Prabhas Hanu Raghavapudi : 'ಸೀತಾರಾಮಂ' ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿರುವ ಹನು ರಾಘವಪುಡಿ ಪ್ರಭಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ #ಪ್ರಭಾಸ್ ಹನು ಎಂದು ತಾತ್ಕಾಲಿಕವಾಗಿ ಟೈಟಲ್ ಇಡಲಾಗಿದೆ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ನಡಿ ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಭಾಸ್ ಗೆ ಜೋಡಿಯಾಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಂ ಡ್ಯಾನ್ಸರ್ ಇಮಾನ್ವಿ ಈ ಚಿತ್ರದಲ್ಲಿ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. 1940ರ ದಶಕದ ಕಥೆಯನ್ನು ಹನು ರಾಘವಪುಡಿ ಪ್ರೇಕ್ಷಕರ ಎದುರು ಪ್ರಸ್ತುತಪಡಿಸಲಿದ್ದಾರೆ. ಬಾಲಿವುಡ್ ದಿಗ್ಗಜ ಮಿಥುನ್ ಚಕ್ರವರ್ತಿ ಮತ್ತು ಜಯಪ್ರದಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. 


ಇದನ್ನೂ ಓದಿ: ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!!


ಸುದೀಪ್ ಚಟರ್ಜಿ ಐಎಸ್‌ಸಿ ಛಾಯಾಗ್ರಹಣ, ವಿಶಾಲ್ ಚಂದ್ರಶೇಖರ್ ಸಂಗೀತ, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ. ಶೀಘ್ರದಲ್ಲಿಯೇ ಪ್ರಭಾಸ್ ಹಾಗೂ ಹನು ರಾಘವಪುಡಿ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ