ ಪ್ರದೇಶ ಮತ್ತು ರಾಜ್ಯಕ್ಕೆ ಅನುಗುಣವಾಗಿ ಥಿಯೇಟರ್‌ಗಳನ್ನು ಹಂಚಿಕೆ ಮಾಡಲು ಯೋಚಿಸಲಾಗಿತ್ತು. ಆದರೆ ಬಿಡುಗಡೆ ಸಮೀಪಿಸುತ್ತಿದ್ದಂತೆ ಇದೇಲ್ಲ ಉಲ್ಟಾಪಲ್ಟ ಆಗಿದ್ದು, ಪಿವಿಆರ್, ಐನಾಕ್ಸ್ ಮಲ್ಟಿಪ್ಲೆಕ್ಸ್ ಸರಣಿ 'ಡಂಕಿ' ಪರವಾಗಿ ನಿರ್ಧಾರ ತೆಗೆದುಕೊಂಡಿದೆ.
ದಕ್ಷಿಣ ರಾಜ್ಯಗಳಲ್ಲಿ ಮಲ್ಟಿಪ್ಲೆಕ್ಸ್ ಪರದೆಗಳು ಅಂದ್ರೆ, PVR ಮತ್ತು INOX ಮಾತ್ರ. ಈ ಕಂಪನಿಗಳು ದೇಶಾದ್ಯಂತ 1650 ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಹೊಂದಿದೆ. ಪಿವಿಆರ್ ಮತ್ತು ಐನಾಕ್ಸ್ ಅಡಿಯಲ್ಲಿ ಆ ಎಲ್ಲಾ ಪರದೆಗಳು ಭಾನುವಾರದವರೆಗೆ 'ಡಂಕಿ' ಚಲನಚಿತ್ರ ಪ್ರದರ್ಶನಗಳನ್ನು ನಿಗದಿಪಡಿಸಿವೆ. ಬುಕ್ಕಿಂಗ್ ಕೂಡ ತೆರೆದಿದೆ. ಆರಂಭದಲ್ಲಿ ‘ಡಂಕಿ’ ಮತ್ತು ‘ಸಾಲಾರ್’ ಚಿತ್ರಗಳಿಗೆ ಸಮಾನ ಥಿಯೇಟರ್ ನೀಡುವುದಾಗಿ ಹೇಳಿದ್ದ ಪಿವಿಆರ್ ಮತ್ತು ಐನಾಕ್ಸ್ ರಾತ್ರೋರಾತ್ರಿ ತಮ್ಮ ನಿರ್ಧಾರ ಬದಲಿಸಿಕೊಂಡಿವೆ. ಇದರಿಂದಾಗಿ ಶಾರುಖ್ ಖಾನ್ ಚಿತ್ರಕ್ಕೆ ಲಾಭವಾಗುವಂತೆ ಕ್ರಮ ಕೈಗೊಂಡಿದ್ದು, ‘ಸಾಲಾರ್’ ಸಿನಿಮಾವನ್ನು ಪಕ್ಕಕ್ಕೆ ಎಸೆಯಲಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ʼಸಲಾರ್ʼ ಅಬ್ಬರಕ್ಕೆ ʼಬುಕ್ ಮೈ ಶೋʼ ಸರ್ವರ್ ಕ್ರ್ಯಾಶ್..!
PVR ಮಾಲೀಕರಿಗೆ ಶಾರುಖ್ ಫೋನ್ : ಪಿವಿಆರ್ ಮತ್ತು ಐನಾಕ್ಸ್ ಮ್ಯಾನೇಜ್‌ಮೆಂಟ್ ಸಲಾರ್ ಕೈಬಿಟ್ಟಿರುವ ಹಿಂದೆ ಕಿಂಗ್ ಖಾನ್ ಶಾರುಖ್ ಕೈವಾಡವಿದೆ ಎಂದು ಬಾಲಿವುಡ್ ಮಾಧ್ಯಮ ಮೂಲಗಳು ಹೇಳುತ್ತಿವೆ. 'ಡಂಕಿ' ಮತ್ತು 'ಸಾಲಾರ್' ಎರಡೂ ಚಿತ್ರಗಳಿಗೆ ಸಮಾನವಾದ ಸ್ಕ್ರೀನ್‌ಗಳನ್ನು ನೀಡಲು 'ಡಂಕಿ' ಚಿತ್ರತಂಡ ಬಯಸಿತ್ತು.
ಈ ವಿಚಾರ ತಿಳಿದ ನಟ ಶಾರುಖ್ ಖಾನ್ ನೇರವಾಗಿ PVR ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇಷ್ಟು ದೊಡ್ಡ ಸ್ಟಾರ್ ಹೀರೋನಿಂದ ಡೈರೆಕ್ಟ್ ಫೋನ್ ಕರೆ ಬಂದ ಮೇಲೆ ಪಿವಿಆರ್ ಐನಾಕ್ಸ್ ನಿರ್ವಹಿಸುತ್ತಿದ್ದ ಸಿಂಗಲ್ ಸ್ಕ್ರೀನ್‌ಗಳನ್ನೆಲ್ಲ ‘ಡಂಕಿ’ಗೆ ಕೊಟ್ಟಿದ್ದಾರೆ. ಅದಕ್ಕೆ ಉತ್ತರ ಭಾರತದಲ್ಲಿ ‘ಸಾಲಾರ್’ ಚಿತ್ರವನ್ನು ವಿತರಿಸುತ್ತಿರುವ ಅನಿಲ್ ಥಡಾನಿ ಮತ್ತು ಹೊಂಬಾಳೆ ಅವರ ನಿರ್ಮಾಣ ಸಂಸ್ಥೆ ಕೋಪಗೊಂಡಿದೆ, ಎಂದು ಬಾಲಿವುಡ್ ಮಾಧ್ಯಮ ಸಂಸ್ಥೆಯೊಂದು ಹೇಳಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.