ಎರಡನೇ ಮಹಾಯುದ್ಧಕ್ಕೆ ಸಜ್ಜಾಗಿರುವ ಪ್ರಭಾಸ್..! ಲೇಟೆಸ್ಟ್ ಸಿನಿಮಾದ ಕ್ರೇಜಿ ಅಪ್ಡೇಟ್
Darling Prabhas: ಸದ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ಮತ್ತೊಂದು ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.. ಆ ಕ್ರೇಜಿ ಅಪ್ಡೇಟ್ ಡಿಟೇಲ್ಸ್ ಇಲ್ಲಿದೆ..
Prabhas Movies Updates: ಪ್ಯಾನ್ ಇಂಡಿಯನ್ ಸ್ಟಾರ್ ಸದ್ಯ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ಒಂದಾದ ಸಲಾರ್ ಸೀಸ್ ಫೈರ್ ಪಾರ್ಟ್ 1 ಚಿತ್ರ ಕ್ರಿಸ್‌ಮಸ್ ಉಡುಗೊರೆಯಾಗಿ ಡಿಸೆಂಬರ್ 22 ರಂದು ಅದ್ಧೂರಿಯಾಗಿ ಪ್ರೇಕ್ಷಕರ ಮುಂದೆ ಬರಲಿದೆ.
ಸಲಾರ್ ಚಿತ್ರದಲ್ಲಿ ಪ್ರಭಾಸ್ ಅತ್ಯಂತ ಹಿಂಸಾತ್ಮಕ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದು.. ಕೆಜಿಎಫ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ ಅದನ್ನು ಅದ್ಧೂರಿಯಾಗಿ ನಿರ್ದೇಶಿಸುತ್ತಿದ್ದಾರೆ. ಆ ನಂತರ ರಾಜಾ ಡಿಲಕ್ಸ್ .. ಪ್ರಾಜೆಕ್ಟ್ ಕೆ ಚಿತ್ರಗಳು ಸರತಿ ಸಾಲಿನಲ್ಲಿವೆ.. ಅಲ್ಲದೇ ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ-ಮಾಜಿ ವಿಶ್ವ ಸುಂದರಿ.. ಬಾಲಿವುಡ್ ನಾಯಕಿ.. ಐಶ್ವರ್ಯಾ ರೈ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?
ಇದರ ಜೊತೆಯಲ್ಲಿ ಪ್ರಭಾಸ್ ಮತ್ತೊಂದು ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.. ಹೌದು ಇತ್ತೀಚೆಗಷ್ಟೇ ಹನು ರಾಘವಪುಡಿ ಅವರು ಪ್ರಭಾಸ್‌ಗೆ ಕಥೆ ಹೇಳಿದ್ದಾರೆ ಎಂದು ವರದಿಯಾಗಿದ್ದು.. ಸೀತಾರಾಮ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಉತ್ತಮ ಮನ್ನಣೆ ಗಳಿಸಿದ ಹನು ರಾಘವಪುಡಿ ಪ್ರಭಾಸ್ ಜೊತೆ ಸಿನಿಮಾ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಲಿದ್ದು, ರು. 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಅಲ್ಲದೆ ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ತಯಾರಾಗಲಿರುವ ಈ ಸಿನಿಮಾ ಲವ್ ಆ್ಯಕ್ಷನ್ ಇರುವ ಎಂಟರ್ ಟೈನರ್ ಆಗಲಿದೆ ಎಂಬುದು ಲೇಟೆಸ್ಟ್ ಟಾಲಿವುಡ್ ಕ್ರೇಜಿ ಟಾಕ್. ಈ ಪ್ರತಿಷ್ಠಿತ ಚಿತ್ರದ ಬಗ್ಗೆ ಸಂಪೂರ್ಣ ವಿವರಗಳು ಶೀಘ್ರದಲ್ಲೇ ಅಧಿಕೃತವಾಗಿ ಬಹಿರಂಗಗೊಳ್ಳಲಿವೆ. ಮತ್ತೊಂದೆಡೆ ಈ ಸಿನಿಮಾದಲ್ಲಿ ನಾಯಕಿ ಯಾರೆಂಬುದು ತಿಳಿಯಬೇಕಿದೆ.
ಇದನ್ನೂ ಓದಿ-ಬಿಗ್’ಬಾಸ್ ಆನೆ ವಿನಯ್ ಗೌಡ ಪ್ರತಿ ಎಪಿಸೋಡ್’ಗೆ ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.