ನವದೆಹಲಿ: ಈ ವರ್ಷದ ಅತಿ ದೊಡ್ಡ ಚಿತ್ರಗಳಲ್ಲಿ ಒಂದಾದ ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಸಾಹೋ' ಇಂದು ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಆದರೆ ಈಗ ಪ್ರೈವಸಿ ವೆಬ್ಸೈಟ್ ತಮಿಳುರಾಕರ್ಸ್ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಚಿತ್ರವನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ್ದರಿಂದಾಗಿ ಚಿತ್ರ ನಿರ್ಮಾಪಕರ ನಿರಾಸೆಗೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಬಾಲಿವುಡ್‌ ಲೈಫ್.ಕಾಮ್ ವರದಿಯ ಪ್ರಕಾರ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ ಉತ್ತಮ ಗುಣ ಮಟ್ಟದ ನಕಲು ಪ್ರತಿ ಆನ್ ಲೈನ್ ನಲ್ಲಿ  ಡೌನ್‌ಲೋಡ್ ಲಭ್ಯವಿದೆ ಎನ್ನಲಾಗಿದೆ. 'ಸಾಹೋ' ಬಹುಭಾಷಾ ಚಿತ್ರವಾಗಿದ್ದು, ಇದು ಹೆಚ್ಚಿನ ಆಕ್ಷನ್ ಸನ್ನಿವೇಶಗಳು, ಪ್ರಣಯ ಮತ್ತು ರೋಚಕತೆಯನ್ನು ನೀಡುತ್ತದೆ. ಇದನ್ನು ವಿ ವಂಶ ಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಲಪತಿ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ.


ಅಷ್ಟಕ್ಕೂ ತಮಿಳುರಾಕರ್ಸ್ ನಿಂದ ಚಿತ್ರ ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. ಸಲ್ಮಾನ್ ಖಾನ್ ಅವರ 'ಭಾರತ್', ರಜನಿಕಾಂತ್-ಅಕ್ಷಯ್ ಕುಮಾರ್ ಅಭಿನಯದ '2.0', ಅಮೀರ್ ಖಾನ್ ಅವರ 'ಥಗ್ಸ್ ಆಫ್ ಹಿಂದೂಸ್ತಾನ್', ದಕ್ಷಿಣ ಚಿತ್ರ 'ಸರ್ಕಾರ್', ರಣವೀರ್-ಸಿಂಗ್, ಆಲಿಯಾ ಭಟ್ ಅವರ 'ಗಲ್ಲಿ ಬಾಯ್, ಹಾಲಿವುಡ್ ಚಿತ್ರಗಳಾದ 'ವೆನಮ್', 'ಗಾಡ್ಜಿಲ್ಲಾ: ದಿ ಕಿಂಗ್ ಆಫ್ ದಿ ಮಾನ್ಸ್ಟರ್ಸ್', 'ಅಲ್ಲಾದೀನ್', 'ದೇವಿ 2' ಹಲವಾರು ಚಿತ್ರಗಳು ಈ ವೆಬ್‌ಸೈಟ್‌ ಮೂಲಕ ಸೋರಿಕೆಯಾಗಿವೆ.