ಬೆಂಗಳೂರು: ಪವರ್ ಸ್ಟಾರ್, ಕರುನಾಡ ರತ್ನ ಪುನೀತ್ ರಾಜ್‍ಕುಮಾರ್ ಅವರ ಕನಸಿನ ಕೂಸು ‘ಗಂಧದಗುಡಿ’ ಶುಕ್ರವಾರ(ಅ.28) ಬೆಳ್ಳಿತೆರೆಗೆ ಅಪ್ಪಳಿಸಿದೆ. ಇಂದಿಗೆ ಸರಿಯಾಗಿ 2 ವರ್ಷಗಳ ಹಿಂದೆ (ಅ.29) ಶುರುವಾಗಿದ್ದ ‘ಗಂಧದಗುಡಿ’ ಜರ್ನಿಯನ್ನು ಬೆಳ್ಳಿತೆರೆ ಮೇಲೆ ವೀಕ್ಷಿಸಿದ ಲಕ್ಷಾಂತರ ಅಭಿಮಾನಿಗಳು ಪುನೀತರಾಗುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕದ ಪ್ರಮುಖ ವನ್ಯ ಸಂಪತ್ತು, ಪ್ರಾಣಿ ಮತ್ತು ಸಸ್ಯ ಸಂಕುಲ, ಬೆಟ್ಟ-ಗುಡ್ಡ ಹೀಗೆ ಅನೇಕ ವಿಶೇಷತೆಗಳನ್ನು ‘ಗಂಧದಗುಡಿ’ಯಲ್ಲಿ ಚಿತ್ರಿಸಲಾಗಿದೆ. ಈ ವಿಶೇಷ ಜರ್ನಿಯಲ್ಲಿ ಪುನೀತ್ ಅವರಿಗೆ ಅಮೋಘವರ್ಷ ಅವರು ಸಾಥ್ ನೀಡಿದ್ದಾರೆ. ಕಾಡು ಹಾಗೂ ಪ್ರಾಣಿಗಳನ್ನು ಮುಂದಿನ ತಲೆಮಾರಿಗೆ ಉಳಿಸಬೇಕೆಂಬ ಮಹತ್ತರ ಸಂದೇಶವನ್ನು ಅಪ್ಪುವಿನ ‘ಗಂಧದಗುಡಿ’ಯಲ್ಲಿ ಸಾರಲಾಗಿದೆ.


ತಮ್ಮ ನೆಚ್ಚಿನ ನಟ, ಕರುನಾಡ ರತ್ನವನ್ನು ಕೊನೆಯ ಬಾರಿಗೆ ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳೋಣವೆಂದು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ‘ಗಂಧದಗುಡಿ’ಯ ವೈಭವ ನೋಡಿ ಮೆಚ್ಚಿಕೊಂಡಿದ್ದಾರೆ. ಥಿಯೇಟರ್‍ನಿಂದ ಹೊರಬಂದು ಅನೇಕರಿಗೆ ಈ ಡ್ಯಾಕು ಫಿಲ್ಮಂ ನೋಡುವಂತೆ ಸಲಹೆ ನೀಡುತ್ತಿದ್ದಾರೆ. ಕೆಲವೊಬ್ಬರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಆಗಮಿಸಿ ಸ್ಯಾಂಡಲ್‍ವುಡ್ ರಾಜಕುಮಾರನ ‘ಗಂಧದಗುಡಿ’ಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ಜೀ ಕನ್ನಡದಿಂದ ಅಭಿಮಾನದ ಅಪ್ಪು ಪುತ್ಥಳಿ ಅನಾವರಣ


‘ಗಂಧದಗುಡಿ’ ಬಗ್ಗೆ ಸಾಮಾನ್ಯ ಪ್ರೇಕ್ಷಕ ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು ಸಹ ವೀಕ್ಷಿಸಿದ್ದು, ಹಾಡಿ ಹೊಗಳಿದ್ದಾರೆ. ಸ್ಯಾಂಡಲ್‍ವುಡ್ ನಟರಾದ ಚಾಲೆಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಮತ್ತು ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ‘ಗಂಧದಗುಡಿ’ ಕಣ್ತುಂಬಿಕೊಂಡು ಟ್ವೀಟ್ ಮಾಡಿದ್ದಾರೆ.  


‘ಇಂತಹ ಅತ್ಯದ್ಭುತ ಹಾಗೂ ದೀರ್ಘಕಾಲ ನೆನಪಿರುವಂತಹ ಅನುಭವ ಕೊಟ್ಟ ಅಶ್ವಿನಿ ಪುನೀತ್ ರಾಜ್‍ಕುಮಾರ್, ಅಮೋಘವರ್ಷ ಹಾಗೂ ಇಡೀ ‘ಗಂಧದಗುಡಿ’ ಚಿತ್ರ ತಂಡಕ್ಕೆ ಧನ್ಯವಾದಗಳು. ಕನ್ನಡ ತಾಯಿಯ ಮಗನಾದ ಪುನೀತ್ ರಾಜ್‍ಕುಮಾರ್ ಅವರಿಗಿಂತ ನಮ್ಮ ಕರ್ನಾಟಕವನ್ನು ಬೇರೆ ಯಾರಿಗೂ ಇಷ್ಟು ಚೆನ್ನಾಗಿ ತೋರಿಸಲು ಸಾಧ್ಯವಿಲ್ಲ. ಇಂತಹ ಚಿತ್ರವನ್ನು ನಮಗೆ ನೀಡಿದ್ದಕ್ಕೆ ಧನ್ಯವಾದಗಳು ಡಾ.ಪುನೀತ್ ರಾಜ್ಕುಮಾರ್ ಸರ್’ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.


ದೇವರು ‘ಬೆಟ್ಟದ ಹೂವ’ನ್ನು ಕಿತ್ತುಕೊಂಡು ಭರ್ತಿ 1 ವರ್ಷ! ಆಕಾಶ-ಭೂಮಿ ಇರೋವರೆಗೂ ‘ಅಪ್ಪು’ ಅಮರ


ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ