ಇಂದು ಕನ್ನಡ ಚಿತ್ರಗಳ ಪಾಲಿಗೆ ಸಂಭ್ರಮವೆಂಬುದು ವಾರ, ತಿಂಗಳ ಸುತ್ತ ಬಂಧಿಯಾಗಿರೋ ಕಾಲಮಾನ. ಇಂಥಾ ಹೊತ್ತಿನಲ್ಲಿ ಸಿನಿಮಾವೊಂದು ಯಶಸ್ವಿಯಾಗಿ 25  ಪೂರೈಸೋದೇ ಕನಸಿನ ಮಾತು ಎನ್ನುವ ವಾತಾವರಣವಿದೆ. ಇಂತಹ ವಾತಾವರಣದಲ್ಲಿ ಸಿನಿಮಾವೊಂದು ಯಶಸ್ವಿಯಾಗಿ 25 ದಿನದ ಸಂಭ್ರಮಾಚರಣೆಗೆ ಸಾಕ್ಷಿಯಾಗುತ್ತದೆ ಎಂದರೆ ಅಚ್ಚರಿಯಾಗದಿರಲು ಸಾಧ್ಯವೇ? ಅಂಥಾದ್ದೊಂದು ಅಚ್ಚರಿಯ ಬೆಳವಣಿಗೆಗೆ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಸಾಕ್ಷಿಯಾಗಿದೆ.


COMMERCIAL BREAK
SCROLL TO CONTINUE READING

ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ನಟನೆಯ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಚಿತ್ರತಂಡ ಈ ಸಂಭ್ರಮವನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿನಿಮಾ ಯಶಸ್ಸಿಗೆ ಕಾರಣರಾದ ಇಡೀ ಚಿತ್ರತಂಡ ಮೂಮೆಂಟೋ ನೀಡಿ ಗೌರವ ಸಲ್ಲಿಸಲಾಯಿತು.


ಇದನ್ನೂ ಓದಿ:  ಸಾಲು ಸಾಲು ಹಿಟ್ ಸಿನಿಮಾ ನೀಡಿದರೂ ಮೊದಲ ಪ್ರೇಮದಲ್ಲೇ ಸೋಲು! ಮನದ ನೋವನ್ನು ಮೆಟ್ಟಿ ನಿಂತ ಈ ಬೆಡಗಿ


ಬಳಿಕ ಮಾತನಾಡಿದ ನಿರ್ಮಾಪಕ ನವೀನ್ ರಾವ್, ಪ್ರಾರಂಭದ ದಿನದಲ್ಲೆ ಬಹುತೇಕ ಕಡೆ ನಮ್ಮ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಪರಭಾಷಾ ಸಿನಿಮಾಗಳ ಅಬ್ಬರದ ನಡುವೆ ಫಾರ್ ರಿಜಿಸ್ಟ್ರೇಷನ್ ಸಿನಿಮಾ 25 ದಿನ ಪೂರೈಸಿದೆ. ನಮ್ಮ ಮೊದಲ ಸಿನಿಮಾಗೆ ಎಲ್ಲೆಡೆಯಿಂದ ಬೆಂಬಲ ಸಿಕ್ಕಿದೆ. ಚಿತ್ರ ಗೆದ್ದಿರುವುದು ಖುಷಿ ಕೊಟ್ಟಿದೆ ಎಂದರು.


ನಿರ್ದೇಶಕ ನವೀನ್ ದ್ವಾರಕನಾಥ್, ನನ್ನ ಮೊದಲ ಕನಸಿಗೆ ನವೀನ್ ಜೊತೆಯಾದರು. ನಾವು ಏನೇ ಕಥೆ ಬರೆದರು. ಕಥೆಗೆ ರೂಪ ಕೊಡುವುದು ಪಾತ್ರಧಾರಿಗಳು. ಅದರಂತೆ ಇಡೀ ತಂಡ ನಮ್ಮ ಪಯಣಕ್ಕೆ ಜೊತೆಯಾಗಿ ನಿಂತಿದೆ. ನಮ್ಮ ಕನಸು ಇಂದು ನನಸಾಗಿದೆ. ಪಿಕ್ಚರ್ ಮಾಡುವುದು ಮುಖ್ಯವಲ್ಲ. ರಿಲೀಸ್ ಮಾಡುವುದು ಎಷ್ಟು ಮುಖ್ಯ ಎನ್ನುವುದು ಅರ್ಥ ಆಗಿದೆ. ಜೂನ್ ನಲ್ಲಿ ಸಿನಿಮಾ ತೆಲುಗಿಗೆ ಡಬ್ ಆಗಲಿದೆ. 25 ದಿನ ಸೆಲೆಬ್ರೆಟ್ ಮಾಡುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಈಗ ಖುಷಿಯಾಗುತ್ತಿದೆ ಎಂದು ಸಂತಸ ಹಂಚಿಕೊಂಡರು.


ನಟ ಪೃಥ್ವಿ ಅಂಬರ್ ಮಾತನಾಡಿ, ಸಿನಿಮಾ ಗೆದ್ದಿರುವುದು ತುಂಬಾ ಖುಷಿ ಇದೆ. ಇದೊಂದು ದೊಡ್ಡ ಜರ್ನಿ. ನಿರ್ದೇಶಕರು ನಿರ್ಮಾಪಕರು ಇಬ್ಬರು ಫ್ಯಾಷನೇಟೇಡ್. ಇಬ್ಬರು ಇದೇ ರೀತಿ ಮುಂದೆ ಸಾಗಲಿ. ನಿಮ್ಮ ಮುಂದಿನ ಸಿನಿಮಾ 100 ದಿನ ಆಚರಣೆ ಮಾಡುವಂತೆ ಆಗಲಿದೆ ಎಂದು ಹಾರೈಸಿದರು.


ಸಂಬಂಧ ಹಾಗೂ ಭಾವನಾತ್ಮಕ ಎಳೆಯನ್ನು ಒಳಗೊಂಡು ಫಾರ್ ರಿಜಿಸ್ಟ್ರೇಷನ್ ಸಿನಿಮಾಗೆ ನವೀನ್ ದ್ವಾರಕನಾಥ್ ಆಕ್ಷನ್ ಕಟ್ ಹೇಳಿದ್ದರು. ಮೊದಲ ಸಿನಿಮಾದಲ್ಲಿಯೇ ಒಂದೊಳ್ಳೆ ಕಥೆ ಮೂಲಕ  ನವೀನ್ ಗೆದ್ದಿದ್ದಾರೆ. ನವೀನ್ ಕನಸಿಗೆ ಅವರ ಗೆಳೆಯರಾದ ನವೀನ್ ರಾವ್ ಸಾಥ್ ಕೊಟ್ಟಿದ್ದರು. ಫಾರ್ ರಿಜಿಸ್ಟ್ರೇಷನ್ ಚಿತ್ರಕ್ಕೆ ನವೀನ್ ರಾವ್ ಹಣ ಹಾಕುವ ಮೂಲಕ ಗೆಳೆಯನ ಚೊಚ್ಚಲ ಪ್ರಯತ್ನಕ್ಕೆ ಬೆನ್ನುಲುಬಾಗಿ ನಿಂತಿದ್ದರು.


ಥಿಯೇಟರ್ ನಲ್ಲಿ ಅದ್ಭುತ ಪ್ರದರ್ಶನ ಕಂಡಿರುವ ಫಾರ್ ರಿಜಿಸ್ಟ್ರೇಷನ್ ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕು ಖರೀದಿ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗಲಿದೆ. ಮೊದಲ ಪ್ರಯತ್ನದಲ್ಲಿಯೇ ಗೆದ್ದಿರುವ ನಿರ್ದೇಶಕ ನವೀನ್ ದ್ವಾರಕನಾಥ್ ಅವರು ಈಗಾಗಲೇ ಮೂರು ಕಥೆಗಳನ್ನು ರೆಡಿ ಮಾಡಿದ್ದು, ಒಂದಷ್ಟು ನಿರ್ಮಾಪಕರು ಅಪ್ರೋಚ್ ಆಗಿದ್ದಾರೆ.


ಇದನ್ನೂ ಓದಿ:ಮುರಿದುಬಿತ್ತು 14 ವರ್ಷಗಳ ಒಡನಾಟ! ಮುಂಬೈ ಇಂಡಿಯನ್ಸ್ ತೊರೆದು ಈ ತಂಡ ಸೇರಲು ರೋಹಿತ್ ಶರ್ಮಾ ನಿರ್ಧಾರ!


ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ತಾರಾಬಗಳಗದಲ್ಲಿದ್ದಾರೆ. ಚಿತ್ರದ ಚಿತ್ರಕಥೆ, ನಿರ್ದೇಶನ ನವೀನ್ ದ್ವಾರಕನಾಥ್, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ