Prakash Raj on Pathaan : ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್ ಅಭಿನಯದ ʼಪಠಾಣ್ʼ ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸಿದೆ. ಎಸ್‌ಆರ್‌ಕೆ ಪಠಾಣ್‌ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಈಗಾಗಲೇ 50 ಕೋಟಿ ಗಡಿ ದಾಟುವ ಮೂಲಕ ಗ್ರ್ಯಾಂಡ್‌ ಓಪನಿಂಗ್ ಪಡೆದುಕೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸುವ ನಿರೀಕ್ಷೆ ಇದೆ. ಇನ್ನು ಪಠಾಣ್‌ ಪರ ಮಾತನಾಡಿರುವ ಬಹುಭಾಷಾ ನಟ ಪ್ರಕಾಶ್‌ ರೈ ಬಾಯ್ಕಾಟ್‌ ಎಂದವರಿಗೆ ಮಾತಿನ ಚಾಟಿ ಬೀಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು... ʼಪಠಾಣ್‌ʼ ಸಿನಿಮಾದ ಬೇಷರಂ ರಂಗ್‌ ಹಾಡು ಬಿಡುಗಡೆಯಾದ ಬೆನ್ನಲ್ಲೆ ವಿರೋಧಕ್ಕೆ ಕಾರಣವಾಗಿತ್ತು. ಹಾಡಿನಲ್ಲಿ ದೀಪಿಕಾ ತೊಟ್ಟಿದ್ದ ಕೇಸರಿ ಬಿಕಿನಿ ವಿವಾದ ಸೃಷ್ಟಿಸಿತ್ತು. ಅಲ್ಲದೆ, ಚಿತ್ರವನ್ನು ಬಹಿಷ್ಕಾರ ಮಾಡುವಂತೆ ಹಿಂದೂ ಸಂಘಟನೆಗಳು ಸೇರಿದಂತೆ ಕೆಲ ರಾಜಕೀಯ ನಾಯಕರು ಧ್ವನಿ ಎತ್ತಿದ್ದರು. ಸೆನ್ಸಾರ್‌ ಮಂಡಳಿಯೂ ಸಹ ಚಿತ್ರದ ಕೆಲ ಸೀನ್‌ಗಳಿಗೆ ಕತ್ತರಿ ಹಾಕುವಂತೆ ಸೂಚನೆ ನೀಡಿತ್ತು. ನಿನ್ನೆ ʼಪಠಾಣ್‌ʼ ತೆರೆ ಮೇಲೆ ಅಪ್ಪಳಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.


RRR film : ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿಗೆ ಪದ್ಮಶ್ರೀ ಗೌರವ


ಇನ್ನು ಪಠಾಣ್‌ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿರುವ ಬೆನ್ನಲ್ಲೆ, ಬಹುಭಾಷಾ ನಟ ಪ್ರಕಾಶ್‌ ರೈ ಸಿನಿಮಾ ಕುರಿತು ಹಾಡಿ ಹೊಗಳಿದ್ದಾರೆ. ಈ ಕುರಿತು ಟ್ಟೀಟ್‌ ಮಾಡಿರುವ ಅವರು, ʼಹೇ ಬಾಯ್ಕಾಟ್‌ ಬಿಗೋಟ್ಸ್.. ಶ್‌.. #ಹಲ್ಲಾಬೋಲ್ ಕಿಂಗ್ ಖಾನ್ ಎಸ್‌ಆರ್‌ಕೆ ಈಸ್‌ ಬ್ಯಾಕ್‌, ಕೀಪ್‌ ರಾಕಿಂಗ್‌ ದೀಪಿಕಾʼ ಅಂತ ಬರೆದುಕೊಂಡು ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆಯವರನ್ನು ಟ್ಯಾಗ್‌ ಮಾಡಿದ್ದಾರೆ.


ಇಂದು ಪಠಾಣ್‌ ಬಿಡುಗಡೆಯಾದ ಎರಡನೇ ದಿನ, ವಿಶ್ವದಾದ್ಯಂತ 175 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ. ಪಠಾಣ್ ಭಾರತದಲ್ಲಿ ಮೊದಲ ದಿನವೇ 54 ಕೋಟಿ ಗಳಿಸಿದೆ ಎಂದು ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.