ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ನಟ ಪ್ರಭಾಸ್ ಹೊಸ ಸಿನಿಮಾದ ಪೋಸ್ಟರ್..! ಡೈನೋಸಾರ್ ಟು ಡಾರ್ಲಿಂಗ್
Prabhas Maruthi movie : ಸಾಲಾರ್ ಚಿತ್ರದ ಮೂಲಕ ಪ್ರಭಾಸ್ ಕಮ್ಬ್ಯಾಕ್ ಮಾಡಿದ್ದು, ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಸದ್ಯ ಡಾರ್ಲಿಂಗ್ ಅಭಿಮಾನಿಗಳು ಈ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ಅವರಿಗೆ ಡಬಲ್ ಧಮಾಕ್ ಸಿಕ್ಕಿದ್ದು, ಯಂಗ್ ರೆಬಲ್ ಸ್ಟಾರ್ ಮುಂದಿನ ಚಿತ್ರದ ಅಪ್ಡೇಟ್ ಹೊರ ಬಿದ್ದಿದೆ.
Raja Deluxe updates : ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರೆಬೆಲ್ ಸ್ಟಾರ್ ಪ್ರಭಾಸ್, ನಿರ್ದೇಶಕ ಮಾರುತಿ ಜೊತೆಯೂ ಒಂದು ಸಿನಿಮಾ ಮಾಡುತ್ತಿರುವ ವಿಚಾರ ಎಲ್ಲರಿಗೆ ಗೊತ್ತೇ ಇದೆ. ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದರೂ ಹಲವು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿದೆ. ಸಧ್ಯ ನಿರ್ದೇಶಕ ಮಾರುತಿ ಈ ಕುರಿತು ಅಧಿಕೃತವಾಗಿ ಘೋಷಿಸಿದ್ದು, ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.
ಹೌದು.. ನಿರ್ದೇಶಕ ಮಾರುತಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಅಪ್ಡೇಟ್ ನೀಡಿದ್ದಾರೆ. ಡಾರ್ಲಿಂಗ್ ಅಭಿಮಾನಿಗಳಿಗೆ ಸಂಕ್ರಾಂತಿ ಉಡುಗೊರೆ ನೀಡಲು ರೆಡಿಯಾಗಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಈ ಚಿತ್ರದ ಅಧಿಕೃತ ಘೋಷಣೆಯಾದ ದಿನವೇ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದರ್ಶನ್, ಯಶ್, ಸೇರಿದಂತೆ ಸೌತ್ ಸ್ಟಾರ್ ನಟರನ್ನು ಹಿಂದಿಕ್ಕಿ NO.1 ಸ್ಥಾನಕ್ಕೇರಿದ ಪ್ರಭಾಸ್..!
ಇನ್ನು ಈ ಸಿನಿಮಾದ ಲೀಕ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪ್ರಭಾಸ್ ಲುಕ್ ಪ್ರೇಕ್ಷಕರನ್ನು ಆಕರ್ಷಿಸಿದೆ. ಸಧ್ಯ ಮಾರುತಿ ತಮ್ಮ ಟ್ವಿಟ್ಟರ್ನಲ್ಲಿ ಹಾಕಿರುವ ಫೋಟೋ ಕುತೂಹಲ ಮೂಡಿಸುತ್ತಿದೆ. ಅಲ್ಲದೆ, ಬಹಳ ದಿನಗಳ ನಂತರ ರೆಬೆಲ್ ಸ್ಟಾರ್ ಪ್ರಭಾಸ್ ಅವರನ್ನು ಡಾರ್ಲಿಂಗ್ ಆಗಿ ತೋರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ನಲ್ಲಿ ಪ್ರತಾಪ್ ಮದುವೆ ಮಾತುಕತೆ, ಯಾರು ಆ ಬೆಡಗಿ!?
ಅಂದಹಾಗೆ ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವರದಿಗಳೂ ಇವೆ. ಪ್ರಭಾಸ್ ಜೊತೆ ನಿಧಿ ಅಗರ್ವಾಲ್, ರಿಧಿ ಕುಮಾರ್ ಮತ್ತು ಮಾಳವಿಕಾ ಮೋಹನನ್ ಕಾಣಿಸಿಕೊಳ್ಳಲಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರ್ಮಾಣ ಮಾಡುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.