Prashanth sambargi threat : ರಾಮೇಶ್ವರಂ ಕೆಫೆ ಸ್ಫೋಟವನ್ನ ಖಂಡಿಸಿದ್ದ ಬಳಿಕ ತನಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಅಪರಿಚಿತ ನಂಬರ್ ಗಳಿಂದ ಜೀವ ಬೆದರಿಕೆ ಸಂದೇಶಗಳನ್ನ ಕಳಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.ವಾಟ್ಸ್ಯಾಪ್​ ಹಾಗೂ ಇ-ಮೇಲ್​ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಪ್ರಶಾಂತ್ ಸಂಬರ್ಗಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.


COMMERCIAL BREAK
SCROLL TO CONTINUE READING

ಮಾರ್ಚ್ 8ರಂದು ಐಟಿಪಿಎಲ್ ಮುಖ್ಯರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಭಯೋತ್ಪಾದಕ ಕೃತ್ಯವನ್ನ ಖಂಡಿಸಿದ್ದ ನಾನು ನಂತರ ಕೆಫೆಯ ಪುನರಾರಂಭಕ್ಕೂ ಹೋಗಿದ್ದೆ. ಈ ನಡುವೆ ವಿದೇಶದ ಮೊಬೈಲ್​ ಸಂಖ್ಯೆಗಳಿಂದ ಬೆದರಿಕೆ ಸಂದೇಶಗಳು ಬರಲಾರಂಭಿಸಿದ್ದವು. ಆರಂಭದಲ್ಲಿ ಅವುಗಳನ್ನ ನಿರ್ಲಕ್ಷಿಸಿದ್ದೆ. ಆದರೆ ನಂತರದ ದಿನಗಳಲ್ಲಿ ನನ್ನ ಕುಟುಂಬಸ್ಥರಿಗೂ ಬೆದರಿಕೆ ಸಂದೇಶಗಳು‌ ಬರಲಾರಂಭಿಸಿದ್ದು, ನನ್ನ ಮತ್ತು ಮಕ್ಕಳನ್ನು ಸಹ ಟಾರ್ಗೆಟ್ ಮಾಡಲಾಗುತ್ತಿದೆ. ಆದ್ದರಿಂದ ಸಂದೇಶ ಬಂದ ನಂಬರ್ ಗಳ ಮೂಲವನ್ನ ಪರಿಶೀಲಿಸಿದಾಗ ಅಮೆರಿಕ, ಕ್ರೊಯೇಷಿಯಾ ಮುಂತಾದ ದೇಶಗಳ ವಾಟ್ಸ್ಯಾಪ್ ಸಂಖ್ಯೆಗಳನ್ನು ಬಳಸಿರುವುದು ತಿಳಿದು ಬಂದಿದೆ. ಆದ್ದರಿಂದ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಪ್ರಶಾಂತ್​ ಸಂಬರ್ಗಿಯವರು ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ನಟಿ ಅನುಪಮಾ ಎದೆ ಮೇಲೆ ಮೂಡಿರುವ ಸುಂದರ ಟ್ಯಾಟೂ ಅರ್ಥವೇನು ಗೊತ್ತೆ..?


ಪ್ರಶಾಂತ್ ಸಂಬರ್ಗಿ ನೀಡಿರುವ ದೂರಿನನ್ವಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.