Prabhas Acts In Kannappa Without Renumeration: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌  ಪ್ರಭಾಸ್ ಕಣ್ಣಪ್ಪ ಸಿನಿಮಾದಲ್ಲಿ ಸಂಭಾವನೆ ಇಲ್ಲದೆ ನಟಿಸಲಿದ್ದಾರೆ. ನಟ ಪ್ರಭಾಸ್‌ ಒಂದಿ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಹಣವನ್ನು ಸಂಭಾವನೆಯಾಗಿ ತೆಗೆದುಕೊಳ್ಳುತ್ತಾರೆ. ಈ ನಟನ ಎಷ್ಟೋ ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಕೂಡ ಒಂದು ಮಟ್ಟಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಪ್ರಡ್ಯೂಸರ್‌ ಅನ್ನು  ಸೇಫ್ ಮಾಡುತ್ತವೆ. ಆದರೆ ಇದೀಗ ಈ ನಟ ಕಣ್ಣಪ್ಪ ಚಿತ್ರಕ್ಕೆ ಒಂದು ರುಪಾಯಿಯೂ ಕೂಡ ಹಣ ಪಡೆಯುತ್ತಿಲ್ಲ.


COMMERCIAL BREAK
SCROLL TO CONTINUE READING

ಹೌದು.. ಡಾರ್ಲಿಂಗ್‌ ಪ್ರಭಾಸ್‌ ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಅವರು ಪುತ್ರ ಮಂಚು ವಿಷ್ಣು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಕಣ್ಣಪ್ಪ' ಸಿನಿಮಾದಲ್ಲಿ  ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿತ್ತಿದ್ದಾರೆಂಬ ವಿಷಯ ಈಗಾಗಲೇ ಹೊರ ಬಂದಿತ್ತು. ಇನ್ನೂ ಈ ಚಿತ್ರ ನೂರಾರು ಕೋಟಿ ರೂ. ವೆಚ್ಚದಲ್ಲಿ  ನಿರ್ಮಾಣವಾಗುತ್ತಿದ್ದು, ಇದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ಹಲವಾರು ಕಲಾವಿದರ ಮಾಹಿತಿಯು ಕೂಡ ರಿವೀಲ್‌ ಆಗಿದೆ.


ಇದನ್ನೂ ಓದಿ: Priyanka Chopra: ಐಷಾರಾಮಿ ಬಂಗಲೆಗೆ ಮರಳಿದ ಸಂಭ್ರಮದಲ್ಲಿ ದೇಸಿ ಗರ್ಲ್: ವಿಲ್ಲಾ ಹೇಗಿದೆ ಗೊತ್ತೇ??


ಸದ್ಯ ನಟ ಪ್ರಭಾಸ್‌ ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ವಿಷಯ ಹಲವಾರು ದಿನಗಳ ಹಿಂದೆಯೇ ಹೊರ ಬಂದಿತ್ತು. ಈ ನಟ ಶಿವನ ಪಾತ್ರ ಮಾಡಲು ಸಂಭಾವನೆ ತೆಗೆದುಕೊಳ್ಳದಿರುವುದಕ್ಕೆ ಕಾರಣವು ಸಹ ರಿವೀಲ್‌ ಆಗಿದೆ. ಇದಕ್ಕೆ ಕಾರಣ ಈ ಹಿಂದೆ ನಟ ಪ್ರಭಾಸ್‌ ಹಾಗೂ ಮೋಹನ್ ಬಾಬು ಇಬ್ಬರು 'ಬುಜ್ಜಿಗಾಡು' ಸಿನಿಮಾದಲ್ಲಿ ಒಟ್ಟಿಗೆ  ಬಣ್ಣ ಹಚ್ಚಿದ್ದು, ಅವಾಗಿನಿಂದಲೂ ಇಬ್ಬರು ಮಧ್ಯೆ ಒಳ್ಳೆಯ ಒಡನಾಟವಿದೆ. ಆದರಿಂದ ಪ್ರಭಾಸ್‌ ಈ ಚಿತ್ರಕ್ಕೆ ಸಂಭಾವನೆ ಪಡೆಯುತ್ತಿಲ್ಲ.


ಪ್ರಭಾಸ್‌ಗೆ ಮತ್ತು ಮೋಹನ್ ಬಾಬು ಮಧ್ಯೆ ಉತ್ತಮ ಸ್ನೇಹವಿರುವ ಕಾರಣ ಈ ನಟ ಕಣ್ಣಪ್ಪ ಸಿನಿಮಾದಲ್ಲಿ ನಟಿಸುವುದಕ್ಕೆ ಒಂದೇ ಕರೆಗೆ ಒಪ್ಪಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ. ಮುಕೇಶ್ ಕುಮಾರ್‌ ಸಿಂಗ್‌ ಆಕ್ಷನ್‌ ಕಟ್‌ ಹೇಳುತ್ತಿರುವ ಬಹುನಿರೀಕ್ಷಿತ ಈ ಚಿತ್ರದಲ್ಲಿ ಶಿವನ ಪರಮ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ಅಭಿನಯಿಸುತ್ತಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್‌ ಕುಮಾರ್‌, ಮೋಹನ್‌ ಲಾಲ್‌, ಶರತ್‌ಕುಮಾರ್‌, ದೇವರಾಜ್‌, ಬ್ರಹ್ಮಾನಂದಂ ಅಂತಹ ದೊಡ್ಡ ತಾರಾಬಳಗವೇ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.