Preity Zinta Talks About Bollywood: ಭಾರತದ ಚಿತ್ರರಂಗದ ಹಲವಾರು ನಟಿಮಣಿಯರು ಸಿನಿಮಾದಲ್ಲಿ ಅಭಿನಯಿಸಲು ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಮಾಡಲಾದ ಒತ್ತಡದ ಕಥೆಯನ್ನು ಹೇಳಿಕೊಂಡಿದ್ದಾರೆ. ಇದೀಗ ಇಂತವರ ಸಾಲಿಗೆ ಬಾಲಿವುಡ್‌ನ ಚೆಲುವೆ ನಟಿ ಪ್ರೀತಿ ಜಿಂಟಾ ಕೂಡ ಸೇರಿದ್ದಾರೆ. ಈ ನಟಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬಾಲಿವುಡ್ ಯಾರೆಂದರೆ ಯಾರಿಗೂ ಸುರಕ್ಷಿತ ವಾದ ಸ್ಥಳ ಅಲ್ಲವೆಂದು ಹೇಳಿದ್ದಾರೆ. ಸದ್ಯ ಐಪಿಎಲ್ ನೆಪ ಮಾಡಿಕೊಂಡು ಭಾರತದ ಪ್ರದಕ್ಷಿಣೆ ಹಾಕ್ತಿರುವ ನಟಿ, ಇದೀಗ ಈಕೆಯ ಗತಕಾಲದ ಸಂದರ್ಶನವೊಂದರ ವಿಡಿಯೋ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ನಟಿ ಪ್ರೀತಿ ಜಿಂಟಾ ಬದುಕಿನ ಕಥೆ-ವ್ಯಥೆ-ಏರಿಳಿತದ ಬಗ್ಗೆ ಮಾತನಾಡುತ್ತಾ, ಬಣ್ಣದ ಬದುಕಿನ ಕರಾಳ ಮುಖವನ್ನು ಕಳಚಿಡುವ ಪ್ರಯತ್ನಿಸಿದ್ದಾರೆ. ಸದ್ಯ ಸಭ್ಯತೆ-ಅಸಭ್ಯತೆ, ಪ್ರೀತಿ-ಮೋಸ ಹಾಗೂ ನಂಬಿಕೆ-ಅಪನಂಬಿಕೆಯ ಬಗ್ಗೆ ಈ ನಟಿ ಆಡಿದ ಮಾತುಗಳು ಚರ್ಚೆಯನ್ನ ಹುಟ್ಟು ಹಾಕಿದೆ. ಏಕೆಂದರೆ ಪ್ರೀತಿ ಜಿಂಟಾ ಬಾಲಿವುಡ್‌ ಬಗ್ಗೆ, ಹಲವು ಬಗೆ ಬಗೆಯ ಜನರ ಅಭಿರುಚಿಯ ಬಗ್ಗೆ ಮಾತನಾಡಿಡುವುದರ ಜೊತೆಗೆ ಲವ್‌ ರಿಲೇಶನ್‌ ಶಿಪ್‌ ಬಗ್ಗೆಯೂ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Actress Sudharani: ಮೊದಲ ಪತಿಯಿಂದ ನರಕ ಅನುಭವಿಸಿದ್ದ ಸುಧಾರಾಣಿ ಬಾಳನ್ನು ಬದಲಿಸಿದ ಎರಡನೇ ಪತಿ ಇವರೇ!!


ಬಿ-ಟೌನ್‌ ಬೆಡಗಿ ಪ್ರೀತಿ ಜಿಂಟಾ ಸಂದರ್ಶನಲ್ಲಿ ಮಾತನಾಡುವಾಗ ಬಾಲಿವುಡ್‌ನಲ್ಲಿ ನೆಲೆಯೂರಬೇಕು ಅಂದರೆ, ಭದ್ರ ಬುನಾದಿ ಬೇಕು. ಸಿನಿಮಾದ ಹಿನ್ನೆಲೆ ಇಲ್ಲದ ಹುಡುಗ ಅಥವಾ ಹುಡುಗಿ ಯಾರಿಗೂ ಕೂಡ ಈ ಬಣ್ಣದ ಪ್ರಪಂಚ ಸುರಕ್ಷಿತ ಅಲ್ಲವೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಹಾಗೆಯೇ ಈ ನಟಿ ಸಿನಿಮಾರಂಗದಲ್ಲಿ ಬೆಳಿಯಬೇಕೆಂದರೆ ಸಂಪರ್ಕ, ಪರಿಚಯ, ಸ್ನೇಹ, ನಂಬಿಕೆ ಮತ್ತು ನಂಬಿಕೆ ದ್ರೋಹ ಹೀಗೆ ನಾನಾ ತರಹದ ಮುಖವಾಡವನ್ನು ಹಾಕಿಕೊಂಡು ಜೀವನವನ್ನು ನಡೆಸುವ ಅನೇಕ ಮಂದಿ ಇಲ್ಲಿ ಇದ್ದಾರೆಂದು ಎಂದಿದ್ದಾರೆ.


ಪ್ರೀತಿ ಜಿಂಟಾ ಪ್ರತಿಭೆ ನಮ್ಮಲ್ಲಿ ಇದ್ದರೆ ಪ್ರಭಾವಕ್ಕೆ ನಾವು ಮಣಿಯಬಾರದು. ಎಲ್ಲ ತರಹದ ಪಾತ್ರ ಮಾಡಲು ಬಹುತೇಕ ಕಲಾವಿದರು ಸಿದ್ದರಾಗಿರುತ್ತಾರೆ. ಆದರೆ ಇತರಹದ ಅಡೆ ತಡೆಗಳನ್ನು ದಾಟಿಕೊಂಡು, ನಮ್ಮ ಅಸ್ತಿತ್ವ ಕಂಡುಕೊಳ್ಳುವುದೇ ನಿಜವಾದ ಸವಾಲು. ಇಷ್ಟು ಮಾತ್ರವಲ್ಲದೇ ನಮ್ಮ ಗಮನ ನಮ್ಮ ಗಮ್ಯದ ಕಡೆ ಇದ್ದಾಗ ಮಾತ್ರ ಗೆಲುವು ಸಾಧ್ಯ ಎಂದು ತಿಳಿಸಿದ್ದಾರೆ. ಸದ್ಯ ಈ ನಟಿ ಮಾತನಾಡಿರುವ ಈ ಮಾತುಗಳು ಬಾಲಿವುಡ್‌ನಲ್ಲಿ ಹೊಸದೊಂದು ಚರ್ಚೆಯನ್ನು  ಹುಟ್ಟು ಹಾಕಿದ್ದು, ಸದ್ಯ ಸರಿ-ತಪ್ಪುಗಳ ಕುರಿತು ಇನ್ನೊಮ್ಮೆ ಚರ್ಚೆ ಶುರುವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.