Anant Ambani wedding: ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವ ಜರುಗಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ವರನ ಪೋಷಕರಾದ ನೀತಾ ಮತ್ತು ಮುಖೇಶ್ ಅಂಬಾನಿ ಪ್ರಾಧನಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.


COMMERCIAL BREAK
SCROLL TO CONTINUE READING

ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ವೀರನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜುಲೈ 12, 2024 ರ ರಾತ್ರಿ ವಿವಾಹವಾದರು. ಸಾಂಪ್ರದಾಯಿಕ ಗುಜರಾತಿ ಶೈಲಿಯಲ್ಲಿ ವಿವಾಹವನ್ನು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಸಲಾಯಿತು .


ಚಲನಚಿತ್ರ, ರಾಜಕೀಯ, ಕ್ರೀಡೆ ಮತ್ತು ವ್ಯಾಪಾರ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು, ದೇಶೀಯ ಮತ್ತು ಅಂತರರಾಷ್ಟ್ರೀಯ ಸ್ಟಾರ್‌ಗಳು ಕೂಡ ಸಮಾರಂಭದಲ್ಲಿ ಹಾಜರ್‌ ಆಗಿದ್ದರು. ಮದುವೆ ಸಮಾರಂಭವು ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿ ನಡೆಯಿತು.


ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ 'ಶುಭ ಆಶೀರ್ವಾದ'ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು, ವಿವಿಧ ಕ್ಷೇತ್ರಗಳ ಹಲವಾರು ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಿದ್ದರು.


'ಶುಭ ಆಶೀರ್ವಾದ' ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಗೋರೈ-ಮುಲುಂಡ್ ಲಿಂಕ್ ರಸ್ತೆಯಲ್ಲಿ ಥಾಣೆ ಮತ್ತು ಬೊರಿವಲಿ ಸುರಂಗಗಳ ಶಂಕು ಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿದರು. ಈ ಉದ್ಘಾಟನೆಯು ಮುಂಬೈನಲ್ಲಿ ₹ 29,400 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಪ್ರಾರಂಭವನ್ನು ಗುರುತಿಸಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗಿದ್ದರು.


ಮದುವೆಯ ಸಂಭ್ರಮಾಚರಣೆಯ ಎರಡನೇ ದಿನವು ಫ್ಯಾಷನ್ ಐಕಾನ್‌ಗಳು, ತಾರೆಗಳು, ರಾಜಕಾರಣಿಗಳು ಮತ್ತು ಪುರೋಹಿತರನ್ನು ಸೇರಿದಂತೆ ಸೆಲೆಬ್ರಿಟಿಗಳನ್ನು ಹಾಜರ್‌ ಇದ್ದರು. 


'ಶುಭ್ ಆಶೀರ್ವಾದ್' ಸಮಾರಂಭದ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ಭಾರಿ ವೈರಲ್ ಆಗಿದ್ದು, ಈವೆಂಟ್‌ನ ಭವ್ಯತೆ ಮತ್ತು ಮಹತ್ವವನ್ನು ಪ್ರದರ್ಶಿಸುತ್ತದೆ.


ರಿಯಾಲಿಟಿ ಟಿವಿ ತಾರೆ ಕಿಮ್ ಕಾರ್ಡಶಿಯಾನ್, ಆಕೆಯ ಸಹೋದರಿ ಖ್ಲೋ, ನೈಜೀರಿಯನ್ ರ್ಯಾಪರ್ ರೆಮಾ, ಮಾಜಿ ಯುಕೆ ಪ್ರಧಾನಿ ಟೋನಿ ಬ್ಲೇರ್, ಸೌದಿ ಅರಾಮ್ಕೊ ಸಿಇಒ ಅಮೀನ್ ನಾಸರ್, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಜೇ ಲೀ ಮತ್ತು ಡ್ರಗ್ ಮೇಜರ್ ಜಿಎಸ್‌ಕೆ ಸೇರಿದಂತೆ ಗಣ್ಯರು ಹಾಜರಿದ್ದರು.