Shivaraj Kumar : ಖ್ಯಾತ ನಟ ಶಿವರಾಜ್‌ ಕುಮಾರ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲವನ್ನು ನೀಡುತ್ತಿದ್ದು, ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯ ಹಲವು ಟೀಕೆಗಳು ವ್ಯಕ್ತವಾಗುತ್ತಿದ್ದು, ಶಿವಣ್ಣ ಇವುಗಳಿಗೆಲ್ಲ ಉತ್ತರ ಕೊಡುತ್ತಾ ಬರುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾದ ತಮ್ಮ ಪ್ರಚಾರವನ್ನು ಮುಂದುವರೆಸಿದ್ದಾರೆ. ಇದೇ ವಿಚಾರವಾಗಿ ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರಗಿ ನಾಲಿಗೆ ಹರಿಬಿಟ್ಟಿದ್ದರು. 


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಶಿವಣ್ಣ ಪ್ರಶಾಂತ್‌ ಸಂಬರಗಿ ನಿಮ್ಮ ಮಾತನ್ನು ವಾಪಸ್‌ ಪಡೆಯಬೇಕು ಎಂದು ಹೇಳಿದ್ದರು. ಇದೀಗ ಮತ್ತೆ ಶಿವಣ್ಣನ ಮುಂದೆ 10 ಪ್ರಶ್ನೆಗಳನ್ನು ಇಟ್ಟು ಅವರನ್ನು ಕೆಣಕುತ್ತಿದ್ದಾರೆ. 


 


ಇದನ್ನೂ ಓದಿ-ಸರಳತೆಗೆ ಇನ್ನೊಂದು ಹೆಸರೇ ಲವ್ಲಿ ಸ್ಟಾರ್‌ ಎಂದ ಫ್ಯಾನ್ಸ್‌: ಪೋಟೋಸ್‌ ನೋಡಿ


ಪ್ರಶಾಂತ್‌ ಸಂಬರಗಿ ಶಿವಣ್ಣನಿಗೆ ಇಟ್ಟ ಹತ್ತು ಪ್ರಶ್ನೆಗಳಿವು 
1. ನೀವು ಹಿಂದುವಾಗಿ ಭಜರಂಗಿ ಹೆಸರಿನಲ್ಲಿ ನಟಿಸಿದ್ದೀರಿ, ಬಜರಂಗದಳವನ್ನು ಕಾಂಗ್ರೆಸ್ ನಿಷೇಧಿಸುವ ಬಗ್ಗೆ ನಿಮ್ಮ ನಿಲುವು ಏನು?
2. ನಿಮ್ಮ ಕಾಂಗ್ರೆಸ್ ಒಂದು ಒಳ್ಳೆಯ ಮತ್ತು ಸತ್ಯವಾದ ಚಲನಚಿತ್ರ ದಿ ಕೇರಳ ಸ್ಟೋರಿಯನ್ನು ಬ್ಯಾನ್ ಮಾಡಲು ಹೊರಟಿದೆ. ಕನ್ನಡದ ಶ್ರೇಷ್ಠ ನಟ ಮತ್ತು ನಿರ್ಮಾಪಕರಾಗಿ ನಿಮ್ಮ ನಿಲುವು ಏನು?
3. ನೀವು ಚಿತ್ರರಂಗದಿಂದ ಬಂದವರು, ಬೆಂಗಳೂರಿನಲ್ಲಿ ದಿ ಕಾಶ್ಮೀರ್ ಫೈಲ್ಸ್ ಪ್ರದರ್ಶನಗೊಂಡಾಗ ಕಾಂಗ್ರೆಸ್ ಅದನ್ನು ವಿರೋಧಿಸಿತು, ಹಾಗಾದರೆ ನಿಮ್ಮ ದಿವ್ಯ ಮೌನ ಏಕೆ? 
4. ಕನ್ನಡಿಗರ ಪರವಾಗಿದ್ದ ಕನ್ನಡ ಡಬ್ಬಿಂಗ್ ವಿರೋಧಿಸಿ ಈಗ ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದೀರಿ.. ಇದು ಸರಿಯೇ?
5. ಡಾ.ರಾಜಕುಮಾರ್ ನಮ್ಮ ಆರಾಧ್ಯ ದೈವವಾಗಿದ್ದು, ಅವರು ರಾಜಕೀಯದಿಂದ ದೂರವಿದ್ದರೂ ಗೋಕಾಕ್ ಚಳವಳಿ ಮತ್ತು ಕನ್ನಡಕ್ಕಾಗಿ ಅವರ ಹೋರಾಟದ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಷಯ, ಅವರ ಮಗನಾಗಿ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು?
6.2020 ರಲ್ಲಿ ಸ್ಯಾಂಡಲ್ ವುಡ್ ಡ್ರಗ್ ಬಗ್ಗೆ ನೀವು ಯಾಕೆ ಮೌನವಾಗಿದ್ದಿರಿ? ಕರ್ನಾಟಕವನ್ನು ಡ್ರಗ್ಸ್ ಮುಕ್ತ ಮಾಡಲು ನಮ್ಮ ಯುವ ಜನತೆಗೆ ನಿಮ್ಮ ಸಂದೇಶವೇನು?
7. PFI ಮತ್ತು ಜಿಹಾದಿ ಜನರಿಂದ RSS ಹಿಂದೂ ಕಾರ್ಯಕರ್ತರ ಹತ್ಯೆಗಳ ಬಗ್ಗೆ ನಿಮ್ಮ ನಿಲುವು ಏನು?
8. ನಿಮ್ಮ ಎಲ್ಲಾ ಚಿತ್ರಗಳಲ್ಲಿ ಹುಡುಗಿಯರನ್ನು ಗೌರವಿಸುವ ಪಾತ್ರವನ್ನು ನೀವು ಮಾಡುತ್ತಿದ್ದೀರಿ, ಲವ್ ಜಿಹಾದ್ ಬಗ್ಗೆ ನಿಮ್ಮ ನಿಲುವು ಏನು?
9. ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರ ಮತ್ತು ಆದಾಯ ತೆರಿಗೆ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
10. ಮುಸ್ಲಿಂ ನಿರ್ಮೂಲನೆ ಕಾಂಗ್ರೆಸ್ ನ ಮಂತ್ರ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹಿಂದೂಗಳು ನಿಮ್ಮ ಚಿತ್ರವನ್ನು ನೋಡಬಾರದೇ?


ಇದನ್ನೂ ಓದಿ-ತಮಗಿಂತ ಹೆಚ್ಚಿನ ವಯಸ್ಸಿನ ಯುವತಿಯರನ್ನೇ ಹುಡುಗರು ಏಕೆ ಇಷ್ಟಪಡ್ತಾರೆ ಗೊತ್ತಾ..! ಓದಿ


ಈ ರೀತಿಯಾಗಿ ಪ್ರಶ್ನೆಗಳನ್ನು ಮುಂದಿಡುವ ಮೂಲಕ ಪ್ರಶಾಂತ್‌ ಸಂಬರಗಿ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವ ಶಿವಣ್ಣನನ್ನು ಕೆಣಕಿದ್ದಾರೆ. ಈ ಹಿಂದೆಯೂ ಪ್ರಶಾಂತ್‌ ಸಂಬರಗಿ ಶಿವಣ್ಣನ ಕುರಿತು ಅವಹೇಳನಕಾರಿಯಾಗಿ ಒಂದು ಪೋಸ್ಟ್‌ನ್ನು ಶೇರ್‌ ಮಾಡಿದ್ದರು ಅದನ್ನು ಸ್ವಲ್ಪ ಸಮಯದ ನಂತರ ತಾವೇ ಡಿಲೀಟ್‌ ಕೂಡಾ ಮಾಡಿದ್ದರು. 


ಈ ವಿಚಾರವಾಗಿ ಶಿವಣ್ಣನೂ ಕೂಡ ಹುಬ್ಬಳ್ಳಿಯಲ್ಲಿ ನಾನು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಿಲ್ಲ, ನಾನು ಯಾರನ್ನು ಟೀಕೆ ಮಾಡಲು ಬಂದಿಲ್ಲ ಎಂದು ಪ್ರಶಾಂತ್‌ ಸಂಬರಗಿ ಪೋಸ್ಟ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.