Prakash Raj on Jai Bhim : ಕೇಂದ್ರ ಸರ್ಕಾರ 2021ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟ ಮಾಡಿದೆ. ತೆಲುಗು ಚಲನಚಿತ್ರಗಳು ಅಭೂತಪೂರ್ವ ಪ್ರಶಸ್ತಿಗಳನ್ನು ಗೆದ್ದಿವೆ. ಅಲ್ಲು ಅರ್ಜುನ್ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಆದ್ರೆ, ಜನ ಮೆಜ್ಜುಗೆಗೆ ಪಾತ್ರವಾಗಿದ್ದ ನಟ ಸೂರ್ಯ ಅಭಿನಯದ ಜೈ ಭೀಮ್‌ ಚಿತ್ರಕ್ಕೆ ಯಾವುದೇ ವಿಭಾಗದಲ್ಲಿ ಒಂದೂ ಪ್ರಶಸ್ತಿ ಸಿಕ್ಕಿಲ್ಲ. ಈ ಕುರಿತು ಅಸಮಾಧಾನ ಭುಗಿಲೆದ್ದಿದೆ.


COMMERCIAL BREAK
SCROLL TO CONTINUE READING

ಹೌದು.. ಜೈ ಭೀಮ್‌ ಚಿತ್ರಕ್ಕೆ ದೇಶಾದ್ಯಂತ ಜನ ಉತ್ತಮ ಸ್ಪಂದನೆ ನೀಡಿದರು. ಅಲ್ಲದೆ, ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗುವ ಭರವಸೆ ಇತ್ತು. ಆದ್ರೆ ಈ ಸುದ್ದಿ ಸುಳ್ಳಾಯಿತು. ಇದರಿಂದಾಗಿ ನೆಟ್ಟಿಗರು, ಸಿನಿ ಪ್ರೇಕ್ಷಕರು ಸೇರಿದಂತೆ ನಟನ ನಟಿರುವ ಈ ಕುರಿತು ಮೌನ ಮುರಿದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟ ಪ್ರಕಾಶ್‌ ರಾಜ್‌ ಸಹ ಈ ಕುರಿತು ಮಾತನಾಡಿದ್ದಾರೆ. ಅಲ್ಲದೆ ಪರೋಕ್ಷವಾಗಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.


ಇದನ್ನೂ ಓದಿ: ದರ್ಶನ್ - ಸುದೀಪ್ 6 ವರ್ಷದ ಮುನಿಸು ಕೊನೆಯಾಯ್ತಾ? ಒಟ್ಟಿಗೆ ಸಿನಿಮಾ ಮಾಡ್ತಾರಾ?


ರಾಷ್ಟ್ರ ಪ್ರಶಸ್ತಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಸಂವಿಧಾನವನ್ನು ಬದಲಾಯಿಸಲು ಬಯಸಿದವರು, ಮಹಾತ್ಮ ಗಾಂಧಿ ಹಂತಕನನ್ನು ಬೆಂಬಲಿಸುವವರು ‘ಜೈ ಭೀಮ್’ ಸಂಭ್ರಮಿಸುವರೆ?” ಎಂದು ಪ್ರಶ್ನಿಸಿದ್ದಾರೆ.


ಅಲ್ಲದೆ, ಮರಾಠಿ ಕವಿತೆಯೊಂದನ್ನು ಹಂಚಿಕೊಂಡಿದ್ದಾರೆ. ‘ಜೈ ಭೀಮ್ ಎಂದರೆ ಬೆಳಕು, ಜೈ ಭೀಮ್ ಎಂದರೆ ಪ್ರೀತಿ, ಜೈ ಭೀಮ್ ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಪಯಣ... ಜೈ ಭೀಮ್ ಎಂದರೆ ಲಕ್ಷಾಂತರ ಜನರ ಕಣ್ಣೀರು’ ಎಂಬುವುದು ಕವಿತೆಯ ಅರ್ಥ. ಸಧ್ಯ ಪ್ರಕಾಶ್ ರಾಜ್ ಟ್ವೀಟ್ ಮೇಲೆ ವಿಭಿನ್ನ ವಾದಗಳು ಕೇಳಿಬರುತ್ತಿವೆ. 


ಇದನ್ನೂ ಓದಿ: ಸುದೀಪ್‌ ಕಟ್ಟು ಮಸ್ತಾದ ದೇಹಕ್ಕೆ ಫಿದಾ ಆದ ಫ್ಯಾನ್ಸ್‌


ಕಳೆದ ವರ್ಷ ಬಿಡುಗಡೆಯಾದ ಜೈ ಭೀಮ್ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಆಸ್ಕರ್‌ಗೂ ಸಹ ಆಯ್ಕೆಯಾಗಿತ್ತು. ಅಲ್ಲದೆ, 94ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿಗಾಗಿ 275 ಚಲನಚಿತ್ರಗಳೊಂದಿಗೆ ಸ್ಪರ್ಧಿಸಿತು. ಆದರೆ, ಪ್ರಶಸ್ತಿ ಸಿಗಲಿಲ್ಲ. ಈ ಸಿನಿಮಾ ಖಂಡಿತಾ ರಾಷ್ಟ್ರಪ್ರಶಸ್ತಿಯಲ್ಲಿ ಮನ್ನಣೆ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಇತ್ತೀಚಿನ ಘೋಷಣೆ ಕಾಲಿವುಡ್‌ಗೆ ನಿರಾಸೆ ಮೂಡಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.