Prakash Heggodu Passed Away: ಕನ್ನಡದ ಹಲವಾರು ಸಿನಿಮಾಗಳಲ್ಲಿ ಖಳನಾಯಕನಾಗಿ ಗುರುತಿಸಿಕೊಂಡಿದ್ದ ರಂಗಕರ್ಮಿ ಪ್ರಕಾಶ್ ಹೆಗ್ಗೋಡು ಮಾರ್ಚ್‌ 30 ಶನಿವಾರದಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಟನಿಗೆ 58  ವರ್ಷ ವಯಸ್ಸಾಗಿತ್ತು.


COMMERCIAL BREAK
SCROLL TO CONTINUE READING

ಚಿಕಿತ್ಸೆ ಫಲಕಾರಿಯಾಗದೆ ನಟ ಪ್ರಕಾಶ್‌ ಹೆಗ್ಗೋಡು ನಿನ್ನೆ ನಿಧನರಾಗಿದ್ದಾರೆ. ಪ್ರಕಾಶ್ ಹೆಗ್ಗೋಡು ಅಗಲಿಕೆ ಸುದ್ದಿ ಇಡೀ ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದೆ. ಈ ವಿಷಯವನ್ನು ಕೇಳಿದ ಮೇಲೆ ಕನ್ನಡ ಚಿತ್ರರಂಗದ ಹಲವರು ಮತ್ತು ರಂಗಭೂಮಿ ಆಪ್ತರು ಕಂಬನಿ ಮಿಡಿದಿದ್ದಾರೆ. ಈ ನಟ ಕನ್ನಡದ ಕೆಲವು ಸಿನಿಮಾಗಳಾದ ಶಿವರಾಜ್‌ಕುಮಾರ್‌ ನಟನೆಯ ಸಂತ, ಭಾಗ್ಯದ ಬಳೆಗಾರ, ಉಪೇಂದ್ರ ಅಭಿನಯದ ಕಲ್ಪನಾ 2, ರಾಜಾಹುಲಿ, ಕಲಾಸಿಪಾಳ್ಯ, ವೀರು, ಮಾಡರ್ನ್ ಮಹಾಭಾರತ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. 


ಇದನ್ನೂ ಓದಿ: ಬರ್ಬರವಾಗಿ ಕೊಲೆಯಾದ ಸೂಪರ್‌ ಹಿಟ್‌ ಸಿನಿಮಾಗಳ ನಾಯಕಿ... ಈ ಸ್ಟಾರ್‌ ನಟಿಗೆ ಇದೇಕೆ ಇಂಥ ಸಾವು?


ನಟ ಪ್ರಕಾಶ್‌ ಹೆಗ್ಗೋಡು ಮೂಲತಃ ಶಿವಮೊಗ್ಗದ ಸಾಗರ ತಾಲೂಕಿನ ಪುರಪ್ಪೆಮನೆಯವರಾಗಿದ್ದಾರೆ. ಈ ನಟ ಸಿನಿಮಾಗಳ ಜೊತೆಗೆ ರಂಗಭೂಮಿಯಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್‌ ಹೆಗ್ಗೋಡು ರಂಗಕರ್ಮಿಯಾಗಿಯೂ ಗುರುತಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಹೋರಾಟಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇಂದು ಮಾರ್ಚ್‌ 31 ರಂದು ಪ್ರಕಾಶ್‌ ಹೆಗ್ಗೋಡು ಅಂತಿಮ ವಿಧಿ ವಿಧಾನಗಳೂ ಸ್ವಗೃಹ ಪುರಪ್ಪೆಮನೆಯಲ್ಲಿ ಇಂದು ನೆರವೇರಿಸಲಾಗುತ್ತಿದೆ.


ಪ್ರಕಾಶ್‌ ಹೆಗ್ಗೋಡು ಅಗಲಿಗೆ ರಂಗ ನಮನದ ಮೂಲಕ ಅಂತಿಮ ದರ್ಶನ ನೀಡಲಾಗುತ್ತಿದ್ದು, ಕುಟುಂಬಸ್ಥರು, ಆತ್ಮೀಯರು, ರಂಗಕರ್ಮಿಗಳು ಹಾಗೂ ಊರಿನ ಜನರಿಗೆ ಅಂತಿಮ ದರ್ಶನ ಪಡೆಯಬಹುದಾಗಿದೆ. ಮೊನ್ನೆಯಷ್ಟೇ ಮಾರ್ಚ್‌ 29 ರಂದು ಬಹುಭಾಷಾ ನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೀಗ ನಟ ಪ್ರಕಾಶ್‌ ಹೆಗ್ಗೋಡು ಸಾವು ಸಿನಿಬಳಗಕ್ಕೆ ಇನ್ನಷ್ಟು ನೋವನ್ನುಂಟು ಮಾಡಿದೆ. ಇದು ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಎಂದೇ ಹೇಳಬಹುದು.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.