ಬೆಂಗಳೂರು : ಪ್ರತಿದಿನ ನಾನು ನಿಂದನೆಗಳನ್ನು ಸ್ವೀಕರಿಸುತ್ತೇನೆ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತಿಗೆ ನಟ ಪ್ರಕಾಶ್‌ ರಾಜ್‌ ವ್ಯಂಗ್ಯವಾಡಿದ್ದಾರೆ. ಮೋದಿ ಮಾತನಾಡಿರುವ ವಿಡಿಯೋ ಹಂಚಿಕೊಂಡು, ಇದನ್ನೇ ನಾಚಿಕೆಗೇಡು ಮತ್ತು ಅಹಂಕಾರ ಎಂದು ಕರೆಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.


COMMERCIAL BREAK
SCROLL TO CONTINUE READING

ತೆಲಂಗಾಣ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ.. ನಾನು ಪ್ರತಿದಿನ 2 ರಿಂದ 2.5 ಕೆಜಿಯಷ್ಟು ನಿಂದನೆಗಳನ್ನು ತಿನ್ನುತ್ತೇನೆ. ಆದರೂ ನನಗೆ ಸುಸ್ತಾಗುವುದಿಲ್ಲ. ದೇವರ ಅನುಗ್ರಹದಿಂದ ಆ ನಿಂದನೆಗಳೆಲ್ಲವೂ ನನ್ನ ದೇಹಕ್ಕೆ ಪೋಷಕಾಂಶಗಳಾಗಿ ಪರಿವರ್ತನೆಯಾಗುತ್ತಿವೆ ಎಂದು ಹೇಳಿದ್ದರು. ಇನ್ನು ಮೋದಿ ಮಾತಿಗೆ ನಟ ಪ್ರಕಾಶ್‌ ರಾಜ್‌, ಇದನ್ನೇ ಅಹಂಕಾರ ಮತ್ತು ನಾಚಿಕೆಗೇಡು ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. 


ಇದನ್ನೂ ಓದಿ: ಕಾಂತಾರ ʼವರಾಹ ರೂಪಂʼ ಹಾಡು ಡಿಲೀಟ್‌ : ʼತೈಕ್ಕುಡಂ ಬ್ರಿಡ್ಜ್‌ʼಗೆ ಲಭಿಸಿತಾ ಜಯ..!


ಇನ್ನು ಬೇಗಂಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಮೋದಿ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಅವರು ತೆಲಂಗಾಣದ ಹೆಸರು ಹೇಳಿಕೊಂಡು ಅಧಿಕಾರಕ್ಕೇರಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ತಕ್ಷಣ ಅಭಿವೃದ್ಧಿಯನ್ನು ಮರೆತಿದ್ದಾರೆ. ಅಲ್ಲದೆ, ಕುಟುಂಬ ರಾಜಕಾರಣದಂತಹ ಕೆಟ್ಟ ಪದ್ದತಿಯನ್ನು ನಾಶ ಮಾಡಬೇಕು ಎಂದು ಸಿಎಂ ಕೆಸಿಆರ್‌ ವಿರುದ್ಧ ಪ್ರಧಾನಿ ಗುಡುಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.