RRR ದಾಖಲೆ ಮುರಿದ ಸಲಾರ್ : ಬಿಡುಗಡೆಗೂ ಮುನ್ನವೇ ಹಿಸ್ಟರಿ ಕ್ರಿಯೆಟ್ ಮಾಡಿತು ಕನ್ನಡಿಗನ ಸಿನಿಮಾ
Salaar movie : ಪ್ರಭಾಸ್ `ಸಾಲಾರ್` ಬಿಡುಗಡೆಗೂ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ RRR ದಾಖಲೆಯನ್ನು ಪ್ರಶಾಂತ್ ನೀಲ್ ಸಿನಿಮಾ ಬ್ರೇಕ್ ಮಾಡಿದೆ. ಚಿತ್ರವು ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
Salaar break RRR Record : ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾ 'ಸಾಲಾರ್'. ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಮೊದಲ ಭಾಗಕ್ಕೆ 'ಸಲಾರ್: ಭಾಗ 1 ಕದನ ವಿರಾಮ' ( Salaar 1 : Ceasefire) ಎಂದು ಹೆಸರಿಸಲಾಗಿದೆ. ಚಿತ್ರ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಆದರೆ ಬಿಡುಗಡೆಗೂ ಮುನ್ನವೇ ಸಲಾರ್ ಸದ್ದು ಮಾಡುತ್ತಿದ್ದು, 'RRR' ನಿರ್ಮಿಸಿದ್ದ ದಾಖಲೆಯನ್ನು ಸಲಾರ್ ಮುರಿದಿದೆ. ಹೌದು.. ಸಲಾರ್ ಯುಎಸ್ ವಿತರಕರು ಈ ಚಲನಚಿತ್ರವನ್ನು ಅಮೆರಿಕದಲ್ಲಿ ಎಲ್ಲಾ ಸಿನಿಮಾರ್ಕ್ ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದುವರೆಗೆ ಯಾವುದೇ ಕನ್ನಡ ಮತ್ತು ತೆಲುಗು ಸಿನಿಮಾ ಇಂತಹ ಸಾಧನೆ ಮಾಡಿಲ್ಲ. RRR ಸಿನಿಮಾ 285 ಸಿನಿಮಾರ್ಕ್ ಥಿಯೇಟರ್ ನಲ್ಲಿ ರಿಲೀಸ್ ಮಾಡಿ ದಾಖಲೆ ಸೃಷ್ಟಿಸಿತ್ತು.. ಈಗ ಅದನ್ನು ಮೀರಿಸಲು ಸಲಾರ್ ರೆಡಿಯಾಗಿದೆ. ಇದಲ್ಲದೆ, ಸಲಾರ್ ಚಲನಚಿತ್ರವು ಉತ್ತರ ಅಮೆರಿಕಾದಲ್ಲಿ 1980 ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ʼರಾಘುʼ ಮಡದಿಯ ಅಗಲಿಕೆಗೆ ಸ್ಯಾಂಡಲ್ವುಡ್ ಕಂಬನಿ..! ಭಾವುಕ ಕ್ಷಣದ ಫೋಟೋಸ್..
ಎರಡು ಭಾಗಗಳಲ್ಲಿ ಬರುತ್ತಿರುವ ಸಲಾರ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಮುಂತಾದವರು ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಲಾರ್ ಚಿತ್ರದಲ್ಲಿ ಕನ್ನಡದ ಸ್ಟಾರ್ ಹೀರೋ ಯಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಭಾರಿ ಬಜೆಟ್ನಲ್ಲಿ ನಿರ್ಮಿಸುತ್ತಿದೆ. ಈಗಾಗಲೇ ಈ ಸಿನಿಮಾದಿಂದ ಬಿಡುಗಡೆಯಾಗಿರುವ ಪೋಸ್ಟರ್ ಹಾಗೂ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಜಿಎಫ್ ಮಾದರಿಯಲ್ಲೇ ಸಲಾರ್ ಸಿನಿಮಾ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.